ದೇವರಹಿಪ್ಪರಗಿ 10: ವಿದ್ಯಾರ್ಥಿಗಳಲ್ಲಿ ಶಿಸ್ತು, ಸಹಬಾಳ್ವೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಎನ್ ಎಸ್ ಎಸ್ ಶಿಬಿರವು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ದೇವರಹಿಪ್ಪರಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಅಶೋಕ ಎಸ್ ಹೆಗಡೆ ಅವರು ಹೇಳಿದರು.
ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ತಮ್ಮ ಕಾಲೇಜಿನ ವತಿಯಿಂದ ಏಳು ದಿನಗಳ ಕಾಲ ಆಯೋಜಿಸಿದ್ದ ಎನ್ ಎಸ್ ಎಸ್ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅವರು ಮಾತನಾಡಿದರು.ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ತಾಲ್ಲೂಕಿನ ಕಸಾಪ ಅಧ್ಯಕ್ಷ ಜಿ ಪಿ ಬಿರಾದಾರ ಅವರು ಮಾತನಾಡಿ ರಾಷ್ಟ್ರಪಿತ ಗಾಂಧೀಜಿಯವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಅಸ್ಥಿತ್ವಕ್ಕೆ ಬಂದ ರಾಷ್ಟ್ರೀಯ ಸೇವಾ ಯೋಜನೆಯು ಸದೃಢ ಹಾಗೂ ಸಶಕ್ತ ಭಾರತದ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದರು. ಶಿಬಿರದ ಕಾರ್ಯಕ್ರಮಾಧಿಕಾರಿ ಶಿವಪುತ್ರ ಜಾಲವಾದಿಯವರು ಏಳು ದಿನಗಳ ಕಾಲ ನಡೆದ ಶಿಬಿರದ ವರದಿ ವಾಚನವನ್ನು ಮಾಡಿದರು.
ಸ್ಥಳೀಯ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಐ ಎಸ್ ನರೂಣಿ, ಕೆಜಿಎಸ್ ಶಾಲೆಯ ಮುಖ್ಯಗುರು ಎಸ್ ಆರ್ ಪಾಟೀಲ, ಪ್ರೌಢಶಾಲೆಯ ಸಹಶಿಕ್ಷಕರಾಗಿರುವ ಎ ಎಸ್ ವಾಲೀಕಾರ, ಮುತ್ತು ಮೆಳ್ಳಿಗೇರಿ ಅವರುಗಳು ಮಾತನಾಡಿದರು.ಸಹ ಕಾರ್ಯಕ್ರಮಾಧಿಕಾರಿಗಳಾದ ಎಮ್ ಎಮ್ ಲಕ್ಷ್ಮೀಶ,ಪುಷ್ಪಾ ಹುಣಶ್ಯಾಳ, ಬಿ ಎಸ್ ಬಿರಾದಾರ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಶಿಬಿರಾರ್ಥಿ ಸಾವಿತ್ರಿ ಮದಭಾವಿ ನಿರೂಪಿಸಿದರೆ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪುಷ್ಪಾ ಹುಣಶ್ಯಾಳ ವಂದಿಸಿದರು.