ಅ. 15ರಂದು ಕೋ ಆಪರೇಟಿವ್ ಬ್ಯಾಂಕ್ ಚುನಾವಣೆ: ಹಾಲಿ ಶಾಸಕರು ಮಾಜಿ ಶಾಸಕರು ಕಣದಲ್ಲಿ

ಸಿರುಗುಪ್ಪ 08: ಶತಮಾನೋತ್ಸವ ಕಂಡಿರುವ ಹೊಸಪೇಟೆ, ಬಳ್ಳಾರಿ ಜಿಲ್ಲಾ ಕೇಂದ್ರ ಕೋ ಆಪರೇಟಿವ್ ಬ್ಯಾಂಕ್ ರಾಜ್ಯದ ಸಹಕಾರಿ ಬ್ಯಾಂಕುಗಳಲ್ಲಿ ತನ್ನದೇ ಆದ ಪ್ರಾಮುಖ್ಯತೆ ಹೊಂದಿರುವ ಬಿಡಿಸಿಸಿ ಬ್ಯಾಂಕಿಗೆ ಅಕ್ಟೋಬರ್ 15 ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರುಗಳು ಹಾಗೂ ಸಹಕಾರ ಕ್ಷೇತ್ರದ ಹಿರಿಯ ಮುಖಂಡರುಗಳಿಂದ ಬಿಡಿಸಿಸಿ ಬ್ಯಾಂಕಿನ ಚುನಾವಣೆಗೆ  ಹರಪನಹಳ್ಳಿ ಕ್ಷೇತ್ರದ ಶಾಸಕಿ ಎಂಪಿ ಲತಾ, ಮಲ್ಲಿಕಾರ್ಜುನ ,ಮಾಜಿ ಸಚಿವ ಪಿ ಟಿ ಪರಮೇಶ್ವರ ನಾಯಕ್, ಮಾಜಿ ಶಾಸಕರಾದ ಭೀಮಾನಾಯಕ್, ಸಿರುಗುಪ್ಪ ಮಾಜಿ ಶಾಸಕ ಟಿ ಎಂ ಚಂದ್ರಶೇಖರಯ್ಯ, ಮಾಜಿ ಅಧ್ಯಕ್ಷರಾದ ಜೆಎಂ ವೃರುಷ ಬೇಂದ್ರಯ್ಯ, ಚೊಕ್ಕ ಬಸವನಗೌಡ , ಹಾಲಿ ಉಪಾಧ್ಯಕ್ಷ ಕೆ ತಿಪ್ಪೇಸ್ವಾಮಿ, ಮಾಜಿ ಉಪಾಧ್ಯಕ್ಷರಾದ ಎಂ ಗುರುಸಿದ್ದನಗೌಡ, ಡಿ ಬೋಗಾ ರೆಡ್ಡಿ, ಕೋಳೂರು ಮಲ್ಲಿಕಾರ್ಜುನ ಗೌಡ, ನಾಮಪತ್ರ ಸಲ್ಲಿಸಿದವರಲ್ಲಿ ಪ್ರಮುಖರಾಗಿದ್ದಾರೆ.

1920 ರಲ್ಲಿ ಸಹಕಾರಿ ಚಿಂತಕರ ಕಲ್ಪನೆಯ ಮೂಲಕ ಜನ್ಮ ತಾಳಿದ ಬಿಡಿಸಿಸಿ ಬ್ಯಾಂಕ್ ಅಂದಿನಿಂದ ಇಲ್ಲಿಯವರೆಗೆ ಶತಮಾನೋತ್ಸವ ಆಚರಿಸಿಕೊಂಡಿರುವ ಬಿಡಿಸಿಸಿ ಬ್ಯಾಂಕಿನ ಅಭಿವೃದ್ಧಿಗೆ ಅನೇಕ ಮಹನೀಯರು ತಮ್ಮ ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆಯ ಮೂಲಕ ಅಖಂಡ ಬಳ್ಳಾರಿ ಜಿಲ್ಲೆಯ ರೈತರ ಕೃಷಿ ಕಾರ್ಮಿಕರ ವಾಣಿಜ್ಯೋದ್ಯಮಿಗಳು ಸರಕಾರಿ ನೌಕರರ ಪ್ರಮುಖವಾಗಿ ಶಿಕ್ಷಕರಿಗೆ ಆರ್ಥಿಕವಾಗಿ ಸೇವೆ ಸಲ್ಲಿ ಸುತ್ತಿರುವಲ್ಲಿ ಸಹಕಾರ ಕ್ಷೇತ್ರದಲ್ಲಿ ಅನೇಕ ಮೈಲುಗಲ್ಲುಗಳನ್ನು ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹೊಂದಿದೆ ಬಿಡಿಸಿಸಿ ಬ್ಯಾಂಕಿಗೆ ಅಧ್ಯಕ್ಷರು ಗಳಾಗಿ 1920 ರಿಂದ ಮೊದಲ ಅಧ್ಯಕ್ಷರಾಗಿ ಅಸುಂಡಿ ಭೀಮಾ ರಾವ್, ಕಡ್ಲಾಬಾಳ್ ಕೃಷ್ಣ  ಚಾರ್ , ಎಡಿ ತಾಂಡು ಮೊದಲಿಯಾರ್, ಆರ್ ನಾಗನಗೌಡರು, ಅಂಗಡಿ ಚೆನ್ನಬಸಪ್ಪ, ಮುದ್ಲಾಪುರ್ ರಾಮರಾವ್, ಕಲ್ಗುಡಿ ರಾಜಪ್ಪ, ಛತ್ರಿಕಿ ಅಂದಾನಪ್ಪ, ಅಲ್ಲಂ ಕರಿಬಸಪ್ಪ, ಎ ಹೆಚ್ ಎಮ್ ಗುರುಶಂಕರಯ್ಯ, ಎಸ್ ವಿಠೋಬಾ ಶೆಟ್ಟಿ, ಸಿರುಗುಪ್ಪ ಮಾಜಿ ಸಚಿವ ಬಿಇ ರಾಮಯ್ಯ, ವಕೀಲರು ಎನ್ ತಿಪ್ಪಣ್ಣ, ಕೆ ದಿವಾಕರ, ಎಂ ಜೆ ಮಹಾಂತಪ್ಪ, ಎಂ ಎಂ ಜೆ ಸ್ವರುಪಾನಂದ, ಸಿಕೆ ಸಿದ್ದನಗೌಡರು, ಸಿರುಗುಪ್ಪ ಚೊಕ್ಕ ಬಸವನಗೌಡ, ಜೆ ಎಂ ವೃರುಷ ಬೇಂದ್ರಯ್ಯ, ಮಾಜಿ ಶಾಸಕ ಟಿಎಂ ಚಂದ್ರಶೇಖರಯ್ಯ ಸ್ವಾಮಿ, ಎಂಪಿ ರವೀಂದ್ರ, ಮಾಜಿ ಸಚಿವ ಆನಂದ್ ಸಿಂಗ್ ಇಲ್ಲಿಯವರೆಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ .

ಬಿಡಿಸಿಸಿ ಬ್ಯಾಂಕ್ ಹೊಸಪೇಟೆ ಬ್ಯಾಂಕಿನ ಬೈಲಾ ಪ್ರಕಾರ 14 ನಿರ್ದೇಶಕರ ಚುನಾವಣೆಯಲ್ಲಿ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹೂವಿನ ಹಡಗಲಿ, ಕಂಪ್ಲಿ, ಬಳ್ಳಾರಿ, ಸಂಡೂರು, ಕೊಟ್ಟೂರು, ಕೂಡ್ಲಿಗಿ, ಕುರುಗೋಡು, ಸಿರುಗುಪ್ಪ ಬ್ಯಾಂಕಿನ ವ್ಯಾಪ್ತಿಯಲ್ಲಿ ಬರುವ ಕೃಷಿ ಪತ್ತಿನ ಸಹಕಾರ ಬ್ಯಾಂಕುಗಳ ಆಯಾ ತಾಲೂಕಿನಿಂದ ಒಂದು ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಬಹುದು ಹಾಗೂ ಕೆಲವು ವ್ಯಾಪ್ತಿಯಲ್ಲಿ ಬರುವ ಕೃಷಿ ಉತ್ಪನ್ನ ಮಾರಾಟ ಸಹಕಾರ ಹಾಗೂ ಇತರೆ ಮಾರಾಟ ಸಂಸ್ಕರಣ ಸಹಕಾರ ಸಂಘಗಳ ಒಂದು ನಿರ್ದೇಶಕ ಸ್ಥಾನಕ್ಕೆ ಮತ್ತು ಜಿಲ್ಲೆಯ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳು ಮತ್ತು ವ್ಯವಸಾಯೇತರ ಪತಿನ ಸಹಕಾರ ಸಂಘದ ಒಬ್ಬ ಪ್ರತಿನಿಧಿಗೆ ಹಾಗೂ ಬ್ಯಾಂಕಿನ ಕಾರ್ಯ ವ್ಯಾಪ್ತಿಗೆ ಬರುವ ಇತರೆ ಸಹಕಾರ ಸಂಘಗಳಿಂದ ಚುನಾಯಿಸಲಾಗುವ ಒಬ್ಬ ಪ್ರತಿನಿಧಿಗೆ   ಚುನಾವಣೆ ನಡೆಯಲಿದೆ ಅಧಿಕೃತ ಅಭ್ಯರ್ಥಿಗಳ ಘೋಷಣೆ 9ರಂದು ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ಅಧಿಕೃತ ಘೋಷಣೆ ಸೆಪ್ಟೆಂಬರ್ 15ರಂದು ಮತದಾನ ನಡೆಯಲಿದೆ ಮತದಾನ ಮುಗಿದ ನಂತರ ಹಿಂದೆಯೇ ಮತ ಎಣಿಕೆ ಹಾಗೂ ನಂತರ ಅಧಿಕೃತ ಫಲಿತಾಂಶದ ಪ್ರಕಟಣೆಯಾಗಲಿದೆ.