ಗ್ರಾಹಕರ ಸಭೆ: ಸಾಧಕರಿಗೆ ಸನ್ಮಾನ

ಹುಕ್ಕೇರಿ 30: ಅರ್ಬನ್ ಕೋ ಆಪರೇಟಿವ್ ಬ್ಯಾಂಕಿಗೆ ಜಿಲ್ಲಾ ಅತ್ಯುತ್ತಮ ಸಹಕಾರಿ ಬ್ಯಾಂಕ್ ಪ್ರಶಸ್ತಿ ಗೌರವ ಹಿನ್ನಲೆಯಲ್ಲಿ ಗ್ರಾಹಕರ ಸಭೆ ಜರುಗಿತು. 

ಶತಮಾನೋತ್ಸವದ ಸಂಭ್ರಮದಲ್ಲಿರುವ ಹುಕ್ಕೇರಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಗೆ ಜಿಲ್ಲಾ ಅತ್ಯುತ್ತಮ ಸಹಕಾರಿ ಬ್ಯಾಂಕ್ ಪ್ರಶಸ್ತಿಗೆ ದೊರಕಿದ ನಿಮಿತ್ಯ ಆಡಳಿತ ಮಂಡಳಿಯಿಂದ ಗ್ರಾಹಕರ ಮತ್ತು ಸಿಬ್ಬಂದಿಗಳ ಸತ್ಕಾರ ಕಾರ್ಯಕ್ರಮ ಜರುಗಿತು. 

ಇತ್ತೀಚೆಗೆ ಬೆಳಗಾವಿ ಜಿಲ್ಲಾ ಪಟ್ಟಣ ಹಾಗೂ ಸೌಹಾರ್ದ ಸಹಕಾರಿ ಬ್ಯಾಂಕ್ ಒಕ್ಕೂಟದ ಸರ್ವಸಾಧರಣಾ ಸಭೆಯಲ್ಲಿ 2022- 23ನೇ ಸಾಲಿನಲ್ಲಿ 51 ರಿಂದ 100 ಕೋಟಿ ರೂಪಾಯಿ ಒಳಗಿನ ಠೇವು ಸಂಗ್ರಹಣೆ ಹಿನ್ನೆಲೆಯಲ್ಲಿ ಬ್ಯಾಂಕಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.  

ಅಧ್ಯಕ್ಷ ಜಯಗೌಡಾ ಪಾಟೀಲ ಮತ್ತು ನಿರ್ದೇಶಕ ವಿಜಯ ರವದಿ ಮಾತನಾಡಿ ಹಲವಾರು ಏರಿಳಿತಗಳ ಮಧ್ಯೆ ಈ ಸಾಧನೆ ಮಾಡಿದ್ದು ಸಂತಸ ಹೆಚ್ಚಿಸಿದೆ. ಈ ಶ್ರೇಯಸ್ಸಿಗೆ ಹಿಂದಿನ ಹಾಗೂ ಈಗಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯ ನಿಸ್ವಾರ್ಥ ಸೇವೆ ಕಾರಣ. ಠೇವಣಿದಾರರು ಮತ್ತು ಬ್ಯಾಂಕಿನ ಗ್ರಾಹಕರ ಪ್ರಾಮಾಣಿಕತೆ ವಿಶ್ವಾಸದ ವ್ಯವಹಾರದಿಂದ ಪ್ರಶಸ್ತಿ ಲಭಿಸಿದೆ ಎಂದರು. ಬ್ಯಾಂಕ್ ಆದ್ಯತಾ ವಲಯದಡಿ ರೈತ ಬಾಂಧವರ ಅವಶ್ಯಕತೆಗೆ ಅನುಗುಣವಾಗಿ ಸಾಲ ನೀಡುತ್ತ ಬಂದಿದೆ.ಇದರ ಜತೆಗೆ ಸಾಲ ಮರು ವಸೂಲಾತಿ, ಠೇವಣಿ ಸಂಗ್ರಹಣೆ ಸಾಲ ನೀಡಿಕೆ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಗಮನಾರ್ಹ ಸಾಧನೆ ಸಾಧಿಸಿದ್ದರಿಂದ ಪ್ರಶಸ್ತಿಗೆ ಭಾಜನರಾಗಿದ್ದೇವೆಂದರು.  

ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಶೈಲಜಾ ಬಿ.ವ್ಹಿ ಉಪನ್ಯಾಸ ನೀಡಿದರು. ಮಾಜಿ ನಿರ್ದೇಶಕರು ಮತ್ತು ಸಿಬ್ಬಂದಿಗಳನ್ನು ಸತ್ಕರಿಸಿದರು.  

ಉಪಾಧ್ಯಕ್ಷೆ ಮಂಗಲಾ ಹಂದಿಗುಂದ, ನಿರ್ದೇಶಕರಾದ ಜಿ.ಆಯ್‌.ಗಂಧ, ಸಿ. ಎಮ್‌.ಪಾಟೀಲ, ಮೌನೇಶ್ವರ ಪೋತದಾರ, ಶಿವಾನಂದ ನೂಲಿ, ಸಿದ್ದಣ್ಣಾ ಹೆದ್ದೂರಶೆಟ್ಟಿ, ಸೋಮಣ್ಣಾ ಪಟ್ಟಣಶೆಟ್ಟಿ, ರಾಜಕುಮಾರ ಬಾಗಲಕೋಟಿ, ರಾಜು ಘಸ್ತಿ, ಮಗದುಮ್ಮ, ನಿವೃತ್ತ ವ್ಯವಸ್ಥಾಪಕ ಆರಿ​‍್ಸ.ಪಟ್ಟಣಶೆಟ್ಟಿ, ವಿಜಯಕುಮಾರ ಕಲ್ಯಾಣಿ, ಬಸವರಾಜ ಶಿಂತ್ರಿ, ಬಾಬುರಾವ ಬೆನಿವಾಡೆ ಮತ್ತಿತರರಿದ್ದರು. 

ವ್ಯವಸ್ಥಾಪಕ ಕೆ.ಬಿ.ಬಂದಾಯಿ ಸ್ವಾಗತಿಸಿ, ನಿರೂಪಿಸಿದರು.