ಸಧ್ಯದಲ್ಲಿ ಕಾರ್ಮಿಕ ಭವನ ನಿರ್ಮಾಣ - ಶಾಸಕ ಕೃಷ್ಣ ನಾಯಕ
ಲೋಕದರ್ಶನ ವರದಿ
ಹೂವಿನಹಡಗಲಿ 22: ಮನೆ, ಬಿಲ್ಡಿಂಗ್ಗಳಲ್ಲಿ ಎಲೆಕ್ನಿಷಿಯನ್ ಮತ್ತು ಪ್ಲಂಬರ್ ಕಾರ್ಮಿಕ ಕೆಲಸವು ಅತ್ಯಂತ ಅಪಾಯಕಾರಿಯಾಗಿದ್ದು, ಸಣ್ಣ ನಿರ್ಲಕ್ಷ್ಯವೂ ಪ್ರಾಣ ತೊರೆಯುವ ಸಾದ್ಯತೆ ಮಧ್ಯ ನಿಮ್ಮ ವೃತ್ತಿ ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಶಾಸಕ ಕೃಷ್ಣ ನಾಯಕ ಮೆಚ್ಚುಗೆ ವ್ಯಕ್ತಪಡಿಸಿದರು. ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ತಾಲೂಕು ಎಲೆಕ್ಟ್ರಿಶಿನ್ ಮತ್ತು ಪ್ಲಂಬರ್ ಕಾರ್ಮಿಕ ರ ಅಸೋಸಿಯೇಷನ್ ಪದಾಧಿಕಾರಿಗಳ ಪದಗ್ರಹಣ ಮತ್ತು ಸಂಘಕ್ಕೆ ಚಾಲನೆ ನೀಡಿ ಮಾತನಾಡಿ ಸದ್ಯದಲ್ಲೇ ಪಟ್ಟಣದಲ್ಲಿ ಕಾರ್ಮಿಕ ಭವನ ನಿರ್ಮಾಣ ಜತೆಗೆ ನಿಮ್ಮ ಸಂಘಟನೆಯ ಸದಸ್ಯನಾಗಿ ನಿಮ್ಮ ಬೇಡಿಕೆಗಳನ್ನು ಈಡೇರಿಸವ ಭರವಸೆ ನೀಡಿದರು. ಸರ್ಕಾರ ಕಾರ್ಮಿಕರಿಗೆ ನೀಡುವ ಕಳಪೆ ಕಿಟ್ ಬಗ್ಗೆ ಬೇಸಾರ ವ್ಯಕ್ತಪಡಿಸಿದರು. ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ. ಮಲ್ಲನಕೇರೆ ಮಠದ ಚನ್ನಬಸವ ಸ್ವಾಮೀಜಿ , ಕೊಂಬಳಿ ಗಾಡಿ ತಾತ ಸಾನಿಧ್ಯ ವಹಿಸಿ ಆಶೀರ್ವಾಚನ ನೀಡಿದರು. ರಾಜ್ಯ ಅದ್ಯಕ್ಷ ಹೆಚ್.ಡಿ.ಉಮೇಶ್, ತಾಲೂಕು ಅದ್ಯಕ್ಷ ಊಳಿಗ ಮಲ್ಲಿಕಾರ್ಜುನ ಸೇರಿದಂತೆ ಪದಾಧಿಕಾರಿಗಳು ಇದ್ದರು.