ಸಿಡಿಲು ಬಡಿದು ಮೃತಪಟ್ಟ ಕುಟುಂಬಗಳಿಗೆ ಪರಿಹಾರ ವಿತರಣೆ

Compensation distributed to families of those killed in lightning strikes

ಸಿಡಿಲು ಬಡಿದು ಮೃತಪಟ್ಟ ಕುಟುಂಬಗಳಿಗೆ ಪರಿಹಾರ ವಿತರಣೆ

ದೇವರಹಿಪ್ಪರಗಿ 04:ತಾಲ್ಲೂಕಿನ ಆಲಗೂರ ಹಾಗೂ ಹುಣಶ್ಯಾಳ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟಿರುವ ಕುಟುಂಬಗಳಿಗೆ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಚೆಕ್ ವಿತರಣೆ ಮಾಡಿ ಸಾಂತ್ವನ ಹೇಳಿದರು.ಆಲಗೂರ ಗ್ರಾಮದ ಆಕಾಶ ಹಯ್ಯಾಳದಪ್ಪ ಯಂಕಂಚಿ ಕುಟುಂಬಕ್ಕೆ 5 ಲಕ್ಷ ರೂ.ಹಾಗೂ ಪ್ರಭುಗೌಡ ನಂದಪ್ಪ ದೇವರಗುಡಿ ಎಂಬವರಿಗೆ ಸೇರಿದ ಎತ್ತು ಸಾವನ್ನಪ್ಪಿತ್ತು, ಕುಟುಂಬದವರಿಗೆ 32ಸಾವಿರ ರೂ.ಗಳ ಪರಿಹಾರ ಚೆಕ್ನ್ನು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹಾಗೂ ತಹಸೀಲ್ದಾರ್ ಪ್ರಕಾಶ ಸಿಂದಗಿ ಶನಿವಾರ ವಿತರಣೆ ಮಾಡಿದರು.ಕಳೆದ ವಾರ ಸುರಿದ ಅಕಾಲಿಕ ಮಳೆಯಿಂದ ಸಿಡಿಲು ಬಡಿದು ಮರಣ ಹೊಂದಿದ ಕುಟುಂಬಗಳನ್ನು ಭೇಟಿ ಮಾಡಿದ ಶಾಸಕರು ಸಾಂತ್ವಾನ ಹೇಳಿ ಮರಣ ಹೊಂದಿದ ಕುಟುಂಬಗಳಿಗೆ ಪರಿಹಾರ ವಿತರಿಸಿದರು.ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲೂಕು ಘಟಕದ ಅಧ್ಯಕ್ಷರಾದ ಸಾಯಿಬಣ್ಣ ಬಾಗೇವಾಡಿ, ಮುಖಂಡರುಗಳಾದ ಶೇಖರಗೌಡ ಪಾಟೀಲ, ಶರಣು ಧರಿ, ಹುಸೇನಿ ನಾಗಾವಿ,ಗೋಪಾಲ ಮಾಕೊಂಡ ಸೇರಿದಂತೆ ಆಲಗೂರ ಹಾಗೂ ಹುಣಶ್ಯಾಳ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.ಫೋಟೋ 3ಡಿಎಚಪಿ2