ಸತೀಶ್ ಜಾರಕಿಹೊಳಿ ವಿರುದ್ಧ ಪಿತೂರಿ: ಸುಜಾತಾ ಬೆಟಗೇರ

ಸತೀಶ್ ಜಾರಕಿಹೊಳಿ ವಿರುದ್ಧ ಪಿತೂರಿ: ಸುಜಾತಾ ಬೆಟಗೇರ  Conspiracy against Satish Jarakiholi: Sujata Betagera


ಹುಕ್ಕೇರಿ ಸೆ.10: ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯುತ್ತಿದ್ದು, ಅವರ ಏಳ್ಗೆಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಬೆಳಗಾವಿ ಜಿಲ್ಲಾ ಲಿಂಗಾಯತ ಸಮಾಜದ ಮಹಿಳಾ ಅಧ್ಯಕ್ಷೆ ಸುಜಾತಾ ಬೆಟಗೇರ ಆರೋಪಿಸಿದರು.  

ಹುಕ್ಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಅವರು ಜಾತ್ಯತೀತ ರಾಜಕಾರಣಿಯಾಗಿ ಬೆಳೆದಿದ್ದು, ಅವರ ವಿರುದ್ಧದ ಆರೋಪಗಳಿಗೆ ಸೂಕ್ತ ದಾಖಲೆಗಳ ಮೂಲಕ ಉತ್ತರ ನೀಡಲಿದ್ದಾರೆ. ವಿದೇಶದಲ್ಲಿ ನಡೆಸಿದ ವ್ಯವಹಾರಕ್ಕೂ ಸೂಕ್ತ ದಾಖಲೆಗಳನ್ನು ನೀಡುವುದಾಗಿ ತಿಳಿಸಿದರು.  

ಮಂಜುಳಾ ರಾಮಗೊಂಡಟ್ಟಿ ಮಾತನಾಡಿ, ಸತೀಶ್ ಜಾರಕಿಹೊಳಿ ಅವರು ಉದ್ಯಮಿಯಾಗಿ, ನಂತರ ರಾಜಕಾರಣಿಯಾಗಿ ಬೆಳೆದಿದ್ದು, ಅವರು ಕೈಗೊಂಡಿರುವ ಉದ್ಯೋಗಗಳು ನ್ಯಾಯಯುತ ಹಾಗೂ ಕಾನೂನುಬದ್ಧವಾಗಿವೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಲಾಗುವುದು ಎಂದರು.  

ನಂತರ ಹುಕ್ಕೇರಿ ಕೋರ್ಟ್‌ ಸರ್ಕಲ್ ಬಳಿ ನೂರಾರು ಅಭಿಮಾನಿಗಳು ಸೇರಿ ಇ.ಡಿ. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿ ಖಂಡನೆ ವ್ಯಕ್ತಪಡಿಸಿದರು.  ಪ್ರತಿಭಟನೆಯಲ್ಲಿ ಕರೇಪ್ಪಾ ಗುಡಣ್ಣವರ, ಸಂತೋಷ ಮುಡಶಿ, ಮಹೇಶ ಹಟ್ಟಿಹೊಳಿ, ವಿಠ್ಠಲ ಮಾದರ, ಮಂಜುಳಾ ರಾಮಗೊಂಡಟ್ಟಿ, ನೀತೀಶ್ ಜಾಧವ, ಅನೀಲ ಪಾಟೀಲ, ಸುಜಾತಾ ಹಿರೇಮಠ, ಸುನೀತಾ ಕೋಳಿ, ಲಕ್ಷ್ಮಣ ಹೂಲಿ, ಕೆಂಪಣ್ಣಾ ಶಿರಹಟ್ಟಿ, ಹಿಡಕಲ್, ಪ್ರಕಾಶ ಮೈಲಾಖೆ, ಕೆ. ವೆಂಕಟೇಶ, ದೀಲೀಪ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.