ಬೇಕಾಬಿಟ್ಟಿ ಟಿಪ್ಪರ ವಾಹನ ಚಾಲನೆ ಮಾಡುತ್ತಿರುವ ಚಾಲಕರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ; ಮುತ್ತಣ್ಣ ಹಕ್ಕಲ್ ಪೊಲೀಸರಿಗೆ ದೂರು

ಕುಷ್ಟಗಿ11:  ಪಟ್ಟಣದ ಕೊಪ್ಪಳ ರಸ್ತೆಯ ಉದ್ದಕ್ಕೂ ಬೃಹತ್ ಗಾತ್ರದ ಹಾಗೂ ಟಿಪ್ಪರ ವಾಹನಗಳ  ಚಾಲನೆ ಮಾಡುತ್ತಿರುವ ವಾಹನ ಚಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಬೇಕಾಬಿಟ್ಟಿ ಓಡಾಡುವ ವಾಹನಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಸಮಾಜ ಸೇವಕ ಮುತ್ತಣ್ಣ ಹಕ್ಕಲ್ ಮಂಗಳವಾರ ಬೆಳಗ್ಗೆ ಸ್ಥಳೀಯ ಪೊಲೀಸ್ ಠಾಣೆಯ ಸಿಪಿಐ ಹಾಗೂ ಪಿಎಸ್ ಐ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.  ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊಪ್ಪಳ ರಸ್ತೆ ಬಳಿ ನಡೆಯುತ್ತಿರುವ   

ರೈಲ್ವೆ ಕಾಮಗಾರಿ ಹಾಗೂ ವಿಂಡಪವರ್ ಮತ್ತು ಸುಜಲಾನ್  ವಿದ್ಯುತ್ ಪ್ಯಾನ್ ಕಂಪನಿಗಳು ತಾಲೂಕಿನ ವಿವಿಧಡೆ ನಡೆಯಿತ್ತಿರುವ ಕಾಮಗಾರಿಗಳಿಗೆ ಮಣ್ಣು ಸೇರಿದಂತೆ ಇನ್ನಿತರೆ ಬೃಹತ್ ಗಾತ್ರದ ವಸ್ತುಗಳನ್ನು ತುಂಬಿಕೊಂಡು ಒಡಾಡುತ್ತಿರುವ ವಾಹನಗಳು ಮತ್ತು ಟಿಪ್ಪರಗಳು ಚಾಲಕರು ಯಾವುದೇ ತರಹದ ರಸ್ತೆ ನಿಯಮಗಳನ್ನು ಪಾಲಿಸಿದೇ ಮನಸ್ಸಾ ಇಚ್ಛೆಯಿಂತೆ ವಾಹನ ಚಲಾವಣೆ, ಮಾಡುತ್ತಿದ್ದು, ಇದೇ ರಸ್ತೆಯಲ್ಲಿ ಚಲಿಸುವ ರೈತರು ಹಾಗೂ ದನ, ಕರುಗಳು ಹಾಗೂ ಕುರಿಗಳು, ಮತ್ತು ಸಾರ್ವಜನಿಕರ ಓಡಾಟದ ಅರಿವು ಇಲ್ಲದೇ ತಮಗೆ ಇಚ್ಚೆ ಬಂದಾಹಾಗೇ ವಾಹನಗಳನ್ನು ಚಲಾಯಿಸುತ್ತಿದ್ದಾರೆ.  

ಕೆಲವು ದಿನಗಳ ಹಿಂದೆ ಇದೇ ರಸ್ತೆಯಲ್ಲಿ ಬೆಳಗಿನ ಜಾವ ವ್ಯಾಯು ವಿಹಾರ ಮಾಡುತ್ತಿದ್ದ ಸಾರ್ವಜನಿಕನ ಮೇಲೆ ಟಿಪ್ಪರ್ ಚಲಾಯಿಸಿ ಪ್ರಾಣ ಹಾನಿಯಾಗಿ ಬಹಳ ದಿನಗಳು ಕಳೆದಿಲ್ಲಾ. ಆದರೂ ಇದರ ಅರಿವು ಇಲ್ಲದೇಟಿಪ್ಪರಗಳನ್ನು ಬೇಕಾಬಿಟ್ಟಿಯಾಗಿ ಚಲಾಯಿಸುತ್ತಿದ್ದಾರೆ.  

ಇವರುಗಳಿಂದ ಕೊಪ್ಪಳ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳು ವ್ಯವಾಸಾಯ ಮಾಡುವ ರೈತಾಪಿ ವರ್ಗದ ಜನರ ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಜೀವನ ನಡೆಸುವ ಪರಿಸ್ಥಿತಿ ಎದುರಾಗಿದೆ ಕಾರಣ ತಾವುಗಳು ಈ ಬಗ್ಗೆ ಕೂಡಲೇ ಗಮನ ಹರಿಸಿ ಮುಂದಿನ ದಿನಗಳಲ್ಲಿ ಸಂಭವಿಸುವ ಅನಾಹುತಗಳನ್ನು ತಪ್ಪಿಸಿ ಟಿಪ್ಪರ ಚಾಲಕರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ದೂರಿನಲ್ಲಿ ಒತ್ತಾಯಿಸಿದ್ದಾರೆ.