ಕ್ರೀಡೆಯಲ್ಲಿ ರಾಚೋಟೇಶ್ವರ ಶಾಲೆಯ ಮಕ್ಕಳು ಉತ್ತಮ ಸಾಧನೆ
Children of Rachoteshwar School achieve great results in sports
ಕ್ರೀಡೆಯಲ್ಲಿ ರಾಚೋಟೇಶ್ವರ ಶಾಲೆಯ ಮಕ್ಕಳು ಉತ್ತಮ ಸಾಧನೆ
ಇಂಡಿ 06: ತಾಲೂಕಿನ ತಡವಲಗಾ ಗ್ರಾಮದ ವಿನಾಯಕ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ 2025-26ನೇ ಸಾಲಿನ ಕ್ರೀಡಾಕೂಟದಲ್ಲಿ ತಡವಲಗಾದ ಗುರು ರಾಚೋಟೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆಂದು ಶಾಲೆಯ ಮುಖ್ಯ ಗುರುಗಳಾದ ಮಲ್ಲಿಕಾರ್ಜುನ ಯಾಳವಾರ ರವರು ತಿಳಿಸಿದ್ದಾರೆ.
ಈ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪಡೆದುಕೊಂಡ ಮಕ್ಕಳ ವಿವರ ಈ ಕೆಳಗಿನಂತಿವೆ ಬಾಲಕರ ವಿಭಾಗದಲ್ಲಿ ವಾಲಿಬಾಲ್ (ಪ್ರಥಮ) ಬಾಲಕಿಯರ ವಿಭಾಗದಲ್ಲಿ ಥ್ರೋಬಾಲ್ (ಪ್ರಥಮ), ಬಾಲಕರ ವಿಭಾಗದಲ್ಲಿ ಖೋಖೋ (ದ್ವಿತೀಯ) ಬಾಲಕರ ವಿಭಾಗದಲ್ಲಿ ಉದ್ದಜಿಗಿತ ಚನ್ನಪ್ಪ ಕೊಟಗೊಂಡ (ಪ್ರಥಮ) ಗುಂಡು ಎಸೆತ ಅಮಿತ್ ದಲ್ಲಾಳಿ (ದ್ವಿತೀಯ) 400 ಮೀಟರ್ ಓಟದಲ್ಲಿ ಮಲ್ಲಿಕಾರ್ಜುನ ಬೇನೂರ (ದ್ವಿತೀಯ) 600 ಮೀಟರ್ ಓಟದಲ್ಲಿ ವಿಶ್ವನಾಥ ಮಿರಗಿ ( ತೃತೀಯ )ಬಾಲಕಿಯರ ವಿಭಾಗದಲ್ಲಿ 400 ಮೀಟರ್ ಓಟದಲ್ಲಿ ಭುವನೇಶ್ವರಿ ಬಡಿಗೇರ (ತೃತೀಯ, 200 ಮೀಟರ್ ಓಟದಲ್ಲಿ ವಿದ್ಯಾಶ್ರೀ ಮಿರಗಿ (ತೃತೀಯ) ಹಾಗೂ ಚಕ್ರ ಎಸೆತದಲ್ಲಿ ಅಮಿತ್ ದಲ್ಲಾಳಿ (ತೃತೀಯ) ಸ್ಥಾನ ಪಡೆದು ಪ್ರಶಸ್ತಿ ಪಡೆಯುವುದರ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಮಾರ್ಗದರ್ಶನ ನೀಡಿದ ಶಾಲೆಯ ಗುರುಗಳಾದ ಸುಜಿತ್ ದೊಡ್ಡಮನಿ, ಮಂಜುನಾಥ ಎನ್, ಸುಶ್ಮಿತಾ ಎಚ್, ನಿಂಗನಗೌಡ ಬಿರಾದಾರ, ನಾಗರಾಜ್ ಜೋಗಿನ್, ಗಂಗಾ ಎನ್, ರೂಪಾ ಯಾಳವಾರ, ಅಂಬಿಕಾ ಎಸ್ ಇಂಡಿ, ಪೂಜಾ ಎಚ್, ರೂಪಾ ಕೆ, ಶಿಕ್ಷಕ ಮತ್ತು ಶಿಕ್ಷಕಿಯರಿಗೆ ಗುರು ರಾಚೋಟೇಶ್ವರ ವಿದ್ಯಾ ವಿಕಾಸ ಟ್ರಸ್ಟಿನ ಅಧ್ಯಕ್ಷ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಮಾರ್ಗದರ್ಶನ ನೀಡಿದ ಎಲ್ಲ ಗುರುಗಳಿಗೆ ಹಾಗೂ ಎಲ್ಲ ಮುದ್ದು ಮಕ್ಕಳಿಗೆ ಅಭಿನಂದಿಸಿದ್ದಾರೆ.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 