ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು

ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು Cross-voting in the council elections: BJP MLA's name in the district is added, discussion begins

ಬೆಳಗಾವಿ : ಕಳೆದ ವಾರ ನಡೆದಿದ್ದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ನಡೆದಿದ್ದು, ಈ ಅಡ್ಡ ಮತದಾನದಲ್ಲಿ ಬೆಳಗಾವಿ ಜಿಲ್ಲೆಯ ಹಿರಿಯ ಬಿಜೆಪಿ ಶಾಸಕ ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ಜಿಲ್ಲೆಯಲ್ಲಿ ಗುಸು ಗುಸು ಚರ್ಚೆಗೆ ಪ್ರಾರಂವಾಗಿದೆ. ಯಾರು ಈ ಅಡ್ಡಮತದಾನದ ಶಾಸಕ ಎಂಬ ಪ್ರಶ್ನೆ ಉದ್ಭವಿಸಿದೆ.

    ಕಳೆದ ವಾರ ವಿಧಾನ ಪರಿಷತ್ ಸ್ಥಾನಗಳಿಗಾಗಿ ಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಕೆಂಪು ಶಾಸಕರುಗಳು ಅಡ್ಡ ಮತದಾನ ಮಾಡಿದ್ದರು. 

    ಈ ವಿಷಯವನ್ನು ಬಿಜೆಪಿ ರಾಷ್ಟ್ರದ ಹಾಗೂ ರಾಜ್ಯದ ನಾಯಕರುಗಳು ಗಂಭೀರವಾಗಿ ತೆಗೆದುಕೊಂಡಿದ್ದರು. ಈ ಕುರಿತು ಸತ್ತ ಶೋಧನಾ ಸಮಿತಿಯಿಂದ ತನಿಖೆಯನ್ನು ಕೂಡಾ ನಡೆಸಲಾಗಿತ್ತು. 

   ಆದರೆ ಈ ಅಡ್ಡ‌ ಮತದಾನದ ಕುರಿತು ಮಾಜಿ ಸಚಿವ ಹಾಗೂ ಸದ್ಯದ ಪರಿಷತ್ ಸದಸ್ಯ ಸಿಟಿ ರವಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೇಂದ್ರ ಅವರಿಗೆ ವರದಿಯೊಂದನ್ನು ಕೂಡಾ ಸಲ್ಲಿಸಿದ್ದಾರೆ. 

    ಈ ವರದಿಯಲ್ಲಿ ಬೆಳಗಾವಿ ಜಿಲ್ಲೆಯ ಹಿರಿಯ ಬಿಜೆಪಿ ಶಾಸಕರೊಬ್ಬರ ಹೆಸರು ಕೂಡಾ ಉಲ್ಲೇಖ ವಾಗಿದೆ ಎನ್ನುವ ಕುರಿತು ಸುದ್ದಿ ಜಿಲ್ಲೆಯ ಎಲ್ಲಕಡೆ ಪಸರಿಸಿದ್ದು, ಈ ಶಾಸಕ ಯಾರು ಎನ್ನುವ ಕುರಿತು ಬಿಸಿ ಬಸಿ ಚರ್ಚೆ ಪ್ರಾರಂಭವಾಗಿದೆ.