ಮಹಲಿಂಗಪುರ

ದಲಿತ ಮುಖಂಡರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ- ದಲಿತ ಒಕ್ಕೂಟದ ಒತ್ತಾಯ

ದಲಿತ ಮುಖಂಡರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ- ದಲಿತ ಒಕ್ಕೂಟದ ಒತ್ತಾಯ

ಲೋಕದರ್ಶನ ವರದಿ 

ಮಹಾಲಿಂಗಪುರ 30 :  ಮುಂಬರುವ ನೂತನ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ, ದಲಿತ ಸಮುದಾಯದ ಹಿರಿಯ ರಾಜಕಾರಣಿಗಳಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಶನಿವಾರ ದಿವಸ ಪಟ್ಟಣದ ಜಿಎಲ್ ಬಿಸಿ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಲಿತ ಒಕ್ಕೂಟ ಮುಖಂಡರು ಕಾಂಗ್ರೆಸ್ ಹೈಕಮಾಂಡವನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಹಾಲಿಂಗಪುರ ಪಟ್ಟಣದ ದಲಿತ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಅರ್ಜುನ್ ದೊಡಮನಿ, ವಿಠ್ಠಲ ಹೊಸಮನಿ ಮಾತನಾಡಿ, ಸ್ವಾತಂತ್ರ್ಯ ನಂತರ ದೇಶದ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ತೋರಿದವರು ದೇಶದ ಒಟ್ಟು ಮತದಾರರಲ್ಲಿಯ ಅರ್ಧಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿರುವ ದಲಿತರು, ಹಿಂದುಳಿದ ಮತ್ತು ಅಲ್ಪಸಂಖ್ಯಾತರು.  

ಈ ವರ್ಗದಲ್ಲಿರುವಂತ ಮಾದರ ಸಮುದಾಯಕ್ಕೆ ಇಲ್ಲಿಯವರೆಗೆ ಕೇಂದ್ರ ಅಥವಾ ರಾಜ್ಯ ಆಡಳಿತದಲ್ಲಿ ಹೆಚ್ಚಿನ ಪ್ರಾಶಸ್ತ್ಯ ದೊರಕದೆ ಇರುವುದು ಬೇಸರದ ಸಂಗತಿ. ಮೊನ್ನೆ ಸಿಎಂ ಸಿದ್ಧರಾಮಯ್ಯ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮುಂದಿನ ನಾಯಕತ್ವದಲ್ಲಿ ನೂತನ ಸರಕಾರಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿರುವುದರಿಂದ ರಾಜ್ಯ ರಾಜಕಾರಣದಲ್ಲಿ ಹೊಸ ಪ್ರಕ್ರಿಯೆಗಳು ಗರಿಗೆದರಿವೆ. 

ಇದೊಂದು ಸಮುದಾಯಕ್ಕೆ ಸಕಾಲವಾಗಿರುವುದರಿಂದ ಆದ್ದರಿಂದ ಪ್ರಸ್ತುತ ಅಬಕಾರಿ ಸಚಿವ ಆರ್‌. ಬಿ. ತಿಮ್ಮಾಪುರ, ಹಿರಿಯ ರಾಜಕಾರಣಿ ಮತ್ತು ಮಾಜಿ ಕೇಂದ್ರ ಮಂತ್ರಿ ಕೆ.ಎಚ್‌.ಮುನಿಯಪ್ಪ ಹಾಗೂ ಇನ್ನೋರ್ವ ಹಿರಿಯ ಮುತ್ಸದ್ದಿ ರಾಜಕಾರಣಿ ಎಚ್‌.ಆಂಜನೇಯ ಇವರುಗಳಲ್ಲೊಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಿದರೆ ಅದೆ ನಮ್ಮ ಸಮುದಾಯಕ್ಕೆ ತಾವು ನೀಡುವಂತ ಗೌರವವಾಗಿದೆ ಎಂದು ಹೈಕಮಾಂಡ್ ಕ್ಕೆ ತಿಳಿಸಿದರು. 

ಮಾದರ ಪಂಗಡದ ಲಕ್ಷ್ಮಣ ಮಾಂಗ, ಪರಶುರಾಮ ಮೇತ್ರಿ, ಎಂ.ಡಿ. ಆನಂದ, ಪಾತ್ರೋಟ ಸಮಾಜದ ರಾಮು ಪಾತ್ರೋಟ ಮಾತನಾಡಿ, ನಮ್ಮ ದಲಿತರ ವೋಟ್ ಗಳು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಮತ್ತೊಂದು ಪಕ್ಷಕ್ಕೆ ಹೋಗುವುದಿಲ್ಲ, ಇಷ್ಟೊಂದು ಪ್ರಾಮಾಣಿಕವಾಗಿ ನಡೆದುಕ್ಕೊಳ್ಳುವ ನಮ್ಮ ಜನಾಂಗದ ಹಿರಿಯ ರಾಜಕಾರಣಿಗಳಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ ಪಕ್ಷ ನಿಷ್ಠೆಗೆ ಬೆಲೆ ಕೊಡಬೇಕೆಂದು ಕಾಂಗ್ರೆಸ್ ಪಕ್ಷವನ್ನು ಆಗ್ರಹಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ರಾಘು ಅನೆಪ್ಪಗೋಳ, ಶ್ರೀಶೈಲ ದೊಡಮನಿ, ಹಣ್ಮಂತ ಬಂಡಿವಡ್ಡರ, ಅಶೋಕ ಕೆಳಗಡೆ, ವಿಷ್ಣು ಗಾಡೆಕರ, ಪುಟ್ಟಪ್ಪ ಪೂಜಾರಿ, ಮಹಾದೇವ ಮುಗಳಖೋಡ, ಕಲ್ಮೇಶ ಅಮ್ಮನಗೋಳ, ರವಿ ಕರಿಶೆಟ್ಟಿ, ಶಶಿ ಮುಖ್ಯೆನ್ನವರ, ಬಸವರಾಜ ಮಾವಿನಹಿಂಡಿ, ಬಸು ಮಾಂಗ,ಗೋಪಾಲ ಮಾಂಗ, ಚೆನ್ನಪ್ಪ ಮುಖ್ಯೆನ್ನವರ, ಶೆಟ್ಟೆಪ್ಪ ತೆಳಗಡೆ, ಜಗ್ಗು ಮಾವಿನಹಿಂಡಿ, ಸಂಗಮೇಶ ಮಾದರ, ಸಂಗಮೇಶ ಮಾದರ, ಸಿಂಧೂರ ಹಲಸಪ್ಪಗೋಳ ಇನ್ನೂ ಹಲವರಿದ್ದರು. 


ಸುದ್ದಿ ಓದಿ