ಕರೋನ ವಿರುದ್ಧ ಅಮೆರಿಕ ಸಮರ, 484 ಬಿಲಿಯನ್ ಡಾಲರ್ ಪರಿಹಾರ ಪ್ಯಾಕೇಜ್
ವಾಷಿಂಗ್ಟನ್, ಎಪ್ರಿಲ್ 22,ಕರೋನ ವಿರುದ್ದ ತೀವ್ರ ಹೋರಾಟ ಮಾಡುತ್ತಿರುವ ಅಮೆರಿಕ ನೆಟ್ ಸಣ್ಣ ಉದ್ಯಮಗಳ ಚೇತರಿಕೆ, ಆಸ್ಪತ್ರೆಗಳ ಸಂಖ್ಯೆ ಹೆಚ್ಚಳ ಮತ್ತು ಜನರಿಗೆ ಬೇಕಾದ ಚಿಕಿತ್ಸಾಸೌಲಭ್ಯ ಮತ್ತು ಕರೋನ ಪರೀಕ್ಷೆಗಾಗಿ 484 ಬಿಲಿಯನ್ ಡಾಲರ್ ಪರಿಹಾರ ಪ್ಯಾಕೇಜ್ ಅನ್ನು ಅಂಗೀಕರಿಸಿದೆ.ಡೆಮೊಕ್ರಟಿಕ್ ಸದಸ್ಯರು ಟ್ರಂಪ್ ಆಡಳಿತದೊಂದಿಗೆ ಒಪ್ಪಂದಕ್ಕೆ ಬಂದ ನಂತರ ಪರಿಹಾರ ಪ್ಯಾಕೇಜ್ ಗೆ ಧ್ವನಿ ಮತದ ಒಪ್ಪಿಗೆ ದೊರಕಿದ್ದು, ಸೆನೆಟ್ ಮತದಾನದ ನಂತರ ಇದಕ್ಕೆ ಗುರುವಾರದೊಳಗೆ ಕಾನುನು ಬದ್ದ ಅನುಮೋದನೆ ಸಿಗಲಿದೆ. "ಸೆನೆಟ್ ಅಮೆರಿಕಾದ ಜನತೆಯ ಪರವಾಗಿ ನಿಂತಿದೆ, ಕೇರ್ಸ್ ಕಾಯ್ದೆ ಜಾರಿಗೆ ಬರುವುದನ್ನು ನಿರೀಕ್ಷಿಸುತ್ತಿದೆ ಮತ್ತು ಉತ್ತಮ ಕಾರ್ಯಕ್ರಮಗಳನ್ನು ಮುಂದುರಿಸಲು ಅಗತ್ಯ ಹಣವನ್ನು ಸೇರಿಸಲಿದೆ ಎಂದು ಮಿಚ್ ಮೆಕ್ಕಾನ್ನೆಲ್ ಮತದಾನದ ಮೊದಲು ಹೇಳಿದ್ದಾರೆ ."ನಮ್ಮ ಒಪ್ಪಂದದ ತಿರುಳಿನ ಪ್ರಕಾರ ಇದು ಲಕ್ಷಾಂತರ ಸಣ್ಣ ಉದ್ಯಮಗಳಿಗೆ ಇದು ನೆರವಾಗಲಿದೆ, ಸಹಾಯವಾಗಲಿದೆ ಎಂದು ಅವರು ಹೇಳಿದರು. ಆರ್ಥಿಕ ವಿಪತ್ತು ಸಾಲಗಳಿಗೆ 60 ಬಿಲಿಯನ್ ಡಾಲರ್, ಆಸ್ಪತ್ರೆಗಳಿಗೆ 75 ಬಿಲಿಯನ್ ಡಾಲರ್ ಮತ್ತು ಪರೀಕ್ಷೆಯನ್ನು ದೇಶಾದ್ಯವಿಸ್ತರಿಸಲು 25 ಬಿಲಿಯನ್ ಡಾಲರ್ ಅನ್ನು ಈ ಪರಿಹಾರ ಪ್ಯಾಕೇಜ್ ಒಳಗೊಂಡಿದೆ.
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ 