ಮಹಲಿಂಗಪುರ

ತಂಪಾದ ಶುದ್ಧ ಕುಡಿವ ನೀರಿನ ಅರವಟಿಗೆ

ತಂಪಾದ ಶುದ್ಧ ಕುಡಿವ ನೀರಿನ ಅರವಟಿಗೆ

ಲೋಕದರ್ಶನ ವರದಿ 

ಮಹಾಲಿಂಗಪುರ 01: ಸ್ಥಳೀಯ ವಿದ್ಯಾನಗರದ ಶ್ರೀ ಗಜಾನನ ಯುವಕ ಮಂಡಳದ ವತಿಯಿಂದ ನಿಪ್ಪಾಣಿ-ಮುಧೋಳ ಹೆದ್ದಾರಿ ಬಳಿ ತಂಪಾದ ಶುದ್ದ ಕುಡಿವ ನೀರಿನ ಅರವಟಿಗೆ ಸ್ಥಾಪಿಸಿದ್ದಾರೆ.  

ಬೇಸಿಗೆ ಆರಂಭವಾಗಿ ಬಿಸಿಲಿನ ತಾಪ ಹೆಚ್ಚಿದ್ದರಿಂದ ಎರಡು ಮಣ್ಣಿನ ಗಡಿಗೆಗಳಲ್ಲಿ ಶುದ್ದ ಕುಡಿವ ನೀರು ಭರ್ತಿ ಮಾಡಿ ಸಾರ್ವಜನಿಕರ, ದಾರಿಹೋಕರ ದಾಹ ನೀಗಿಸಲು ಸಹಕರಿಸುತ್ತಿದ್ದಾರೆ.   

ಚಂದ್ರಶೇಖರ ಗೊಂದಿ, ಮೋಹನ ಇಬ್ರಾಹಿಂಪುರ, ಹನಮಂತ ಕುರಿ, ನವೀನಭಾಯ್ ಪಟೇಲ, ಶ್ರೀನಿವಾಸ ಗುಂಡಾ, ತಿಮ್ಮಣ್ಣ ಪಾಟೀಲ, ಅಶ್ವಿನ್ ಪಟೇಲ, ಖುಷಿ, ಮಾಹಿ, ಸೋಹಂ, ಯಶ್ ಸೇರಿದಂತೆ ಯುವಕ ಮಂಡಳದವರು ಸೇವೆ ಸಲ್ಲಿಸುತ್ತಿದ್ದಾರೆ. 


ಸುದ್ದಿ ಓದಿ