ರೈತರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ರೈತರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ  Demand for action against officials who fail to respond to farmers' issues

ಇಂಡಿ ಸೆ. 6: ರೈತರು ದೇಶದ ಬೆನ್ನೆಲುಬಾಗಿದ್ದು, ರೈತರ ಸಮಸ್ಯೆಗಳಿಗೆ ಸದಾ ಸ್ಪಂದಿಸುವುದು ಸರ್ಕಾರ ಮತ್ತು ಅಧಿಕಾರಿಗಳ ಕರ್ತವ್ಯ. ರೈತರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಇಂಡಿ ತಾಲ್ಲೂಕಿನ ತಡವಲಗಾ, ಗಣವಲಗಾ, ನಿಂಬಾಳ ಹಾಗೂ ಲಿಂಗದಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ರೈತರಿಗೆ ರಾತ್ರಿ ವೇಳೆ ಸಮರ​‍್ಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ವಿಶೇಷವಾಗಿ ತೋಟದ ವಸತಿಗಳಲ್ಲಿ ವಾಸಿಸುವ ರೈತರಿಗೆ ರಾತ್ರಿ 6 ಗಂಟೆಯಿಂದ ಕೇವಲ 2 ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.  

ರಾತ್ರಿ ವೇಳೆ ವಿದ್ಯುತ್ ಇಲ್ಲದ ಕಾರಣ ಹಾವು, ಚಿರತೆ, ಆನೆ ಸೇರಿದಂತೆ ವಿಷಜಂತುಗಳು ಹಾಗೂ ಕಾಡುಪ್ರಾಣಿಗಳ ದಾಳಿಗೆ ರೈತರು ಒಳಗಾಗುತ್ತಿರುವ ಹಲವು ಘಟನೆಗಳು ಕಂಡುಬಂದಿವೆ. ಪರ್ಯಾಯ ವ್ಯವಸ್ಥೆಯಾಗಿ ಸೋಲಾರ್ ದೀಪ, ಇನ್ವರ್ಟರ್ ಅಥವಾ ಯುಪಿಎಸ್ ಖರೀದಿಸಲು ಬಡ ರೈತರಿಗೆ ಆರ್ಥಿಕ ಸಾಮರ್ಥ್ಯವೂ ಇಲ್ಲ.  

ವಿದ್ಯುತ್ ಸಮಸ್ಯೆ ಕುರಿತು ಹೆಸ್ಕಾಂ ಟೋಲ್‌ಫ್ರೀ ಸಂಖ್ಯೆಗೆ ಕರೆ ಮಾಡಿದರೂ ‘ರಾಂಗ್ ನಂಬರ್‌’ ಎಂದು ಹೇಳುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಗ್ರಾಮೀಣ ಪ್ರದೇಶಗಳಿಗೆ ಸಮರ​‍್ಕ ಹಾಗೂ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.