ಮಾಸ್ಕ್ ತಯಾರಿಕೆಯಲ್ಲಿ ತೊಡಗಿದ ದೇಶದ ಪ್ರಥಮ ಮಹಿಳೆ ....!!
ನವದೆಹಲಿ, ಏ 23, ಮಾಸ್ಕ್ ಗಳ ತಯಾರಿಕೆಯಲ್ಲಿ ಸ್ವತಃ ತೊಡಗಿಕೊಳ್ಳುವ ಮೂಲಕ ದೇಶದ ಪ್ರಥಮ ಮಹಿಳೆ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಪತ್ನಿ, ಸವಿತಾ ಕೋವಿಂದ್ ಕರೋನ ವಿರುದ್ದದ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ರಾಷ್ಟ್ರಪತಿ ಭವನದ ಶಕ್ತಿ ಹಾಥ್ ನಲ್ಲಿ ಫೇಸ್ ಮಾಸ್ಕ್ ಗಳ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಸ್ವತಃ ಮಾಸ್ಕ್ ಧರಿಸಿಕೊಂಡು ಹೊಲಿಗೆ ಯಂತ್ರದ ಮೂಲಕ ಹಲವು ಫೇಸ್ ಮಾಸ್ಕ್ ಗಳನ್ನು ಅವರೆ ಖುದ್ಧಾಗಿ ತಯಾರಿಸಿದ್ದಾರೆ. ಇದು ಹಲವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮಾಸ್ಕ್ ಗಳನ್ನು ದೆಹಲಿ ನಗರದ ವಿವಿಧ ಆಶ್ರಯ ಮನೆಗೆ ವಿತರಿಸಲಾಗುತ್ತದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ದೇಶದ ಪ್ರಥಮ ಮಹಿಳೆ, ಸಹ ಕರೋನ ಮಹಾಮಾರಿಯ ವಿರುದ್ಧ ಹೋರಾಡಲು ಜನತೆ ಕೈಜೋಡಿಸಬೇಕೆಂಬ ಕೂಗಿಗೆ, ಒತ್ತಾಯಕ್ಕೆ ಅವರು ಪ್ರೇರೇಪೆಣೆ ನೀಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 