ಪುಣ್ಯಸ್ಮರಣೆ ಹಾಗೂ ನುಡಿ ನಮನ ಕಾರ್ಯಕ್ರಮ

ಪುಣ್ಯಸ್ಮರಣೆ ಹಾಗೂ ನುಡಿ ನಮನ ಕಾರ್ಯಕ್ರಮ Commemoration and Tributes Programme


ಶಿಗ್ಗಾವಿ 09 : ಪಟ್ಟಣದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಿವಾಸದಲ್ಲಿ 11 ರಂದು ಶುಕ್ರವಾರ ದಿವಂಗತರಾದ ಸುಭಾಸ ಚವ್ಹಾಣ, ಗುಡ್ಡಪ್ಪ ಮತ್ತೂರ, ಡಿ.ಎಸ್‌. ಮಾಳಗಿ, ಮಹಾಲಿಂಗಪ್ಪ ಹಳವಳ್ಳಿ ಇವರಪುಣ್ಯಸ್ಮರಣೆ ಹಾಗೂ ನುಡಿ ನಮನ ಕಾರ್ಯಕ್ರಮವನ್ನುಏರಿ​‍್ಡಸಲಾಗಿದೆ. ಈ ಸಭೆಯ ಅಧ್ಯಕ್ಷತೆಯನ್ನುಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ವಹಿಸುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಸಭಾ ಸದಸ್ಯ ಎಂ. ನಾಗರಾಜ,ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಎಸ್‌. ವಿ.ಸಂಕನೂರ, ಪ್ರದೀಪ ಶೆಟ್ಟರ,ಬಿ.ಜೆ.ಪಿ. ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಯುವ ಮುಖಂಡ ಭರತ ಬೊಮ್ಮಾಯಿ ಸೇರಿದಂತೆ ಸಭೆಯಲ್ಲಿ ದಿವಂಗತರ ಕುಟುಂಬಸ್ಥರು,ಅಭಿಮಾನಿಗಳು,ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ತಾಲೂಕ ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ ತಿಳಿಸಿದ್ದಾರೆ.