ಬೆಂಗಳೂರು, ಜ.24,ಎಂಜಿ ಮೋಟಾರ್ ಇಂಡಿಯಾ ಬಹುನಿರೀಕ್ಷಿತ ಝೆಡ್‌ಎಸ್ ಇವಿ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇದು ಭಾರತದ ಮೊದಲ ಪರಿಪೂರ್ಣ ಎಲೆಕ್ಟ್ರಿಕ್ ಇಂಟರ್ನೆಟ್ ಎಸ್‌ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2020 ಜನವರಿ 17ರ ಮಧ್ಯರಾತ್ರಿಗೂ ಮೊದಲು ಬುಕ್ ಮಾಡಿದ ಗ್ರಾಹಕರು ಈ ಕಾರನ್ನು ಆರಂಭಿಕ ಬೆಲೆ ರೂ. 19.88 ಲಕ್ಷಕ್ಕೆ ಖರೀದಿಸಬಹುದಾಗಿದೆ. (ಎಕ್ಸ್ ಶೋರೂಮ್ ನವದೆಹಲಿ). ಝೆಡ್‌ಎಸ್ ಇವಿ ಎಕ್ಸೈಟ್ ಈಗ ರೂ. 20.88 ಲಕ್ಷದಲ್ಲಿ ಲಭ್ಯವಿದ್ದು, ಝೆಡ್‌ಎಸ್ ಇವಿ ಎಕ್ಸ್‌ಕ್ಲೂಸಿವ್ ರೂ. 23.58 ಲಕ್ಷದಲ್ಲಿ ಲಭ್ಯವಿದೆ.
ಉತ್ತಮ ಮಾಲೀಕತ್ವ ಅನುಭವವನ್ನು ಒದಗಿಸುವ ಈ ಕಾರು ಸಂಸ್ಥೆಯ ಬದ್ಧತೆಗೆ ಪೂರಕವಾಗಿ ಎಂಜಿ ಇಶೀಲ್ಡ್ ಅನ್ನು ಪರಿಚಯಿಸಲಾಗಿದೆ. ಇದು ಉಚಿತವಾಗಿ 5 ವರ್ಷ ಉತ್ಪಾದಕರ ವಾರಂಟಿಯನ್ನು ಅನಿಯಮಿತ ಕಿಲೋಮೀಟರುಗಳಿಗೆ ಒದಗಿಸುತ್ತದೆ ಮತ್ತು ಬ್ಯಾಟರಿಯ ಮೇಲೆ 8 ವರ್ಷಗಳು/150 ಸಾವಿರ ಕಿ.ಮೀ ವಾರಂಟಿಯನ್ನು ನೀಡುತ್ತದೆ. ಖಾಸಗಿಯಾಗಿ ನೋಂದಣಿ ಮಾಡಿದ ಕಾರುಗಳಿಗೆ 5 ವರ್ಷಗಳವರೆಗೆ ಇದು ಇಡೀ ದಿನದ ರೋಡ್‌ಸೈಡ್ ಅಸಿಸ್ಟೆನ್ಸ್ (ಆರ್‌ಎಸ್‌ಎ) ಅನ್ನೂ ಒದಗಿಸುತ್ತದೆ ಮತ್ತು 5 ಕೂಲಿ ರಹಿತ ಸರ್ವೀಸ್‌ಗಳನ್ನೂ ಒದಗಿಸುತ್ತದೆ. ಝೆಡ್‌ಎಸ್ ಇವಿ ಪ್ರತಿ ಕಿ.ಮೀಗೆ 1 ರೂ. ವೆಚ್ಚದಲ್ಲಿ ಚಾಲನೆ ವೆಚ್ಚವನ್ನೂ ಹೊಂದಿದೆ (ಪಾರ್ಟ್‌ಗಳು, ಕನ್ಸ್ಯೂಮಬಲ್‌ಗಳು, ಲೇಬರ್ ಮತ್ತು ತೆರಿಗೆ ಸೇರಿದಂತೆ ಮುನ್ನೆಚ್ಚರಿಕೆ ನಿರ್ವಹಣೆಯೊಂದಿಗೆ 100,000 ಕಿಲೋಮೀಟರುಗಳವರೆಗೆ) 3 ವರ್ಷಗಳವರೆಗೆ ಮೇಂಟೆನೆನ್ಸ್ ಪ್ಯಾಕೇಜ್ ಆರಂಭಿಕ ಬೆಲೆ ರೂ. 7,700 ಕೂಡ ಇದರಲ್ಲಿ ಲಭ್ಯವಿದೆ.ಎಂಜಿ ಇಶೀಲ್ಡ್ ಅನ್ನು ಪರಿಚಯಿಸುವುದರ ಜೊತೆಗೆ, ಝೆಡ್‌ಎಸ್ ಇವಿ ಗ್ರಾಹಕರಿಗೆ ಅನುಕೂಲಕರವಾಗಿ, "3-50" ಪ್ಲಾನ್ ಅನ್ನು ಕಂಪನಿ ಒದಗಿಸುತ್ತಿದೆ. ಇದರಲ್ಲಿ ಖಚಿತ ರಿಸೇಲ್ ಮೌಲ್ಯವಿದೆ ಮತ್ತು ಇದನ್ನು ಸಕಾರಣ ಮೊತ್ತ ಪಾವತಿ ಮಾಡಿ ಪಡೆಯಬಹುದು. ಕಾರು ಉತ್ಪಾದಕ ಸಂಸ್ಥೆಯು ಕಾರ್ ದೇಖೋ ಡಾಟ್ ಕಾಮ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಮೂರು ವರ್ಷದ ಮಾಲೀಕತ್ವ ಪೂರ್ಣಗೊಂಡ ನಂತರ ಶೇ. 50 ರ ಮೌಲ್ಯದಲ್ಲಿ ಝೆಡ್‌ಎಸ್ ಇವಿ ಗ್ರಾಹಕರಿಂದ ಖಚಿತ ಖರೀದಿಯನ್ನು ಒದಗಿಸಲಿದೆ.ಬೆಲೆ ಘೋಷಣೆಯ ಬಗ್ಗೆ ಮಾತನಾಡಿದ ಎಂಜಿ ಮೋಟಾರ್ ಇಂಡಿಯಾದ ಅಧ್ಯಕ್ಷ ಮತ್ತು ಎಂಡಿ ರಾಜೀವ್ ಚಾಬಾ, ಝೆಡ್‌ಎಸ್ ಇವಿ ಜಾಗತಿಕವಾಗಿ ಯಶಸ್ವಿ ಉತ್ಪನ್ನವಾಗಿದ್ದು, ಇವಿ ಸುಸ್ಥಿರತೆ, ಎಸ್‌ಯುವಿ ಪ್ರಾಯೋಗಿಕತೆ ಮತ್ತು ಸ್ಪೋರ್ಟ್ಸ್ ಕಾರ್‌ನ ಕಾರ್ಯಕ್ಷಮತೆಯನ್ನು ಇದು ಹೊಂದಿದೆ. ಇದು ಅತ್ಯಾಧುನಿಕ ಸೌಲಭ್ಯವನ್ನು ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಉತ್ತಮ ಬೆಲೆಯಲ್ಲಿ ಹೊಂದಿದೆ. ಭಾರತವು ಎಲೆಕ್ಟ್ರಿಕ್ ಆಗಲು ಇನ್ನಷ್ಟು ಹೆಚ್ಚು ಗ್ರಾಹಕರಿಗೆ ಈ ಮೌಲ್ಯ ವರ್ಧನೆಯ ಪ್ರೋತ್ಸಾಹ ನೀಡಲಿದೆ ಎಂದು ನಾವು ಭಾವಿಸಿದ್ದೇವೆ. ಭಾರತದ ಇವಿ ವಲಯವನ್ನು ಸಶಕ್ತಗೊಳಿಸುವ ಪ್ರಕ್ರಿಯೆಯನ್ನು ನಾವು ಮುಂದುವರಿಸಲಿದ್ದು, ಉತ್ತಮ ಇವಿ ಟೆಕ್ನಾಲಜಿಯನ್ನು ಒದಗಿಸುತ್ತಿದ್ದೇವೆ ಮತ್ತು ದೇಶದ ಸಂಕೀರ್ಣ ಇವಿ ಮಾರುಕಟ್ಟೆಯಲ್ಲಿ ಸ್ಪರ್ಧೆ ಒಡ್ಡುತ್ತಿದ್ದೇವೆ ಎಂದರು.