ವಿಬಿಜಿ ರಾಮ್ ಜಿ ಯೋಜನೆಯಲ್ಲಿ ಕಾರ್ಮಿಕರಿಗೆ ನಿರಂತರ ಕೆಲಸ
Continuous work for laborers under the VBG Ramji project
ರಾಣೇಬೆನ್ನೂರ 08: ನರೇಗಾ ಹೋಯಿತು ವಿ. ಬಿ. ಜಿ. ರಾಮ್ ಜಿ ಬಂತು ಗ್ರಾಮೀಣ ಉದ್ಯೋಗದ ವಿಬಿಜಿ ರಾಮ್ ಜಿ ಹೊಸ ಹೊಸ ಹೆಸರಿನ ಈ ಯೋಜನೆಯಲ್ಲಿ ಹೆಚ್ಚಿನ ಅವಧಿ ಮತ್ತು ಅವಕಾಶ ದೊರೆಯಲಿದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. ಅವರು ಇತ್ತೀಚೆಗೆ ಬಿಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ವಿಕಸಿತ ಭಾರತ ಜಿ ರಾಮ್ ಜಿ. ಯೋಜನೆಯ ಜನ ಜಾಗೃತಿ ಜಾತಾ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಕಾರ್ಮಿಕರು ಇಂತಹ ಯೋಜನೆಯ ಮೂಲಕ ನಿರಂತರ ಕೆಲಸ ಕಾರ್ಯಗಳು ಮಾಡಿಕೊಂಡು ಆರ್ಥಿಕ ಸಬಲತೆ ಹೊಂದಬೇಕು ಎಂದು ಕರೆ ನೀಡಿದ ಶಾಸಕರು, ಕೇಂದ್ರ ಸರ್ಕಾರ ಮ ನರೇಗಾ ಬದಲಾಗಿ ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ 2025 ರಿಂದ ಜಾರಿಗೆ ಬಂದಿದೆ. ಗ್ರಾಮೀಣ ನಾಗರಿಕರು ಉದ್ಯೋಗ ಖಾತರಿ ಪಡೆದು ಆರ್ಥಿಕ ಸಬಲತೆ ಹೊಂದಬೇಕು ಎಂದು ಕರೆ ನೀಡಿದರು.
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಿಲ್ಲಾ ಪಂಚಾಯತ್ ತಾಲೂಕ ಪಂಚಾಯಿತಿ ರಾಣೆಬೆನ್ನೂರು ಬಿಲ್ಲಹಳ್ಳಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಜಾಗೃತಿ ಜಾತಾ ನಡೆಯಿತು. ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ವೆಂಕಟೇಶ್ ಸಣ್ಣಬಿದರಿ ಅವರು ಮಾತನಾಡಿ ಸದರಿ ಯೋಜನೆಯನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ತಾಲೂಕಿನಲ್ಲಿ ಈಗಾಗಲೆ ಉದ್ಯೋಗ 32701ಚೀಟಿ ಹೊಂದಿದ ಫಲಾನುಭವಿಗಳ ಕೆ. ವೈ. ಸಿ, ಯನ್ನು ಶೇಅ98 ರಷ್ಟು ಮಾಡಲಾಗಿದೆ.
ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಅಜೀವಿತ ಮಿಷನ್ 2025 ಯೋಜನೆ ಅಡಿಯಲ್ಲಿ ಜುಲೈ ಒಂದರಂದು ಜಾರಿಗೆ ಬಂದಿದ್ದು, 40 ಗ್ರಾಮ ಪಂಚಾಯಿತಿಗಳಿಂದ ಕ್ರಿಯಾಯೋಜನೆ ತರಿಸಿಕೊಳ್ಳಲಾಗಿದ್ದು, ಪರಿಪೂರ್ಣ ಅನುಷ್ಠಾನಗೊಳಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖಪ್ಪ ಬತ್ತಿಕೊಪ್ಪ, ಉಪಾಧ್ಯಕ್ಷರು ಮತ್ತು ತಹಶೀಲ್ದಾರ್ ಆರ್. ಎಫ್. ಭಗವಾನ್ ತೋಟಗಾರಿಕೆ ಸಹಾಯಕ ನಿರ್ದೇಶಕ ಮಂಜುನಾಥ ನಾಯಕ, ಸಹಾಯಕ ನಿರ್ದೇಶಕಿ ಸಾವಿತ್ರಮ್ಮ ಜೆ.ಎನ್, ಅಭಿವೃದ್ಧಿ ಅಧಿಕಾರಿ ಜ್ಯೋತಿ ಕಮ್ಮಾರ್, ಐಇಸಿ ಸಂಯೋಜಕ ದಿಂಗಾಲೇಶ್ವರ
ಅಂಗೂರ್, ಬಿ ಎಫ್ ಟಿ ಹೊನ್ನಪ್ಪ ಅಜ್ಜೇರ, ಸೇರಿದಂತೆ ರೇಷ್ಮೆ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ಪಂಚಾಯತ್ ರಾಜ್, ಇಂಜಿನಿಯರಿಂಗ್ ಇಲಾಖೆ, ಅಧಿಕಾರಿಗಳು ಗ್ರಾಮದ ನಾಗರಿಕರು ಮತ್ತಿತರರು ಉಪಸ್ಥಿತರಿದ್ದರು.
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ 