ಗ್ರಾಪಂ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಲೋಕದರ್ಶನವರದಿ

ರಾಣೇಬೆನ್ನೂರು: ದಿ.ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಬುಧವಾರದಂದು ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ತುಂಗಭದ್ರ ನದಿ ತೀರದಲ್ಲಿ ಹಾಗೂ ಶರಣ ಅಂಬಿಗರ ಚೌಡಯ್ಯನವರ ಐಕ್ಯಮಂಟಪದ ಬಳಿ ಗ್ರಾಪಂ ಹಾಗೂ ವಿವಿಧ ಸಂಘ ಸಂಸ್ಥೆಗಳು ಮತ್ತು ಗ್ರಾಮಸ್ಥರ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

  ಪಿಡಿಓ ಹರೀಶ ಗೊಗ್ಗದ ಸಂದರ್ಭದಲ್ಲಿ ಮಾತನಾಡಿ, ಸ್ವಚ್ಛತೆಯ ಬಗ್ಗೆ ಸರಕಾರ ವಿವಿಧ ರೀತಿಯಲ್ಲಿ ಅಭಿಯಾನವನ್ನು ಮಾಡುತ್ತಿದೆ. ಅದನ್ನು ಯಶಸ್ವಿಗೊಳಿಸುವ ಪ್ರಾಮಾಣಿಕ ಪ್ರಯತ್ನ ಪ್ರಜ್ಞಾವಂತರು ಮತ್ತು ಯುವ ಪಡೆ ಮಾಡಬೇಕಿದೆ. ಸ್ವಚ್ಛತೆಯ ಅರಿವು ಸರ್ವರಲ್ಲೂ ಮೂಡಬೇಕು ಅಂದಾಗ ಸ್ವಚ್ಛಂದ ಪರಿಸರ ನಿಮರ್ಾಣವಾಗಲು ಸಾಧ್ಯ ಎಂದರು.

  ಈ ದೇಶ ಕಂಡ ಮಹಾನ್ ವ್ಯಕ್ತಿಗಳಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಸಹ ಓರ್ವರಾಗಿದ್ದಾರೆ. ಅವರು ಕೇವಲ ರಾಜಕಾರಣಿಯಷ್ಟೇಯಲ್ಲ ಕವಿಗಳು, ಶಾಹರಿಯಲ್ಲಿ ವ್ಯಕ್ತಿತ್ವದ ಮೂಲಕ ನಿಪುಣರಾಗಿದ್ದರು. ಮಾತಿನ ಚತುರರಾಗಿದ್ದ ವಾಜಪೇಯಿ ಅವರಿಗೆ ವಾಜಪೇಯಿ ಅವರೇ ಸರಿಸಾಟಿಯಾಗಿದ್ದರು. ಅವರ ಕೊಡಗೆ ದೇಶಕ್ಕೆ ಅಪಾರವಾಗಿದೆ ಎಂದರು.

  ಈ ದೇಶದಲ್ಲಿರುವ ಎಲ್ಲಾ ರಾಜ್ಯಗಳಲ್ಲೂ ನೀರಿನ ಸಮಸ್ಯೆ ಉಲ್ಬಣವಾಗಬಾರದು, ನೀರಾವರಿ ಸೌಲಭ್ಯ ಎಲ್ಲ ರೈತರಿಗೂ ದೊರೆಯಬೇಕು. 

      ನಾಡಿನ ಜನರಿಗೆ ಕುಡಿಯುವ ನೀರು ಪೂರೈಕೆಯಾಗಬೇಕೆಂಬ ದೂರದೃಷ್ಠಿಯಿಟ್ಟು ಕೊಂಡಿದ್ದ ವಾಜಪೇಯಿವರು ನದಿ ಜೋಡಣೆ ಕನಸು ಕಂಡಿದ್ದರು. ಆದರೆ ಅವರ ಕನಸು ನನಸಾಗುವ ಮುನ್ನವೇ ನಮ್ಮನ್ನಗಲಿದರು ಎಂದು ವಿಷಾಧಿಸಿದರು.

  ಗ್ರಾಪಂ ಸದಸ್ಯೆ ವಿಜಯಲಕ್ಷ್ಮೀ ಮಲ್ಲಾಡದ, ಪ್ರಕಾಶ ಶಿವಪುರ, ಮಂಜುಳಾ ಪೂಜಾರ, ಗುಡ್ಡು ಭತ್ತದ, ಮಲ್ಲಿಕಾಜರ್ುನ ದೀಪಾವಳಿ, ಮಂಗಳಾ ಉಪ್ಪಿನ, ಸುಶೀಲವ್ವ ದಳವಾಯಿ, ರವಿ ತೇಲ್ಕರ, ಭರಮಪ್ಪ ದಳವಾಯಿ, ಕೃಷ್ಣಕುಮಾರ ಎರೇಶೀಮಿ, ಚನ್ನವೀರಯ್ಯ ಪೂಜಾರ, ಫಕ್ಕೀರಪ್ಪ ಹೊನ್ನತ್ತಿ, ಹೊನ್ನಮ್ಮ ಹೀಲದಹಳ್ಳಿ, ಲಕ್ಷ್ಮವ್ವ ತಹಶೀಲ್ದಾರ ಸೇರಿದಂತೆ ಮತ್ತಿತರರು ಇದ್ದರು.