ಲೋಕದರ್ಶನ ವರದಿ
ಕೊಪ್ಪಳ 15: ಹುಬ್ಬಳ್ಳಿ-ಚೆನ್ನೈ ನಡುವೆ ನೇರ ಸಂಪರ್ಕ ಕಲ್ಪಿಸಲು ಉತ್ತರ ಕನರ್ಾಟಕ ಭಾಗದ ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ನೂತನವಾಗಿ ಹುಬ್ಬಳ್ಳಿ ಚೆನ್ನೈ ನಡುವೆ ರೈಲು ಗಾಡಿ ವಿಶೇಷ ಎಕ್ಸ್ಪ್ರೇಸ್ ವಾರದಲ್ಲಿ ಎರಡು ದಿನ ಪ್ರಾರಂಭಗೊಂಡಿರುವುದು ಸಂತಸ ತಂದಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ಶನಿವಾರದಂದು ಸಂಜೆ ಇಲ್ಲಿನ ರೇಲ್ವೆ ನಿಲ್ದಾಣದಲ್ಲಿ ಪ್ರಪ್ರಥಮವಾಗಿ ಆಗಮಿಸಿದ ಹುಬ್ಬಳ್ಳಿ ಚೆನ್ನೈ ಎಂಜಿಆರ್ ಸೆಂಟ್ರಲ್ ಎಕ್ಸ್ಪ್ರೇಸ್ ಗಾಡಿಗೆ ಚಾಲನೆ ನೀಡಿ ಮಾತನಾಡಿ ಈ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿಸಲು ನಮ್ಮ ಕೇಂದ್ರ ಸರಕಾರ ಶ್ರಮಿಸಿದೆ ಮತ್ತು ಪ್ರಯಾಣಿಕರ ಬೇಡಿಕೆಗಳಿಗೆ ನೇರ ಸ್ಪಂದನೆ ನೀಡಿ ರೈಲು ಸಂಚಾರ ಆರಂಭಿಸಿದೆ ಎಂದರು.ಕೊಪ್ಪಳ ರೈಲು ನಿಲ್ದಾಣದಲ್ಲಿ ಅಭಿಮಾನಿಗಳಿಂದ ನೂತನ ರೈಲುಗಾಡಿಗೆ ಪೂಜೆ ಸಲ್ಲಿಸಿದ ನಂತರ ಸನ್ಮಾನ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿ ಮುನಿರಾಬಾದ್-ಮೆಹೆಬೂಬ್ನಗರ ರೇಲ್ವೆ ಕಾಮಗಾರಿ ತ್ವರಿತಗತಿಯಲ್ಲಿ ಕೇಂದ್ರ ಸರಕಾರ ಕ್ರಮಕೈಗೊಳ್ಳಲಿದೆ, ಇನ್ನು ಒಂದೆರೆಡು ರೈಲುಗಳು ಈ ಭಾಗದಲ್ಲಿ ಸಂಚಾರಿಸಲಿವೆ ಇದಕ್ಕೆ ಕೇಂದ್ರ ರೇಲ್ವೆ ಸಚಿವ ಸುರೇಶ ಅಂಗಡಿ ಮತ್ತು ಕೇಂದ್ರ ಸರಕಾರಕ್ಕೆ ಅಭಿನಂದಿಸುವುದಾಗಿ ಸಂಸದ ಸಂಗಣ್ಣ ಕರಡಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಗವಿಸಿದ್ದಪ್ಪ ಕರಡಿ, ಮುಖಂಡರಾದ ತೋಟಪ್ಪ ಕಾಮನೂರು, ಬಸವರಾಜ್ ಭೋವಿ, ಗವಿಸಿದ್ದಪ್ಪ ಜಂತಗಲ್, ಗಣೇಶ ಹೊರತಟ್ನಾಳ್, ಹೇಮಲತಾ ನಾಯಕ, ಪ್ರಶಾಂತ ರಾಯ್ಕರ್, ವೈಜನಾಥ ದಿವಟರ್, ಮಂಜುನಾಥ ಮುಸಲಾಪೂರು ಕಾರ್ಯಕರ್ತರು ಅಭಿಮಾನಿಗಳು ಪಾಲ್ಗೊಂಡಿದ್ದರು.