ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಿ: ವಾಮನ ಮೂರ್ತಿ

ಕೊಪ್ಪಳ 22:  ಯುವಕರು ಸಾಮಾಜಿಕ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕೆಲಸ ಮಾಡಿ ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕೃಷಿ ವಿಸ್ತಿರ್ಣ ಕೇಂದ್ರದ ಸಹಾಯಕ ಪ್ರಾಧ್ಯಾಪಕ ವಾಮನ ಮೂರ್ತಿ ಅಭಿಪ್ರಾಯ ಪಟ್ಟರು.

ಅವರು ತಾಲೂಕ ಪಂಚಾಯಿತಿ ಆವರಣದಲ್ಲಿರುವ ಕೃಷಿ ವಿಸ್ತೀರ್ಣ ಕೇಂದ್ರದ ಸಭಾಂಗಣದಲ್ಲಿ ಸ್ನೇಹ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಕಿಶೋರ ಮಕ್ಕಳ ಹಕ್ಕುಗಳ ಮಕ್ಕಳ ಹಕ್ಕುಗಳ ಮತ್ತು ರಕ್ಷಣೆ ಕಾಯ್ದೆಗಳ ಮತ್ತು ಲಿಂಗತ್ವ ದ ಬಗ್ಗೆ ತರಬೇತಿದಾರರ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು ಮುಂದುವರೆದು ಮಾತನಾಡಿದ ಅವರು ಇಂದಿನ ಮಕ್ಕಳೇ ಈ ನಾಡಿನ ಭಾವಿ ಪ್ರಜೆಗಳಾಗಿದ್ದು ಅವರ ಮುಂದಿನ ಭವಿಷ್ಯ ಉಜ್ವಲಗೊಳ್ಳಲು ಶಿಕ್ಷಣ ಅತ್ಯವಶ್ಯಕವಾಗಿದೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದರು ದೇಶ ನನಗೇನು ಮಾಡಿದೆ ಅನ್ನೋದಕ್ಕಿಂತ ನಾನು ದೇಶಕ್ಕಾಗಿ ಏನು ಮಾಡಿದ್ದೇನೆ ಎಂಬುದರ ಬಗ್ಗೆ ಯುವಕರು ಈ ದೇಶಕ್ಕಾಗಿ ಅಪಾರ ಕೊಡುಗೆ ಕೊಡುವಂತಹ ಗುಣಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ಜೀವನ ಸಾಗಿಸಬೇಕು ಎಂದು ವಾಮನ ಮೂರ್ತಿ ಯುವಕರಿಗೆ ಕಿವಿ ಮಾತು ಹೇಳಿದರುಸಮಾರಂಭ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿ ಸದಸ್ಯರಾದ ಸರೋಜಾಬಾಕಳೆ ನೆರವೇರಿಸಿ ಮಾತನಾಡಿದರು ವಿಶೇಷ ಆಮಂತ್ರಿಕರಾಗಿ ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ಪಾಲ್ಗೊಂಡಿದ್ದರು ಕಾರ್ಯಕ್ರಮದ ನಂತರ ಸ್ನೇಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಂಜನೇಯ ರವರು ಯುವಕರಿಗೆ ತರಬೇತಿ ನೀಡಿದರು ವೇದಿಕೆ ಮೇಲೆ ಯುವಕರ ಪರವಾಗಿ ಫಕೀರ್ ಸ್ವಾಮಿ ಮತ್ತು ಮಹಾಂತೇಶ್ ಪಾಲ್ಗೊಂಡಿದ್ದರು ಸ್ನೇಹ ಸಂಸ್ಥೆಯ ಸಂಯೋಜಕರಾದ ಗಾಯತ್ರಿ ಶೋಭಾ ಮಹಾಲಕ್ಷ್ಮಿ ಮತ್ತು ಶಕುಂತಲಾ ಸೇರಿದಂತೆ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು