ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರ ಉದ್ಘಾಟಿಸಿ ಡಿಡಿಪಿಐ ವೆಂಕಟೇಶ್
DDPI Venkatesh inaugurates state award examination camp
ವಿಜಯನಗರ(ಹೊಸಪೇಟೆ)03: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಸ್ವಯಂಶಿಸ್ತು ಮೈಗೂಡಿಸುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಹಾಗೂ ಭಾರತ್ ಸ್ಕೌಟ್ಸ್-ಗೈಡ್ ಜಿಲ್ಲಾ ಮುಖ್ಯ ಆಯುಕ್ತ ವೆಂಕಟೇಶ್ ರಾಮಚಂದ್ರ್ಪ ಹೇಳಿದರು.
ನಗರದ ಸುರಭಿ ವಿದ್ಯಾನಿಕೇತನ ಶಾಲೆ-ಕಾಲೇಜು ಹೊಸೂರಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಹಾಗೂ ಜಿಲ್ಲಾ ಸಂಸ್ಥೆ ವಿಜಯನಗರ ಹಾಗೂ ಸುರಭಿ ವಿದ್ಯಾನಿಕೇತನ ಶಾಲೆ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ರಾಜ್ಯ ಪುರಸ್ಕಾರ ಪರೀಕ್ಷೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಅತ್ಯುನ್ನತ ಪರೀಕ್ಷೆಯಾದ ರಾಜ್ಯ ಪುರಸ್ಕಾರ ಪರೀಕ್ಷೆಯನ್ನು ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ನಾಣ್ನುಡಿಯಂತೆ, ಮಕ್ಕಳು ದೇಶಕ್ಕೆ ಕೊಡುಗೆ ನೀಡುವ ಉತ್ತಮ ಪ್ರಜೆಗಳಾಗಬೇಕು. ಬಾಲ್ಯದಿಂದಲೇ ಮಕ್ಕಳಿಗೆ ಸ್ಕೌಟ್-ಗೈಡ್ ಸಂಸ್ಥೆಯು ಚಟುವಟಿಕೆ, ಶಿಬಿರಗಳ ಮೂಲಕ ಸರ್ವಾಂಗೀಣ ಬದುಕು ಕಟ್ಟಿಕೊಳ್ಳುವುದನ್ನು ಕಲಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಶೇಖರ್ಪ ಹೊರಪೇಟೆ ಮಾತನಾಡಿ, ಮಕ್ಕಳು ಪಠ್ಯ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಲಿಷ್ಠರಾಗಲು ಸಾಧ್ಯವಾಗುತ್ತದೆ. ಸ್ಕೌಟ್ಸ್-ಗೈಡ್ಸ್ ಕೆಲವು ಸಾಹಸಮಯ ಚಟುವಟಿಕೆಗಳು, ಶಿಬಿರಗಳು ಮಕ್ಕಳನ್ನು ಧೈರ್ಯವಂತರನ್ನಾಗಿಸುತ್ತದೆ.
ಈ ವೇಳೆ ಶಾಲೆಯ ಆಡಳಿತಾಧಿಕಾರಿ ಶ್ರೀಧರ್, ಸಂಸ್ಥೆಯ ಉಪಾಧ್ಯಕ್ಷೆ ಕಮಲಾ ದೀಕ್ಷಿತ್, ಸ್ಕೌಟ್ಸ್ನ ಜಿಲ್ಲಾ ಆಯುಕ್ತರು ಎಲ್.ಬಸವರಾಜ್, ಗೈಡ್ನ ಜಿಲ್ಲಾ ಆಯುಕ್ತರು ಪಿ.ಸುನಂದ, ಜಿಲ್ಲಾ ಕಾರ್ಯದರ್ಶಿ ಕೆ.ರಾಜಶೇಖರ, ಜಿಲ್ಲಾ ಜಂಟಿ ಕಾರ್ಯದರ್ಶಿ ಅಕ್ಕಮಹಾದೇವಿ, ಶಿಬಿರದ ನಾಯಕರಾದ ನಾಗರಾಜ್, ಅಕ್ಕಮಹಾದೇವಿ, ಜಿಲ್ಲಾ ತರಬೇತಿ ಆಯುಕ್ತೆ ಎ.ರೇಣುಕಾ, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ತಿಪ್ಪೇಸ್ವಾಮಿ, ನಟರಾಜ್, ಜಿಲ್ಲಾ ಸಂಘಟಕ ಪಾಟೀಲ್ ಜಿಬಿಸಿ, ಶರೀಪ್ ಹತ್ತಿಮತ್ತೂರ ಇತರರು ಭಾಗವಹಿಸಿದ್ದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 