ಪೋಲಿಯೊ ಹನಿ ಹಾಕಿಸುವದರಿಂದ ಮಗುವಿನ ಸಂಪೂರ್ಣ ರಕ್ಷಣೆ; ಡಾ.ರಮೇಶ

ಗಂಗಾವತಿ 05: 5ಐದು ವರ್ಷದೊಳಗಿನ ಮಕ್ಕಳಿಗೆ ಪಾಲಕರು ಎರಡು ಹನಿ ಪೊಲಿಯೋ ಹನಿಯನ್ನು ಹಾಕಿಸುವ ಮೂಲಕ ಮಗುವಿನ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಗಂಗಾವತಿ  ನಗರ ಪ್ರಾಥಮಿಕ ಆರೋಗ್ಯ ಕೇಂದ್ರ(1)  ಆಡಳಿತ ವೈದ್ಯಾಧಿಕಾರಿ ಡಾ.ರಮೇಶ ದರೋಜಿ ಅವರು ಅಭಿಪ್ರಾಯಪಟ್ಟರು. 

ಗಂಗಾವತಿ ನಗರ ಆರೋಗ್ಯ ಕೇಂದ್ರದಲ್ಲಿ ನಡೆದ ಪೋಲಿ ಯೋ ಲಸಿಕಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪೋಷಕರು ಮತ್ತು ಸಾರ್ವಜನಿಕರು ಜಾಗೃ ತರಾಗಿ ಶಾಶ್ವತ ಅಂಗವಿ ಕಲತೆಯನ್ನು ತರಬಲ್ಲ ಪೊಲಿಯೋವನ್ನು ಲಸಿಕೆಯ ಮೂಲಕ ತಡೆಯಲು ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ರಾಷ್ಟ್ರೀಯ ಪಲ್ಸ್‌ ಪೋಲಿಯೊ ಕಾರ್ಯಕ್ರಮ ಮಾರ್ಚ್‌ 3ರಿಂದ 6ವರೆಗೆ ನಡೆಯುತ್ತಿದೆ. ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪೋಲಿಯೊಹನಿ ಹಾಕುವ ಮೂಲಕ ಪೋಲಿಯೊ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ ನಾಲ್ಕು ದಿನಗಳವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಡಾ.ಶರಣಗೌಡ ಹೇರೂರು, ಆರೋಗ್ಯ ಸಿಬ್ಬಂದಿ ಪ್ರಭುರಾಜ, ಸುರೇಶ ಹೆಚ್ , ರಾಜೇಸಾಬ, ವಿರೇಶ,ಬಿಂಧು, ಗುರುರಾಜ ಸೇರಿದಂತೆ ಇತರರು ಇದ್ದರು.