ಭೂಮಿ ಪೂಜೆ ಆದ ತಕ್ಷಣದಿಂದಲೇ ಕೆಲಸ ಕಾಮಗಾರಿಗಳು ಪ್ರಾರಂಭ : ಬಾಬಾಸಾಹೇಬ ಪಾಟೀಲ

ಭೂಮಿ ಪೂಜೆ ಆದ ತಕ್ಷಣದಿಂದಲೇ ಕೆಲಸ ಕಾಮಗಾರಿಗಳು ಪ್ರಾರಂಭ : ಬಾಬಾಸಾಹೇಬ ಪಾಟೀಲ Construction work to begin immediately after the groundbreaking ceremony: Babasaheb Patil

  ನೇಸರಗಿ 14 : ಕಿತ್ತೂರು ಮತಕ್ಷೇತ್ರದ ಹಲವಾರು ವರ್ಷಗಳ ಹಿಂದೆ ನಿರ್ಮಾಣಗೊಂಡ ಅದರಲ್ಲಿ ಕೆಲವು  ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಆಗಿರುವ ಹಳ್ಳಗಳ ಮೇಲಿನ ಸೇತುವೆಗಳು ಸಿಥಿಲಾವಸ್ಥೆ  ಹೊಂದಿ ಬಿರುಕು ಬಿಟ್ಟ ಸೇತುವಗಳ ನಿರ್ಮಾಣ ಮಾಡುವ ಕಾರ್ಯ ಎಲ್ಲ ಕಡೆಗಳಲ್ಲಿ ನಡೆಯುತ್ತಿದೆ ಎಂದು ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.  ಅವರು ನೇಸರಗಿ  ಗ್ರಾಮದ ದೇಶನೂರ ರಸ್ತೆಯಲ್ಲಿ ಇರುವ ಹಳ್ಳದ  ಸೇತುವೆ ನಿರ್ಮಾಣಕ್ಕೆ  ಸುಮಾರು 3 ಕೋಟಿ 50 ಲಕ್ಷ ರೂಪಾಯಿಗಳ ಅನುಧಾನದ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ 30 ರಿಂದ 35 ವರ್ಷಗಳ ಹಿಂದೆ ನಿರ್ಮಿಸಿ ಇಂದು ಸಿಥಿಲಾವಸ್ಥೆಗೊಂಡ ಸೇತುವೆ ನಿರ್ಮಾಣ  ಕಾಮಗಾರಿಗಳನ್ನು ಗುಣಮಟ್ಟದಲ್ಲಿ ನೆರವೇರಿಸಿ, ಬೇಗನೆ ಅಚ್ಚುಕಟ್ಟಾಗಿ  ಮುಗಿಸಿ  ಸಾರ್ವಜನಿಕರ ಅನೇಕ ಗ್ರಾಮಗಳ  ಸಂಚಾರಕ್ಕೆ ಅನುವು ಮಾಡಿಕೊಡಿ ಎಂದರು.

ನೇಸರಗಿ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಎಲ್ಲ ವಿಭಾಗಗಳಲ್ಲಿ ಕೆಲಸ ನಡೆಯುತ್ತಿದ್ದು, ಬಾಕಿ  ಕೆಲಸಗಳ ಬಗ್ಗೆ ಸಾರ್ವಜನಿಕರು ನನ್ನ ಗಮನಕ್ಕೆ ತನ್ನಿ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.  ಈ ಸಂದರ್ಭದಲ್ಲಿ ಯುವ ಮುಖಂಡ ಸಚಿನ ಪಾಟೀಲ, ಅಡಿವಪ್ಪ ಮಾಳಣ್ಣವರ, ಮಾಜಿ ಎ ಪಿ ಎಂ ಸಿ ಅಧ್ಯಕ್ಷ ಬರಮಣ್ಣ ಸತ್ತೇನ್ನವರ, ಶಿವನಗೌಡ ಪಾಟೀಲ(ಮಲ್ಲಾಪುರ), ಶಂಕರ ತಿಗಡಿ, ಸಿದ್ದಪ್ಪ ಇಂಚಲ,ನಿಂಗಪ್ಪ ತಳವಾರ,ಗುತ್ತಿಗೆದಾರ ಆನಂದ ಕಿರಗಿ, ಶಿವಾನಂದ ಕುಂಕುರ,  ಮಲ್ಲಿಕಾರ್ಜುನ ಕಲ್ಲೋಳಿ, ಅಶೋಕ ಹತ್ತರಗಿ, ಯಮನಪ್ಪ ಪೂಜೇರಿ, ಸಿದ್ದಯ್ಯ ಚರಂತಿಮಠ, ಸುಜಾತ ಪಾಟೀಲ, ಶಿವನಪ್ಪ ಮದೇನ್ನವರ, ಶೀತಲಕುಮಾರ ಕಾಡಣ್ಣವರ, ಪ್ರಕಾಶ ತೋಟಗಿ, ಸುರೇಶ ಕಂಡ್ರಿ, ಬಸವರಾಜ ಚಿಕ್ಕನಗೌಡ್ರ, ಸುರೇಶ ಅಗಸಿಮನಿ,ವಾಸು ಹಮ್ಮಣ್ಣವರ, ರಾಯನಗೌಡ ಪಾಟೀಲ,ಕಾಶಿಮ್ ಜಮಾದಾರ, ಫಕ್ಕಿರ​‍್ಪ ಸೋಮಣ್ಣವರ ಸೇರಿದಂತೆ ನೇಸರಗಿ ಗ್ರಾಮದ ಎಲ್ಲ ಸಮಾಜದ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.