ರಾಣೇಬೆನ್ನೂರಲ್ಲಿ ಶಾಂತಿ ಸಂದೇಶ ಸಾರಿದ ಕ್ರಿಸ್ಮಸ್

ಲೋಕದರ್ಶನ ವರದಿ

ರಾಣೇಬೆನ್ನೂರು: ಇಲ್ಲಿನ ಮಾನವಿ ಕಂಪನಿ ಹತ್ತಿದ ಒಳ್ಳೆ ಕುರುಬನ ದೇವಾಲಯದಲ್ಲಿ ಬುಧವಾರ ಕ್ರಿಶ್ಚಿಯನ್ ಸಮಾಜ ಬಾಂಧವರು ಏಸು ಕ್ರಿಸ್ತನ ಜನಮ್ಮ ದಿನವನ್ನು ಬಹು ವಿಜೃಂಭಣೆಯಿಂದ ಆಚರಿಸಿದರು.

      ಕ್ರಿಸ್ಮಸ್ ಹಬ್ಬದ ಅಂಗವಾಗಿ ಜಗದೆಲ್ಲೆಡೆ ಶಾಂತಿಯನ್ನು ಬೆಳೆಸಲು, ಪ್ರೀತಿಯನ್ನು ಮೊಳೆಸಲು, ನಗರದ ಚಚರ್್ನಲ್ಲಿ ಫ್ಯಾಸ್ಟರ್ ಸೂರಣಗಿ ಅವರ ನೇತೃತ್ವದಲ್ಲಿ ಆರಾಧನಾ ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು. 

ಬೆಳಿಗ್ಗೆ ಆರಾಧನಾ ಕಾರ್ಯಕ್ರಮ ಸಂಗೀತ, ಕೀರ್ತನ ಕಾರ್ಯಕ್ರಮ ನಡೆಸಿಕೊಟ್ಟರು. ಮಹಿಳೆಯರು ಮತ್ತು ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಡೆದವು. ನಂತರ ಅನಾಥರಿಗೆ ದಾನ ಧರ್ಮ ಕಾರ್ಯಕ್ರಮ ನೆರವೇರಿದವು. ಅನಂತರ ಸಿಹಿ ತಿಂಡಿ ಮತ್ತು ಹಣ್ಣು ಹಂಪಲ ವಿತರಣೆ ಮಾಡಲಾಯಿತು. 

 ಹೊಸ ಒಡಂಬಡಿಕೆ ಮತ್ತು ಹಳೇ ಒಡಂಬಡಿಕೆ ಬಗ್ಗೆ ಬೈಬಲ್ ಸಭೆಯಲ್ಲಿ ಹಿರಿಯರು ಬೈಬಲ್ ಓದುವ ಮೂಲಕ ಹಿತವಚನ ನುಡಿದರು. ನಂತರ ಒಬ್ಬರಿಗೊಬ್ಬರು ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಸಂಗೀತ ಸಂಜೆ ರಸ ಮಂಜರಿ ಕಾರ್ಯಕ್ರಮ ನಡೆಯಿತು.

  ಸಂಪತ್ ಕುಮಾರ, ರೋಸ್ಲೀನ್, ಸಂತೋಷಕುಮಾ ಮಾಸಣಗಿ, ಪ್ರದೀಪ ಕಬ್ಬಾರ, ಹನುಮಂತಪ್ಪ ಕಬ್ಬಾರ, ಚಂದ್ರಣ್ಣ ಕಡೂರ, ಸುಚ್ಚಿತ ಮಾಸಣಗಿ, ರಮೇಶ ಬಳ್ಳಾರಿ, ಯಶವಂತ ಗುತ್ತಲ, ಎಲ್.ಜಯರಾಜ, ಪ್ರಭಾಕರ, ರಾಜು ಅಟವಾಳಗಿ, ರತ್ನಮಣಿ, ಶಾಂತಪ್ಪ ಗುತ್ತಲ, ಪ್ರವೀಣ ಮಾಸಣಗಿ, ಸಾಂತರಾಜ, ಚಂದ್ರು ಬಲ್ಲೂರ, ಬಲವಂತ ಮಾಳಗಿ, ಚೇತನ ಕಡೂರ, ಸಂಪತ್ಕುಮಾರ, ಸುಧಾಕರ ಕಡೂರ, ಬಾಬು ಮಾಸಣಗಿ ಇದ್ದರು.

 ಸೇಂಟ್ ಜಾನ್ ಚಚರ್್ನಲ್ಲಿ ಕ್ರಿಸ್ಮಸ್ ಆಚರಣೆ: ಇಲ್ಲಿನ ಶಿದ್ದೇಶ್ವರ ನಗರದ ಸೇಂಟ್ ಜಾನ್ ಚರ್ಚನಲ್ಲಿ ಕ್ರಿಶ್ಚಿಯನ್ ಸಮಾಜದವರು ಪ್ರಾರ್ಥನೆ ಸಲ್ಲಿಸಿದರು. ಸೇಂಟ್ ಜಾನ್ ಚಚರ್್ನ ಆವರಣದಲ್ಲಿ ಗೋದಲಿ ನಿಮರ್ಿಸಲಾಗಿತ್ತು. ರೇವರಂಡ ವಿಜಯಕುಮಾರ ಜಡಗಲ್ ಅವರು ಯೇಸುವಿನ ಬಗ್ಗೆ ಪ್ರವಚನ ಮಾಡಿದರು.