ಕೊರೊನಾ-19: ನಿರಂತರವಾಗಿ 108 ತುರ್ತು ವೈದ್ಯಕೀಯ ಸೇವೆ
ಬಳ್ಳಾರಿ, ಏ.22: ಕರೋನಾ ವೈರಸ್ನ ಹಿನ್ನಲೆಯಲ್ಲಿ ಕಳೆದ ತಿಂಗಳಿನಿಂದ ಜಿಲ್ಲೆಯಾದ್ಯಂತ 108 ತುತರ್ು ವೈದ್ಯಕೀಯ ಸೇವೆಯು ಯಾವುದೇ ಆಡಚಣೆ ಇಲ್ಲದೇ ಸಿಬ್ಬಂದಿಯವರ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 33 ಆಂಬುಲೆನ್ಸ್ಗಳು 108 ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 132 ಸಿಬ್ಬಂದಿ ವರ್ಗದವರು ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯಮಟ್ಟದಲ್ಲಿ ಬಳ್ಳಾರಿ ಜಿಲ್ಲೆಯು ಭೌಗಳಿಕವಾಗಿ ವಿಸ್ತಾರದಿಂದ ಕೂಡಿದ್ದು, ಈ ಹಿನ್ನಲೆಯಲ್ಲಿ ಹರಪನಹಳ್ಳಿ ತಾಲ್ಲೂಕಿನಿಂದ ದಾವಣಗೆರೆ, ಹಡಗಲಿಯಿಂದ ದಾವಣಗೆರೆ ಮತ್ತು ಹಾವೇರಿ, ಹೊಸಪೇಟೆಯಿಂದ ಕೊಪ್ಪಳ ಜಿಲ್ಲೆಗಳಿಗೆ ಸಹ ತುತರ್ು ವೈದ್ಯಕೀಯ ಸೇವೆಯ ಮೂಲಕ ರೋಗಿಗಳನ್ನು ಕರೆದುಕೊಂಡು ಹೋಗಲಾಗುತ್ತಿದೆ.
ಬಳ್ಳಾರಿ ಜಿಲ್ಲೆಯ ತುತರ್ು ಪರಿಸ್ಥಿತಿ ನಿರ್ವಹಣೆಯ ಜಿಲ್ಲಾ ವ್ಯವಸ್ಥಾಪಕ ವಿನಯ್ ಕುಮಾರ್.ಪಿ ಅವರ ನೇತೃತ್ವದಲ್ಲಿ ಯಾವುದೇ ಅಡಚಣೆಗಳಿಲ್ಲದೆ ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಮೂಲಕ ಇಲ್ಲಿಯವರೆಗೆ ಒಟ್ಟು 3262 ತುತರ್ು ಸೇವಾ ಪ್ರಕರಣಗಳನ್ನು ನಿರ್ವಹಿಸಲಾಗಿದೆ. ಇದರಲ್ಲಿ 64 ಕರೋನಾ ಸಂಬಂಧಿತ ಸೋಂಕಿತರು, 1664 ಹೆರಿಗೆ, 88 ಅಪಘಾತ, 1446 ಇತರೆ ತುತರ್ು ಸೇವೆ ಸಲ್ಲಿಸಿದ್ದಾರೆ.
ಕರ್ತವ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಸುರಕ್ಷತೆಗಾಗಿ ಪಿ.ಪಿ.ಇ.ಕಿಟ್, ಸ್ಯಾನಿಟೈಜರ್, ಮಾಸ್ಕ್ ಮತ್ತು ಹ್ಯಾಂಡ್ ಗ್ಲೌಸ್ಗಳನ್ನು ಒದಗಿಸಿ ಸಿಬ್ಬಂದಿಗಳ ಸುರಕ್ಷತೆಯನ್ನು ಕಾಪಾಡಲಾಗಿದೆ. ಇದರ ಜೊತೆಗೆ ಕರೋನಾ ವೈರಸ್ನ ಕುರಿತ ಮುಂಜಾಗೃತೆಯ ಬಗ್ಗೆ ಸಹ ಮಾಹಿತಿಯನ್ನು ನಿರಂತರವಾಗಿ ಸಿಬ್ಬಂದಿಯವರು ನೀಡುತ್ತಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 