ಮಕ್ಕಳ ಹಬ್ಬ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

ಸಾಣೇಹಳ್ಳಿ, 29: ಇಲ್ಲಿನ ಎಸ್ ಎಸ್ ರಂಗಮಂದಿರದಲ್ಲಿ ಆಯೋಜಿಸಿದ್ದ ‘ಮಕ್ಕಳ ಹಬ್ಬ’ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮಕ್ಕಳು ಸದಾ ಲವಲವಿಕೆಯಿಂದ, ಚಟುವಟಿಕೆಯಿಂದ ಅನೇಕ ಪ್ರಶ್ನೆಗಳನ್ನು ಕೇಳುವರು. ಮಕ್ಕಳ ಜೀವನವೇ ಒಂದು ಸೌಭಾಗ್ಯ. ಮನುಷ್ಯ ಯಾವಾಗಲೂ ಮಗಅುವಾಗಿರಬೇಕು. ಮಗುವಿನ ಮುಗ್ದತೆ ಇದ್ದರೆ ಬದುಕಿನಲ್ಲಿ ಸಂತೋಷ ಕಾಣಬಹುದು. ಮಕ್ಕಳ ಮನಸ್ಸು ಹಸಿ ಗೋಡೆ ಇದ್ದಂತೆ. ಹಿಡಿದುಕೊಳ್ಳುತ್ತೆ. ಹಾಗೆಯೇ ಮಕ್ಕಳ ಮನಸ್ಸು ಹಸಿಗೋಡೆಯಿದ್ದಂತೆ. ಅವರಿಗೆ ಏನೇ ವಿಷಯ ಕಲಿಸಿದರೂ ತಕ್ಷಣ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಎಂತಹ ವಿಷಯಗಳನ್ನು ಬಿತ್ತಬೇಕು ಎನ್ನುವ ಅರಿವು ಬಿತ್ತುವಂಥವರಿಗೆ ಇರಬೇಕು. ಮಕ್ಕಳು ಸಾಂಸ್ಕೃತಿಕ ಶ್ರೀಮಂತಿಕೆಯ ನೆಲೆಗಟ್ಟಿನಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು. ಮಕ್ಕಳಿಗೆ ಪ್ರೋತ್ಸಾಹ ಸಿಕ್ಕರೆ ಏನು ಏಕಾದರೂ ಸಾಧಿಸಬಹುದು. ಸಾಧನೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ.  

ಮನುಷ್ಯ ಪ್ರಯತ್ನ ಪಟ್ಟರೆ ಮುಂದೆ ಒಂದು ದಿನ ಫಲ ಸಿಕ್ಕೇ ಸಿಗುತ್ತೆ. ಯಾವ ಮಕ್ಕಳು ದಡ್ಡರೆಂದು ಬಾವಿಸಬಾರದು. ಅವರಿಗೆ ಬೆನ್ನು ತಟ್ಟಿದರೆ, ಪ್ರೋತ್ಸಾಹಿಸಿದರೆ ಬಹಳ ಎತ್ತರ ಸ್ಥಾನಕ್ಕೆ ಏರಲು ಸಾಧ್ಯ. ಆದ್ದರಿಂದ ದಡ್ಡರೂ ಬುದ್ಧಿವಂತರಾಗಲಿಕ್ಕೆ ಸಾಧ್ಯ ಇದೆ. ಬೇಸಿಗೆ ಶಿಬಿರ ಮಕ್ಕಳ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಮಕ್ಕಳ ಆಸಕ್ತಿಯನ್ನು ಅರಳಿಸುವ ಹಾಗೆ ಪೋಷಕರು ನೋಡಿಕೊಳ್ಳಬೇಕು. ಮಾನವೀಯ ಅಂತಃಕರಣದ ಗುಣಗಳನ್ನು ನೀವೆಲ್ಲರೂ ಬೆಳೆಸಿಕೊಳ್ಳಬೇಕು. ತಾಳ್ಮೆಗಿಂತ ದೊಡ್ಡ ಅಸ್ತ್ರ ಮತ್ತೊಂದಿಲ್ಲ. ಅಂತಹ ತಾಳ್ಮೆ  ನಮ್ಮ ವಿದ್ಯಾರ್ಥಿಗಳು ಮತ್ತು ಪೋಷಕರು ಮೈಗೂಡಿಸಿಕೊಳ್ಳಬೇಕು ಎಂದರು.  

ಪ್ರೋ. ಚಂದ್ರಶೇಖರ್ ಮಾತನಾಡಿ ಮಕ್ಕಳ ಪ್ರತಿಭೆಗೆ ನೀರೆರೆದು ಅದನ್ನು ಪೋಷಣೆ ಮಾಡ್ತಾ ಬಂದಿರುವುದು ಸಾಣೇಹಳ್ಳಿ ಶ್ರೀಗಳು ಹಾಗೂ ಶ್ರೀಮಠ. ಸಾಧನೆಗೆ ಯಾವುದೇ ಮಿತಿ ಇಲ್ಲ. ಅದು ಸಾಧಕನ ಸ್ವತ್ತು. ಮಕ್ಕಳನ್ನು ಪ್ರೀತಿಸ್ಬೇಕು. ಅವರ ತುಂಟತವನ್ನು ನೋಡಿ ಸಂತೋಷ ಪಡಬೇಕು. ಬುದ್ಧಿವಂತರಿಗಿಂತ ಹೃದಯವಂತರು ಬೇಕು. ಹೃದಯವಂತಿಕೆ ಕಲೆಗಳ ಮೂಲಕ ಲಬಿಸುತ್ತದೆ. ಬರೀ ಓದ್ತಾ ಓದ್ತಾ... ಹೋದರೆ ಯಾಂತ್ರಿಕ ವ್ಯಕ್ತಿಯಾಗುವರು. ಮಕ್ಕಳಲ್ಲಿ ಋಣಾತ್ಮಕ ವಿಷಯದ ಬಗ್ಗೆ ಮಾತನಾಡಿ. ಎಂದರು. 

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಿ ಭರತ್, ಐ.ಎ.ಎಸ್ ಎಲ್ಲ ಪೋಷಕರು ಚಿಕ್ಕಮಕ್ಕಳು ಹೇಗೆ ಯೋಚನೆ ಮಾಡಬೇಕು ಎನ್ನುವುದು ಕಲಿಸಿಕೊಡಬೇಕು. ಆಗ ಆ ಮಗು ಮುಂದೆ ಅಂದುಕೊಂಡ ಸಾಧನೆಯನ್ನು ಮಾಡಲಿಕ್ಕೆ ಸಾಧ್ಯ. ಮಕ್ಕಳು ಈಗಿನಿಂದಲೇ ಗುರಿಯನ್ನು ದೊಡ್ಡದಾಗಿಟ್ಟುಕೊಳ್ಳಬೇಕು. ಎಲ್ಲ ಕೆಲಸಗಳಲ್ಲೂ ತನ್ನದೇ ಆದ ಜವಾಬ್ದಾರಿ ಇದೆ. ಯಾವುದೇ ಕೆಲಸ ಮೇಲಲ್ಲ, ಕೀಳಲ್ಲ. ಪ್ರತಿಯೊಬ್ಬರು ದಿನಚರಿಗೆ ತಕ್ಕಂತೆ ಯೋಜನೆ ಹಾಕಿಕೊಂಡು ಕಾರ್ಯರೂಪಕ್ಕೆ ತರಬೇಕು. ಇಲ್ಲಿರುವ ಎಲ್ಲ ವಿದ್ಯಾರ್ಥಿಗಳು ಗೆಳೆಯರ ಬಳಗವನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಒಳ್ಳೆಯ ಪುಸ್ತಕಗಳನ್ನು ಓದಿದರೆ, ಹಾಡನ್ನು ಕೇಳಿದರೆ ನಮ್ಮ ಮನಸ್ಸು ಒತ್ತಡದಿಂದ ದೂರವಿರಬಹುದು. ಬಸವತತ್ವದ ವಿಚಾರಗಳನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಮಠದಲ್ಲಿ ಓದಿದರೆ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡುತ್ತದೆ ಎಂದರು 

ಮುಖ್ಯ ಅತಿಥಿಗಳಾಗಿ ಬಸವರಾಜ ನೆಲ್ಲಿಸರ ಮಾತನಾಡಿ ಶ್ರಮ, ಶ್ರದ್ಧೆ, ಶಿಸ್ತು ಇದ್ದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಲಿಕ್ಕೆ ಸಾಧ್ಯ. ಕರುಣೆ ದಯೆ, ವಾತ್ಸಲ್ಯ, ಶಿಸ್ತು, ಸಂಯಮ ಇವೆಲ್ಲವೂ ಸಾಣೇಹಳ್ಳಿಯ ಶ್ರೀಗಳಲ್ಲಿದೆ. ಇವೆಲ್ಲವೂ ಮೈಗೂಡಿಸಿಕೊಂಡಿದ್ದರಿಂದಲೇ ಸಮಾಜದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಲಿಕ್ಕೆ ಸಾಧ್ಯ. ನಮ್ಮಲ್ಲಿ ಇರುವ ಜ್ಞಾನಾರ್ಜನೆಯನ್ನು ಬಳಸಿಕೊಳ್ಳಬೇಕು ಎಂದರು.  

ಶಿಬಿರಾರ್ಥಿಗಳಿಂದ ವಚನ ಗಾಯನ, ಯೋಗ ಪ್ರಾತ್ಯಕ್ಷಿಕೆ, ನೃತ್ಯರೂಪಕ ವಚನಾಮೃತ,  ನಾಟಕಗಳು: ನಾಯಿ ಮರಿ, ಗೋರುಕಾನ,  ಪುಟ್ಟ ಕತೆ, ಬುದ್ಧಿವಂತ ಮಂಕಿ, ನಚಿಕೇತಾಗ್ನಿ ಪ್ರದರ್ಶನಗೊಂಡವು. ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ವೇದಿಕೆಯ ಮೇಲೆ ಶಿಬಿರದ ಸಂಚಾಲಯ ನಟರಾಜ ಹೊನ್ನವಳ್ಳಿ ಇದ್ದರು. ರಾಜು ಬಿ ಸ್ವಾಗತಿಸಿ ನಿರೂಪಿಸಿದರು.