ಲೋಕದರ್ಶನ ವರದಿ
ಗಜೇಂದ್ರಗಡ 09: ಜಿಲ್ಲೆಯನ್ನು ಆಳಿದ ಸಾಮಂತ ಅರಸರ ಹಾಗೂ ದೇಶಗತ್ತಿಗಳ ಕುರಿತು ಸಮಗ್ರ ಅಧ್ಯಯನ ನಡೆಯಬೇಕು ಎಂದು ಗದಗ ಜಿಲ್ಲಾ ಕಸಾಪ ಮಹಿಳಾ ಘಟಕದ ಪ್ರತಿನಿಧಿ ಮಂಜುಳಾ ಐ. ರೇವಡಿ ಹೇಳಿದರು.
ಪಟ್ಟಣದ ಮೈಸೂರು ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ 152 ವಾರದ ಸಾಹಿತ್ಯ ಚಿಂತನಾಗೋಷ್ಠಿಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇತಿಹಾಸವನ್ನು ಹೆಚ್ಚಿನ ಮಟ್ಟದಲ್ಲಿ ಕಲಿಯುತ್ತ ಹೋದಂತೆ ನಮ್ಮ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಪರಂಪರೆ, ಸಂಸ್ಕೃತಿಯ ಅರಿವು ನಮಗೆ ಮೂಡುತ್ತದೆ. ನಮ್ಮನ್ನು ನಾವು ಯಾರೆಂದು ಅರಿವು ಪಡೆಯಲು, ನಮ್ಮ ವಂಶಜರು ಯಾರೆಂದು ಅರಿತುಕೊಳ್ಳಲು ಸಹಕಾರಿ ಆಗುತ್ತದೆ ಎಂದರು.
ಮರಾಠರು, ನವಾಬರು, ಹೊಯ್ಸಳ, ರಾಷ್ಟ್ರಕೂಟ, ಗಂಗರು, ಪೇಶ್ವೆಗಳು, ಸುಲ್ತಾನರು ಸೇರಿದಂತೆ ನಾನಾ ರಾಜ ಮನೆತನಗಳು ಆಳ್ವಿಕೆ ನಡೆಸಿದ ಗದಗ ಜಿಲ್ಲೆಯಲ್ಲಿ, ದೇವಾಲಯ, ಕೆರೆಕಟ್ಟೆ, ಪುಷ್ಕರಣಿ, ಕೋಟೆ ಕೊತ್ತಲಗಳನ್ನು ನಿಮರ್ಿಸಿ ಭವ್ಯವಾದ ಇತಿಹಾಸದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ, ಅಂತಹ ಐತಿಹಾಸಿಕ ಸ್ಥಳಗಳ ಕುರಿತು ಇಂದಿನ ಪೀಳಿಗೆಗೆ ತಿಳಿಸಬಬೇಕಾದ ಜವಾಬ್ದಾರಿ ನಮ್ಮಮೇಲೆ ಇದೆ ಅದಕ್ಕಾಗಿ ಜನಪ್ರತಿನಿಧಿಗಳು, ರಾಜಕೀಯ ನಾಯಕರು, ಸಮಾಜ ಚಿಂತಕರು, ಇತಿಹಾಸ ತಜ್ಞ ರು, ಐತಿಹಾಸಿಕ ಪಾರಂಪರಿಕ ಸ್ಥಳಗಳ ಅಭಿವೃದ್ಧಿ ಮಾಡಲು ಮುಂದಾಗಬೇಕು ಎಂದರು.
ಗಜೇಂದ್ರಗಡದ ಹಿಂದೊಜೀ ರಾವ್ ಬಿರುದಾಂಕಿತ ಬಹಿರ್ ಜೀ ಘೋರ್ಪಡೆ ವಂಶಜರು ಇಂದಿಗೂ ಇದ್ದಾರೆ. ಮರಾಠಾ ಸಾಮ್ರಾಜ್ಯದ ಸಾಧನೆಯಲ್ಲಿ ಘೋರ್ಪಡೆ ಮನೆತನದ ಕೊಡುಗೆ ಬಹಳ ಇದೆ. ನರಗುಂದದ ಬಾಬಾ ಸಾಹೇಬ್ ಭಾವೆಯವರ ಸ್ವಾತಂತ್ರ್ಯದ ಕಿಚ್ಚು ಇಂದಿನ ಮಕ್ಕಳಿಗೆ ತಿಳಿಯಬೇಕಿದೆ. ಇಟಗಿಯ ಶಾಂತಗೇರಿ ಸಂಸ್ಥಾನವು ಬೆಳಗಾವಿಯ ಚೆನ್ನಮ್ಮನ ಕಾಕತಿವಾಡೆ ಹಾಗೂ ಇಟಗಿಯ ದೇಸಾಯಿ ಮನೆತನಕ್ಕೆ ಸಂಬಂಧ ಪಡುತ್ತದೆ. ಚೆನ್ನಮ್ಮ ಇಟಗಿಯ ಸಣ್ಣಮಲ್ಲಸಜರ್ಾನನ್ನು ದತ್ತು ಪುತ್ರನಾಗಿ ಪಡೆಯುತ್ತಾಳೆ ಎಂದರು.
ನರೇಗಲ್ ಸೋಮೇಶ್ವರ ದೇವಾಲಯ, ಚಂದ್ರಮೌಳೇಶ್ವರ ದೇವಾಲಯ, ಸೂಡಿ ಸ್ಮಾರಕಗಳ, ಡಂಬಳ, ಲಕ್ಕುಂಡಿ ಸೇರಿದಂತೆ ಎಲ್ಲಾ ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗೆ ನಾವೇಲ್ಲ ಮುಂದಾಗಬೇಕು ಎಂದು ಚಂದ್ರು ರಾಠೋಡ ತಮ್ಮ ಉಪನ್ಯಾಸದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಮಹಾಂತೇಶ ಅಂಗಡಿ, ಎಂ.ಎಸ್.ಮಕಾನದಾರ, ಕೆ.ಜಿ.ಸಂಗಟಿ, ಶರಣಮ್ಮ ಅಂಗಡಿ, ಮೀನಾಕ್ಷಿ ಚುಂಚಾ, ಭಿಮಾಂಬಿಕಾ ನೂಲ್ವಿ, ಸಂಗಮೇಶ ಬಾಗೂರ, ರವಿ ಗಡೆದವರ, ಕೆ.ಎಸ್. ಗಾರವಾಡಹಿರೇಮಠ, ಎಸ್.ಎಸ್.ನರೇಗಲ್, ಬಿ.ವಿ.ಮುನವಳ್ಳಿ, ಹುಚ್ಚಪ್ಪ ಹಾವೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
\