ಸೌಜನ್ಯತಾ ಸಮಿತಿಯಿಂದ ಡಾ, ಎಚ್ ಕೆ ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ವೀರನಾರಾಯಣ ದೇವರ ಸನ್ನಿಧಿಯಲ್ಲಿ ವಿಶೇಷ ಸಂಕಲ್ಪ ಪೂಜಾರಾಧನೆ

ಸೌಜನ್ಯತಾ ಸಮಿತಿಯಿಂದ ಡಾ, ಎಚ್ ಕೆ ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ವೀರನಾರಾಯಣ ದೇವರ ಸನ್ನಿಧಿಯಲ್ಲಿ ವಿಶೇಷ ಸಂಕಲ್ಪ ಪೂಜಾರಾಧನೆ Courtesy Committee conducts special Sankalpa Puja in the presence of Veeranarayana Devara for Dr. H.

ಲೋಕದರ್ಶನ ವರದಿ  

 ಗದಗ 21: ದೇವಾರಾಧನೆಯ ಸರ್ವಶ್ರೇಷ್ಠ ಸೂರ್ಯದೇವರ ಮತ್ತು ವಿಷ್ಣು ದೇವರ ಆರಾಧನೆಯ ದಿನವಾದ ಇಂದು ಜೂನ್ 21 ರಂದು ಬೆಳಿಗ್ಗೆ 11 ಘಂಟೆಗೆ ಗದಗಿನ ಶ್ರೀ ವೀರ ನಾರಾಯಣ ದೇವಸ್ಥಾನದಲ್ಲಿ ಗದಗ ವಿಧಾನಸಭಾ ಕ್ಷೇತ್ರದ ಶುದ್ಧ ನೀರಿನ ಹರಿಕಾರ ಅಭಿವೃದ್ಧಿಯ ಹರಿಕಾರ, ಸಜ್ಜನ ರಾಜಕಾರಣಿ ಬಡ ಜನಸಾಮಾನ್ಯರ ಜನಸ್ನೇಹಿ ರಾಜಕೀಯ ನಾಯಕರಾದ ಸನ್ಮಾನ್ಯ ಡಾಕ್ಟರ್ ಎಚ್ ಕೆ ಪಾಟೀಲ್ ರವರಿಗೆ ಸಿ ಎಮ್ ಡಿ ಕೆ ಶಿವಕುಮಾರ ರವರ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತಾಗಲು ವಿಶೇಷ ಪೂಜಾರಾಧಾಧನೆಯನ್ನು ಸೌಜನ್ಯತಾ ಸಮಗ್ರ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಹಮ್ಮಿಕೊಳ್ಳಲಾಗಿತ್ತು. 

 ಸಮಸ್ತ ಉತ್ತರ ಕರ್ನಾಟಕ ಭಾಗದ ಹಾಗೂ ಅದರಲ್ಲೂ ವಿಶೇಷವಾಗಿ ಗದಗ ವಿಧಾನಸಭಾ ಕ್ಷೇತ್ರದ ಸಮಸ್ತ ಶ್ರೇಯೋಭಿವೃದ್ಧಿಗಾಗಿ ಎಚ್ ಕೆ ಪಾಟೀಲರವರಿಗೆ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನಕ್ಕಾಗಿ ಪ್ರಾರ್ಥಿಸಿ ಶಹರದ ಹನಮನ ಗರಡಿಯಿಂದ ಶ್ರೀ ವೀರ ನಾರಾಯಣ ದೇವಸ್ಥಾನದವರೆಗೆ ಪಾದಯಾತ್ರೆಯನ್ನು ಕೈಗೊಂಡು ಶ್ರೀ ವೀರ ನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ  ಪ್ರಾರ್ಥನೆ ಮಾಡಿಕೊಂಡು ಪ್ರಸಾದ್ ವಿತರಣೆ ಮಾಡಲಾಯಿತು. 

 ಈ ಸಂಧರ್ಭದಲ್ಲಿ ಸುನೀಲ್ ದತ್ತಾತ್ರೇಯ ಪಾಲನಕರ, ಸುನೀತಾ ಪಾಲನಕರ, ಸೌಜನ್ಯ ಪಾಲನಕರ, ದ್ರಾಕ್ಷಾಯಣಿ ಹಾಸಲಕರ, ಸುಧಾ ಬುದಾರಪೂರ, ರೇಣುಕಾ ಜಡಿ, ರಾಯ್ಕರ ಮಾಮಿ,ಕಸ್ತೂರಿ, ಜಾಲಿಹಾಳ್, ಅನನ್ಯ ಪಾಲನಕರ, ರಾಮಣ್ಣ ಬಾಕಳೆ, ಪರಶುರಾಮ ದಲಬಂಜನ, ಪರ​‍್ಪ ಕಮತರ, ಅಸ್ಲಮ್ ಖಾಜಿ, ಲೀಲಾಭಾಯಿ ಶಾಖಾಪೂರ, ಸೀತಾಲಕ್ಷ್ಮಿ ಅಷ್ಟಪುತ್ರೆ, ಸೌಜನ್ಯತಾ ಸಮಗ್ರ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸಹನಾ ರಾಘವೇಂದ್ರ ಪಾಲನಕರ, ವಕೀಲರಾದ ಎಮ್ ಎ ಧಾರವಾಡ, ಗದಗ ಬೆಟಗೇರಿ ಶಹರ ಕಾಂಗ್ರೇಸ್ ಸಮಿತಿಯ ಮಾಧ್ಯಮ ವಕ್ತಾರರಾದ ರಾಘವೇಂದ್ರ ಪಾಲನಕರ ಹಾಗೂ ಸಮಸ್ತ ಗದಗ ಬೆಟಗೇರಿ ನಗರಸಭೆಯ 20, 23, ಹಾಗೂ 25 ನೇ ವಾರ್ಡಿನ ನಾಗರಿಕರು ಮತ್ತು ವಿಶೇಷವಾಗಿ ಹನಮನ ಗರಡಿ ಬಡಾವಣೆಯ ಸಮಸ್ತ ನಾಗರಿಕರು ಈ ಒಂದು ಪೂಜಾರಾಧನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.