ತಾಯಿ ರತ್ನಪ್ರಭಾ ಹೇಳಿಕೆ, ಸಾಕ್ಷಿಯನ್ನು ಕೋರ್ಟ್ ಪರಿಗಣಿಸಲಿದೆ
Court will consider mother Ratnaprabha's statement, evidence
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣ (Renukaswamy Case) ಸಂಬಂಧ ನಟ ದರ್ಶನ್ (Darshan),
ಪವಿತ್ರಗೌಡ (Pavithra Gowda) ಸೇರಿ ಎಲ್ಲಾ ಆರೋಪಿಗಳ ವಿರುದ್ದ ಟ್ರಯಲ್ ಆರಂಭವಾಗಿದೆ.
ದಿನ ಕಳೆದಂತೆ ಪ್ರಕರಣದಲ್ಲಿ ಸಾಕಷ್ಟು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಪ್ರಕರಣದಲ್ಲಿ ಮತ್ತೊಂದು ಮೇಜರ್ ಟ್ವಿಸ್ಟ್ ಪಡೆದುಕೊಂಡಿದೆ.ಪ್ರಕರಣದ ಟ್ರಯಲ್ ವೇಳೆ ಸಾಕ್ಷಿಧಾರರಾಗಿದ್ದ ರೇಣುಕಾಸ್ವಾಮಿ ಪೋಷಕರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ನೀಡಿದ್ದ ಹೇಳಿಕೆಯಲ್ಲಿ ಗೊಂದಲ ಇದ್ದ ಕಾರಣ ಅವರನ್ನು ಪ್ರಾಸಿಕ್ಯೂಷನ್ ಪಾಟಿ ಸವಾಲಿಗೆ ಒಳಪಡಿಸಲು ಅವಕಾಶ ಮಾಡಿಕೊಡುವಂತೆ ಕೋರಿದ್ದರು. ಎಸ್ಪಿಪಿ ಪ್ರಸನ್ನ ಕುಮಾರ್ ಅವರು ರತ್ನಪ್ರಭಾ ಸಾಕ್ಷಿ ಹೇಳಿದ್ದನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸುವಂತೆ ಕೋರ್ಟ್ ಗೆ ಮನವಿ ಮಾಡಿದ್ದರು. ಇದೀಗ 57ನೇ ಸೆಷನ್ ನ್ಯಾಯಾಲಾಯ ಪ್ರಾಸಿಕ್ಯೂಷನ್ ಮನವಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದೆ.
ಇದರಿಂದಾಗಿ ಪ್ರಾಸಿಕ್ಯೂಷನ್ ಹಾಗೂ ಪೊಲೀಸರಿಗೆ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ಕೋರ್ಟ್ ಈಗ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಹೇಳಿಕೆ, ಸಾಕ್ಷಿಯನ್ನು ಪರಿಗಣಿಸಲಿದೆ. ರೇಣುಕಾಸ್ವಾಮಿ ತಾಯಿ ಅವರ ಹೇಳಿಕೆಯು, ದರ್ಶನ್, ಪವಿತ್ರಾ ಗೌಡ ಹಾಗೂ ಉಳಿದ ಆರೋಪಿಗಳಿಗೆ ಅನುಕೂಲವಾಗಲಿದೆ. ಒಂದು ರತ್ನಾಪ್ರಭ ಅವರಂತೆ ಉಳಿದ ಸಾಕ್ಷಿಗಳು, ಪ್ರತ್ಯಕ್ಷದರ್ಶಿಗಳು ಕೋರ್ಟಿನಲ್ಲಿ ಸಾಕ್ಷಿ ಹೇಳದೆ ಇದ್ದರೆ, ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಗುವ ಸಾಧ್ಯತೆಯಿದೆ. ಒಂದು ವೇಳೆ ಹಾಗೆ ಆದರೆ ದರ್ಶನ್ ನಿರಪರಾಧಿ ಎನ್ನುವ ತೀರ್ಪು ಕೂಡ ಬರಬಹುದು.
ಇನ್ನೊಂದು ಕಡೆ ಎ1 ಪವಿತ್ರಾ ಗೌಡ ಅವರಿಗೆ ವಾರಕೊಮ್ಮೆ ಮನೆ ಊಟ ಕೊಡಬೇಕೆಂದು ಕೋರ್ಟ್ ಇತ್ತೀಚೆಗೆ ಆದೇಶ ನೀಡಿದೆ. ಆದರೆ ಮನೆಯೂಟ ತೆಗೆದುಕೊಂಡರು ಹೋದರೆ ಜೈಲು ಅಧಿಕಾರಿಗಳು ಪವಿತ್ರಾಗೌಡಗೆ ಮನೆ ಊಟ ನೀಡಲು ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಪವಿತ್ರಾಗೌಡ ತಾಯಿ ಭಾಗ್ಯಮ್ಮ ಕೋರ್ಟ್ ಗೆ ಅಫಿಡವಿಟ್ ಸಲ್ಲಿಕೆಯಾಗಿದೆ.
ಇದೇ ವೇಳೆ ಆರೋಪಿ ಪ್ರದೂಷ್ ಹಾಕಿದ್ದ ಜಾಮೀನು ಅರ್ಜಿಯನ್ನು ಕೂಡ ವಜಾ ಮಾಡಿದೆ. ತಂದೆಯ ತಿಥಿ ಕಾರ್ಯಾಕ್ಕೆ 17 ರಿಂದ 22ರ ತನಕ ಜಾಮೀನು ನೀಡುವಂತೆ ಮನವಿ ಮಾಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 