ಅಭಿವೃದ್ಧಿ ನೆಪದಲ್ಲಿ ಗಿಡಗಳ ಮಾರಣ ಹೋಮ ಸಲ್ಲದು

ಹುಬ್ಬಳ್ಳಿ-ಧಾರವಾಡ 09: ಇತ್ತಿಚಿಗೆ ಮಹಾನಗರದಲ್ಲಿ ಅಭಿವೃದ್ಧಿ ನೆಪದಲ್ಲಿ ಗಿಡ ಕಡೆಯುವುದು ಜಾಸ್ತಿ ಆಗಿದೆ. ಈಗ ಕಲಘಟಗಿ ಟೋಲ್ ನಾಕಾದಿಂದ ನುಗ್ಗಿಕೆರೆಯವರಿಗೆ  ಅನೇಕ ಗಿಡಗಳನ್ನು ತೆಗೆಯುವುದು ನಿರ್ಣಯವಾಗಿದೆ ಎಂದು ನಮಗೆ ತಿಳಿದು ಬಂದಿದೆ. ಅಲ್ಲದೆ ಈ ವರ್ಷ ಎಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಅದರ ಪಕ್ಕದಲ್ಲಿ ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆ ಉತ್ತಮ ವಾದ ಗಿಡಗಳನ್ನು ನೆಡುವ ಕಾರ್ಯ ಆಗಬೇಕು. ನಗರ ಪ್ರದೇಶದಲ್ಲಿ ಅರಣ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆಗಳಿಂದ ನಿರಂತರವಾಗಿ ಗಿಡಗಳ ಮಾರಣ ಹೋಮ ನಡೀತಾ ಇದೆ. ಇದರ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದರು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಟೊಂಗೆ ಕಡೆಯಲು ಪರವಾನಿಗೆ ಇದ್ದರೆ ಇಡಿ ಮರವನ್ನು ತಗೆಯುತ್ತಾರೆ. ಮರಗಳನ್ನು ಕಡಿಯಲು ಅನವಶ್ಯಕವಾಗಿ ಪರವಾನಗಿ ಕೊಡಬೇಡಿ. ತೀರಾ ಅವಶ್ಯಕತೆ ಇದ್ದರೆ ಜೀವಕ್ಕೆ ಅಪಾಯ ಆಗುವದಿದ್ದರೆ ಟೊಂಗೆಗಳನ್ನು ತಗೆಯಲು ಮಾತ್ರ ಪರವಾನಿಗೆ ಕೊಡಬಹುದು. ಈಗ ಇದ್ದ ಗಿಡಗಳನ್ನು ಕಡೆಯದೆ ಅವುಗಳನ್ನು ಉಳಿಸಿಕೊಂಡು ರಸ್ತೆ ಅಭಿವೃದ್ಧಿ ಮಾಡಬೇಕೆಂದು ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿಯಿಂದ ಧಾರವಾಡದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳಾದ ಶ್ರೀ ವಿ. ಡಿ. ಕವರಿ ಅವರನ್ನು  ಭೇಟ್ಟಿಯಾಗಿ ಮನವಿ ಸಲ್ಲಿಸಿ ಮರಗಳ ಮಾರಣ ಹೋಮ ಆಗದಂತೆ ನೋಡಿಕೊಳ್ಳುವದು ಬಹಳ ಅವಶ್ಯ ತಾವು ಇದರ ಬಗ್ಗೆ  ತೀವ್ರ ನಿಗಾ  ಇಡಬೇಕು  ಎಂದು ಒತ್ತಾಯಿಸಲಾಯಿತು.  

ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳಾದ ವಿ. ಡಿ. ಕವರಿ ಅವರು ಇದೇ ಸಂದರ್ಭದಲ್ಲಿ  ಮಾತನಾಡಿ ತಾವು ನೀಡಿರುವ ಸಲಹೆ ಸೂಚನೆಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವೆ ಎಂದು ಆಶ್ವಾಸನೆ ನೀಡಿದರು.  

ನಿಯೋಗದಲ್ಲಿ ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿಯ ಅಧ್ಯಕ್ಷ ಶಂಕರ ಕುಂಬಿ, ಸದಸ್ಯರಾದ ಡಾ. ವಿಲಾಸ ಕುಲಕರ್ಣಿ. ಆಯ್ ಎಲ್ ಪಾಟೀಲ. ಎಸ್ ಎನ್  ಕುಲಕರ್ಣಿ. ಕೆ ಎಸ್ ಪಾಟೀಲ. ಡಾ. ಮಲ್ಲಿಕಾರ್ಜುನ ತರ್ಲಘಟ್ಟ. ಡಾ. ಜಗದೀಶ ಗುಡಗೂರ. ಶ್ರೀನಿವಾಸ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.