ಸಹಕಾರಿ ಕ್ಷೇತ್ರದ ಆದಾಯ ತೆರಿಗೆ ಜಿ.ಎಸ್.ಟಿ. ರದ್ದತಿಗೆ ಆಗ್ರಹಿಸಿ ಸಹಕಾರಿಗಳ ಪ್ರತಿಭಟನೆ

ಲೋಕದರ್ಶನವರದಿ

ರಾಣೇಬೆನ್ನೂರು: ಸಹಕಾರಿ ಕ್ಷೇತ್ರದ ಮೇಲೆ ವಿಧಿಸಿರುವ ಆದಾಯ ತೆರಿಗೆ, ಟಿಡಿಎಸ್ ಮತ್ತು ಜಿಎಸ್ಟಿಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ನಗರದಲ್ಲಿ ಕನರ್ಾಟಕ ಸ್ಟೇಟ್ ಕೋ-ಅಪ್ ಸೊಸೈಟಿಸ್ ಅಸೋಸಿಯೇಷನ್ ನೇತೃತ್ವದಲ್ಲಿ ಸ್ಥಳೀಯ ಸಹಕಾರಿ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ ಎಮ್.ಎನ್.ಹಾದಿಮನಿ ಮೂಲಕ ಕೇಂದ್ರ ಸಕರ್ಾರಕ್ಕೆ ಮನವಿ ಸಲ್ಲಿಸಿದರು. 

    ಇಲ್ಲಿನ ಹಳೆ ಪಿ.ಬಿ.ರಸ್ತೆ ಬಳಿಯ ಚನ್ನೇಶ ಪತ್ತಿನ ಸಹಕಾರಿ ಸಂಘದ ಬಳಿಯಿಂದ ಹೊರಟ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿದ  ಪ್ರತಿಭಟನಾಕಾರರು ಆನಂತರ ಮಿನಿ ವಿಧಾನಸೌಧಕ್ಕೆ ತಲುಪಿದರು. ದಾರಿಯುದ್ದಕ್ಕೂ ಪ್ರತಿಭಟನಾಕಾರರು ಕೇಂದ್ರ ಸರಕಾರದ ನಿಧರ್ಾರವನ್ನು ಖಂಡಿಸಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು. 

   ಈ ಸಮಯದಲ್ಲಿ ಮಾತನಾಡಿದ ರತ್ನಾಕರ ಕುಂದಾಪುರ ಮಾತನಾಡಿ, ಸಹಕಾರಿ ಕ್ಷೇತ್ರವನ್ನು ಉಳಿಸಿ ಬೆಳೆಸುವ ದೃಷ್ಠಿಯಿಂದ ಸಹಕಾರಿ ಕ್ಷೇತ್ರದ ಮೇಲೆ ವಿಧಿಸಿರುವ ಆದಾಯ ತೆರಿಗೆ, ಟಿಡಿಎಸ್ ಮತ್ತು ಜಿಎಸ್ಟಿಗಳನ್ನು ಕೂಡಲೇ ರದ್ದುಪಡಿಸಬೇಕು. ಪ್ರಧಾನ ಮಂತ್ರಿಗಳು ಹಾಗೂ ಹಣಕಾಸು ಸಚಿವರು ಸಮಸ್ಯೆಯನ್ನು ಅರಿತುಕೊಂಡು ಸೂಕ್ತ ನಿಧರ್ಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

   ಕೆ.ಶಿವಲಿಂಗಪ್ಪ, ಕೆ.ವಿ.ಶ್ರೀನಿವಾಸ, ಬಸವರಾಜ ಲಕ್ಷ್ಮೇಶ್ವರ, ಕೆ.ಎನ್.ಪಾಟೀಲ, ವೀರೇಶ ಕೋರಿ, ಕೃಷ್ಣಮೂತರ್ಿ ಸುಣಗಾರ, ನಂದಿಗಾವಿ, ಬಿ.ಐ.ಪಾಟೀಲ, ನಾಗಭೂಷಣ ನಿಡಗುಂದಿ, ಮಂಜುನಾಥ ಬಾಳಿಕಾಯಿ, ಪ್ರಶಾಂತ ನಿಡಗುಂದಿ, ಉಮೇಶ ಪಟ್ಟಣಶೆಟ್ಟಿ, ವೀರೇಶ, ಪ್ರವೀಣ ಸುರಹೊನ್ನೆ, ಜಯದೇವ ಸೊಪ್ಪಿನ ಸೇರಿದಂತೆ ಮತ್ತಿತರರು ಇದ್ದರು.