ಮಕ್ಕಳ ದಿನಾರಣೆ, ಪೋಷಕರ ಶಿಕ್ಷಕರ ಮಹಾ ಸಭೆ
Children's Day, Parent-Teacher General Meeting
ಮಕ್ಕಳ ದಿನಾರಣೆ, ಪೋಷಕರ ಶಿಕ್ಷಕರ ಮಹಾ ಸಭೆ
ಹಾರೂಗೇರಿ, 15 : ಮಕ್ಕಳ ನಿರಂತರ ಹಾಜರಾತಿ ಗುಣಮಟ್ಟದ ಶಿಕ್ಷಣ ಪಡೆಯಲು ಸಹಾಯಕವಾಗಿದೆ. ಮಕ್ಕಳನ್ನು ಪಾಲಕರು ಮನೆ ಕೆಲಸಗಳಿಗೆ ಉಪಯೋಗಿಸದೆ ಅಭ್ಯಾಸದ ಕಡೆಗೆ ಒಲವು ತೋರಿಸುವಂತೆ ಪ್ರೇರೆಪಿಸಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕಿದೆ ಎಂದು ಕನ್ನಡ ಉಪನ್ಯಾಸಕರಾದ ಎನ್ ಎಲ್ ತಟ್ಟಿಮನಿ ಹೇಳಿದರು.
ಪಟ್ಟಣದ ಅನುದಾನಿತ ಶ್ರೀ ಕರೆಸಿದ್ದೇಶ್ವರ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಜರುಗಿದ ಪೋಷಕರ ಶಿಕ್ಷಕರ ಮಹಾ ಸಭೆಯಲ್ಲಿ ಪಾಲಕರನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಮಹಾಸಭೆಯಿಂದ ಶಿಕ್ಷಕರು ಮತ್ತು ಪಾಲಕರಲ್ಲಿ ಒಳ್ಳೆಯ ವಾತಾವರಣ ಬೆಳೆಯುತ್ತದೆ. ಇದೊಂದು ಉತ್ತಮ ಯೋಜನೆ ಎಂದರು. ಮಕ್ಕಳ ದಿನಾಚರಣೆಯಂದು ಚಾಚಾ ನೆಹರು ಅವರ ಭಾವಚಿತ್ರ. ಹಾಗೂ ಸರಸ್ವತಿ ಭಾವ ಚಿತ್ರಕ್ಕೆ ಸಂಸ್ಥೆಯ ನಿರ್ಧೆಶಕರಾದ ಸಿದ್ದಪ್ಪ ಹಾಡಕರ ಅವರು ಪೂಜೆ ಸಲ್ಲಿಸಿದರು.
ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಎಸ್ ಎಮ್ ಚೌಗುಲೆ ಪ್ರಾಸ್ತಾವಿಕ ಮಾತನಾಡಿ ಇಂದಿನ ಸಭೆಯ ಉದ್ದೇಶ ವನ್ನು ಹೇಳಿ ಸರಕಾರದ ಹತ್ತೆಂಟು ಯೋಜನೆಗಳನ್ನು ಪಾಲಕರಿಗೆ ತಿಳಿಸಿದರು. ಒತ್ತಡದ ಜೀವನದಲ್ಲಿ ಪಾಲಕರು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕಂದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಆಯ್ ಬಿ ಬಿರಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಚ್ ಎಸ್ ಕಂಟೆಪ್ಪಗೋಳ ಸ್ವಾಗತಿಸಿದರು. ಎಸ್ ಎ ಕಾಂಬಳೆ ಕಾರ್ಯಕ್ರಮ ನಿರೂಪಿಸಿದರು. ಕೆ ವಾಯ್ ನಾಯಿಕ ವಂದಿಸಿದರು. ಜಿ ಎಸ್ ಹಾಡಕಾರ. ಎಸ್ ಎಮ್ ಕಬಾಡಗಿ.ಬಾಲಾನಂದ ಮಾಳಗಿ. ಸುನೀಲ ಜಂಬಗಿ. ಎಸ್ ಎಸ್ ಸರಿಕಾರ. ಶ್ರೀದೆವಿ ಕಾಂಬಳೆ. ಶ್ರೀದೇವಿ ಪತ್ತಾರ ಉಪಸ್ಥಿತರಿದ್ದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 