ಪಾದಚಾರಿ ಮಾರ್ಗ ತೆರವಿಗೆ ನಗರಸಭೆಯ ಕಟ್ಟುನಿಟ್ಟಿನ ಕ್ರಮ

ಪಾದಚಾರಿ ಮಾರ್ಗ ತೆರವಿಗೆ ನಗರಸಭೆಯ ಕಟ್ಟುನಿಟ್ಟಿನ ಕ್ರಮ City Council's strict measures to clear footpaths

ಲೋಕದರ್ಶನ ವರದಿ 

  ದಾಂಡೇಲಿ  24:  ಪಾದಾಚಾರಿ (ಪುಟ್ ಪಾತ್) ರಸ್ತೆಯನ್ನು ತೆರವು ಗೊಳಿಸುವ ಕಾರ್ಯವನ್ನು  ಸ್ಥಳೀಯ ನಗರಸಭೆ  ಹಮ್ಮಿ ಕೊಂಡಿದ್ದು ಇಂದು ಲೆನಿನ್ ಹಾಗು ಜೆ.ಎನ್ ರಸ್ತೆಯಲ್ಲಿ ಅತಿಕ್ರಮಣ ದಾರರ ವಿರೋದದ ನಡುವೆಯೂ ಕಾರ್ಯಗತಗೊಳಿಸಿದರು.  ಸವೋಚ್ಚ ನ್ಯಾಯಾಲಯದ  ಆದೇಶದಂತೆ ಪಾದಾಚಾರಿಗಳಿಗೆ ಹಾಗೂ ಶಾಲಾಮಕ್ಕಳಿಗೆ ಅತೀವ ತೊಂದರೆ ಉಂಟಾಗುತ್ತಿರುವ ಕಾರಣ  ಪುಟ್ ಪಾತ್ ಒತ್ತುವರಿ ಮಾಡಿಕೊಂಡಿದ್ದು ತೆರವುಗೊಳಿಸಲು ನಗರಸಭೆ ಪೌರಾಯುಕ್ತ ವಿವೇಕ್ ಬನ್ನೆ ಅವರ ನೇತ್ರತ್ವದಲ್ಲಿ ಕಾರ್ಯಾಚರಣೆ ಕೈಗೊಂಡಿರುತ್ತಾರೆ. ತೆರವು ಗೊಳಿಸುವ ಹಂತದಲ್ಲಿ  ಕೆಲವರು  ವಿರೋಧ ವ್ಯಕ್ತಪಡಿಸಿದರೆ, ಕೆಲವರು ಸಹಕರಿಸಿ ತಾವೆ ಖುದ್ದಾಗಿ ತೆರವುಗೊಳಿಸಿದರು.  ನಗರಸಭೆ ವ್ಯವಸ್ಥಾಪಕ  ಪರಶುರಾಮ ಶೀಂಧೆ ಕಂದಾಯ ಅಧಿಕಾರಿ, ಬಾಳು ಗವಸ, ಆರೋಗ್ಯ ನೀರೀಕ್ಷಕ ವಿಲಾಸ್ ಹಾಗೂ ಸಿಬ್ಬಂದಿಗಳು ತೆರವು ಕಾರ್ಯದಲ್ಲಿ ಪಾಲಗೊಂಡಿದ್ದರು.