ಲೋಕದರ್ಶನವರದಿ
ರಾಣೇಬೆನ್ನೂರು: ಈ ಕ್ಷೇತ್ರದ ಸವರ್ಾಂಗೀಣ ಅಭಿವೃದ್ಧಿಗೆ ಬಿಜೆಪಿ ಸಕರ್ಾರವು ಸಾಕಷ್ಟು ಅನುದಾನಗಳನ್ನು ಬಿಡುಗಡೆ ಮಾಡುವ ಮೂಲಕ ಶ್ರಮಿಸುತ್ತಿದೆ, ಗುತ್ತಿಗೆದಾರರು ಗುಣಮಮಟ್ಟದ ಕಾಮಗಾರಿಗಳನ್ನು ಮಾಡಬೇಕು, ಅಲ್ಲದೆ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು...
ಶುಕ್ರವಾರ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಟಿಎಸ್ಪಿ ಯೋಜನೆಯಡಿಲ್ಲಿ 24.92 ಲಕ್ಷ ರೂ.ಗಳ ಅನುದಾನದಲ್ಲಿ ಪರಿಶಿಷ್ಟ ಪಂಗಡದವರ ಓಣಿಯಲ್ಲಿ ಹಾಗೂ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಾರ್ವಜನಿಕರು ಕಾಮಗಾರಿ ನಡೆಯುವಾಗ ಸಹಕಾರ ನೀಡಬೇಕು ಎಂದರು.
ಒಟ್ಟು 51 ಕೋಟಿ ರೂ.ಗಳಲ್ಲಿ ತಾಲೂಕಿನ ಮಾಕನೂರ, ಮಾಗೋಡ, ಬಸಲಿಕಟ್ಟಿ ತಾಂಡಾ, ನೂಕಾಪುರ, ಚೌಡಯ್ಯದಾನಪುರ, ಕುದರಿಹಾಳ, ಹೀಲದಳ್ಳಿ, ಮೇಡ್ಲೇರಿ, ಹಿರೇಬಿದರಿ, ಐರಣಿ, ಕರೂರ, ಚಳಗೇರಿ, ಮುಷ್ಟೂರ, ಕೋಟಿಹಾಳ, ಕುಪ್ಪೇಲೂರ, ಚಿಕ್ಕಮಾಗನೂರ, ಮಾಳನಾಯಕನಹಳ್ಳಿ, ಮೆಣಸಿನಹಾಳ ಗ್ರಾಮಗಳಲ್ಲಿ ಇಂದು ವಿವಿಧ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.
ಮಾಜಿ ಸಚಿವ ಆರ್.ಶಂಕರ, ವಿಶ್ವನಾಥ ಪಾಟೀಲ, ಮಂಜುನಾಥ ಓಲೇಕಾರ, ಚೋಳಪ್ಪ ಕಸವಾಳ, ಬಸವರಾಜ ಕೇಲಗಾರ, ರಮೇಶ ಲಮಾಣಿ, ನಾಗರಾಜ ಪೋಲೀಸ್ಗೌಡ್ರ, ವಿನಯಕುಮಾರ ಮಲ್ಲನಗೌಡ್ರ, ರಾಜು ಅಡಿವೆಪ್ಪನವರ, ಜಗದೀಶ ಎಲಿಗಾರ, ವಿಜಯಕುಮಾರ ಹಿತ್ತಲಮನಿ, ಸದಾಶಿವನಗೌಡ ಮಲ್ಲನಗೌಡ್ರ, ನಾಗಪ್ಪ ಬಾಕರ್ಿ, ರೇವಣಯ್ಯ ಹಿರೇಮಠ ಸೇರಿದಂತೆ ಮತ್ತಿತರರು ಇದ್ದರು.