ಆತ್ಮರ್ಪಣೆಗಾಗಿ ಅ.18ರಂದು ಸಂವಿಧಾನ ಚಲೋ

ಜಂಗಮರಿಂದ ಜಾತಿಪ್ರಮಾಣ ಪತ್ರಕ್ಕೆ ಒತ್ತಾಯ

ಕನಕಗಿರಿ: ಬೇಡ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿ ಅ.18ರಂದು ಆತ್ಮರ್ಪಣೆಗಾಗಿ ಸಂವಿಧಾನ ಚಲೋ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದು ಡಾ.ದೊಡ್ಡಯ್ಯಸ್ವಾಮಿ ಅರವಟಗಿಮಠ ಮತ್ತು ಕೆ.ಗಂಗಾಧರ್ ಸ್ವಾಮಿ ಹೇಳಿದರು. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಹಲವು ದಿನಗಳಿಂದ ಜಾತಿ ಪ್ರಮಾಣಪತ್ರಕ್ಕಾಗಿ ಹೋರಾಟ ಮಾಡಲಾಗುತ್ತಿದೆ. ಬೆಂಗಳೂರಿನ ಸ್ವತಂತ್ರ ಉದ್ಯಾನ ವನದಲ್ಲಿ ಸಮಾಜದ ಗುರು ಕಲ್ಯಾಣಶ್ರೀ ನೇತೃತ್ವದಲ್ಲಿ ಹೋರಾಟ ಮಾಡಲಾಗುತ್ತಿದ್ದರೂ ಸಕರ್ಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಶ್ರೀಗಳು ಮತ್ತು ಜಂಗಮ ಒಕ್ಕೂಟದ ಅಧ್ಯಕ್ಷ ವಕೀಲ ಬಿ.ಡಿ.ಹಿರೇಮಠ ನೇತೃತ್ವದಲ್ಲಿ ಸಂವಿಧಾನ ಚಲೋ ಆತ್ಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಭಾಗಿಯಾಗುವ ನಿಟ್ಟಿನಲ್ಲಿ ಗಂಗಾವತಿ, ಕನಕಗಿರಿ ಹಾಗೂ ಕಾರಟಗಿಯಿಂದ ಸುಮಾರು ಐದು ಸಾವಿರ ಜನ ತೆರಳು ಯೋಜನೆ ಸಿದ್ಧಪಡಿಸಿ ದೊಡ್ಡ ಹೋರಾಟ ಮಾಡುವ ಉದ್ದೇಶ ಮಾಡಿ ಕೊಂಡಿದ್ದೇವೆ ಎಂದರು.

ಬಳಿಕ ವಾಗೀಶ್ ಹಿರೇಮಠ ಮಾತನಾಡಿ ಬಿಜೆಪಿ ಸಕರ್ಾರದಲ್ಲಿ ಅನ್ಯಾಯಕ್ಕೊಳಗಾದ ಸಮಾಜಗಳಿಗೆ ನ್ಯಾಯ ಸಿಕ್ಕಿದೆ. ಆದರೆ ಜಂಗಮ ಸಮಾಜಕ್ಕೆ ಮಾತ್ರ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಜಂಗಮ ಸಮಾಜದ ಪ್ರಮುಖರಾದ ವೀರಭದ್ರಯ್ಯ ಸ್ವಾಮಿ ಮೈಲಾಪುರ ಹಿರೇಮಠ, ವಿಶ್ವರಾಧ್ಯಸ್ವಾಮಿ ಸಿದ್ದುಗುಂಟೆ ಮಠ, ರುದ್ರಸ್ವಾಮಿ ಎಂಎಚ್, ಚೆನ್ನಯ್ಯಸ್ವಾಮಿ ಮೈಲಾಪುರ ಮಠ, ಬಸವರಾಜ್ ಸ್ವಾಮಿ ಹಿರೇ ಡಂಕಲ್ಕಲ್, ಮಲ್ಲಯ್ಯ ಸ್ವಾಮಿ ಬೆನಕನಾಳ, ವೀರೇಶ್ ಚುಡಾಮಣಿ, ವೀರೇಶ್ ವಸ್ತ್ರದ, ಪಂಪಯ್ಯ ಸ್ವಾಮಿ ಚೂಡಾಮಣಿ, ಸೋಮಶೇಖರಯ್ಯ ಸ್ವಾಮಿ ಎಂಎಚ್ ಸೇರಿದಂತೆ ಇತರರಿದ್ದರು.