ಭಾರತದ ಪ್ರಬುದ್ಧತೆಗಾಗಿ ಕಡ್ಡಾಯ ಮತದಾನ ಅಗತ್ಯ

ರಾಣೇಬೆನ್ನೂರು 23:  ಭಾರತಕ್ಕೆ ಸ್ವಾತಂತ್ರ್ಯ ಸುಮ್ಮನೆ ಸಿಕ್ಕಿಲ್ಲ ಲಕ್ಷಾಂತರ ದೇಶಪ್ರೇಮಿಗಳ ತ್ಯಾಗ ಮತ್ತು ಹೋರಾಟದ ಫಲವಾಗಿ ದಕ್ಕಿದೆ. ದೊರೆತ ಸ್ವಾತಂತ್ರ್ಯವನ್ನು ಪರಿಪೂರ್ಣಗೊಳ್ಳಬೇಕಾದರೆ ಪ್ರತಿಯೊಬ್ಬ ನಾಗರಿಕರು  ಮತದಾನ ಮಾಡಲುಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಹೆಚ್ ಪಾಟೀಲ್, ಕರೆ ನೀಡಿದರು.ಅವರು,ಮಂಗಳವಾರ ನಗರದ ಮೇಲಿರುವ ರಸ್ತೆಯ, ಲಯನ್ಸ್‌ ಶಾಲಾ ಭವನದಲ್ಲಿ, ಸ್ವೀಪ್ ಅಡಿಯಲ್ಲಿ, ಆಯೋಜಿಸಲಾಗಿದ್ದ, ಶಾಲಾ ಮಕ್ಕಳ ಚಿತ್ರಕಲಾ ಸಾಂಸ್ಕೃತಿಕ ಸ್ಪರ್ಧೆ  ಉದ್ಘಾಟಿಸಿ ಮಾತನಾಡಿದರು.         

ಮೇ 7ರಂದು ಬಹು ಮಹತ್ವಪೂರ್ಣ ಲೋಕಸಭಾ ಚುನಾವಣೆ ನಡೆಯಲಿದೆ. ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳವರು  ತಮ್ಮ ತಮ್ಮ ವ್ಯಾಪ್ತಿಯಲ್ಲಿ, ಕಡ್ಡಾಯ ಮತದಾನ ಮಾಡುವ ಹಿನ್ನೆಲೆಯಲ್ಲಿ ಜಾಗೃತಿಗೊಳಿಸುವ ಕೆಲಸವನ್ನು ಮಾಡುತ್ತಲಿವೆ. ತಮ್ಮ ಇಲಾಖೆಯೂ ಸಹ ಸ್ಥಳೀಯ ಎಲ್ಲಾ ಹಂತದ, ಇಲಾಖೆ ಮತ್ತು ಅಧಿಕಾರಿಗಳೊಂದಿಗೆ ಮತದಾನ ಜಾಗೃತಿ ಕಾರ್ಯ ಮಾಡಲಾಗುತ್ತಿದೆ ಎಂದರು.         

ಪ್ರಾಥಮಿಕ , ಪ್ರೌಢ ಶಾಲೆ, ಪದವಿ ಪೂರ್ವ, ಪದವಿ  ಕಾಲೇಜು  ಸೇರಿದಂತೆ, ವಿವಿಧ ಹಂತದ  ಇಲಾಖೆಗಳಲ್ಲಿಮತದಾನ ಜಾಗೃತಿ ಪವಿತ್ರ ಸೇವಾ ಕಾರ್ಯ ಮಾಡುತ್ತಿದ್ದೇವೆ. ಅಲ್ಲದೆ, ಮತದಾನ ಕುರಿತು ಜಾಗೃತಿ ಮೂಡಿಸಲು  ಮಕ್ಕಳ ಮೂಲಕ, ಸ್ಪರ್ಧಾತ್ಮಕ ಕಾರ್ಯಕ್ರಮಗಳೊಂದಿಗೆ, ಪಾಲಕರಿಗೆ ತಿಳಿಸಲು, ಈ ಕುರಿತು ಅರಿವು ಮೂಡಿಸಲು ಮುಂದಾಗಿದ್ದೇವೆ ಎಂದರು. ಕಾಲೇಜು ಕಾರ್ಯಕ್ರಮದಲ್ಲಿ ಇಲಾಖೆಯ, ದೈಹಿಕ ಶಿಕ್ಷಣ ನಿರ್ದೇಶಕ ಹನುಮಂತಪ್ಪ ಬಿ.ಹೆಚ್‌. ಶಿಕ್ಷಣ ಸಂಯೋಜಕರಾದ,ಸಿ.ಎಚ್‌. ದೇವಾಂಗದ, ಸಿ ಆರ್ ಪಿ, ಗುಡ್ಡಪ್ಪ ಬಾತಿ, ಮತ್ತು ಲಯನ್ ಶಾಲೆಯ  ಶಿಕ್ಷಕರಾದ ಜಿ.ಎಂ.ಬಿದರಿ, ಆರಿ​‍್ವ. ಸುರಗೊಂಡ, ಎಸ್ ಎಂ.ಎಳೇಹೊಳೆ, ಗುದ್ದಪ್ಪ ಮಡಿವಾಳರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಚಿತ್ರಕಲಾ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು, ಮತದಾನ ಜಾಗೃತಿ ಕುರಿತು, ಕಲೆಯ ಮೂಲಕ, ತಮ್ಮ ಕೌಶಲ್ಯತೆ ಮೆರೆದು, ಅವಮಾನಗಳನ್ನು ಪಡೆದರು.