ಧಾರವಾಡದಲ್ಲಿ ದತ್ತಿ ಉಪನ್ಯಾಸ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
Charity lecture, talent award program at Dharwad
ಧಾರವಾಡ 08 : ತಾಲ್ಲೂಕು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಪೌಢಶಾಲೆ, ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ದಿ. ರಾಮಚಂದ್ರ ಚಿಲಕವಾಡ ದತ್ತಿ, ಚೆನ್ನವ್ವ ಚೆನ್ನಪ್ಪ ಐರಸಂಗ ದತ್ತಿ, ಡಾ. ಮಲ್ಲಿಕಾರ್ಜುನ ಸಿಂಧಗಿ ದತ್ತಿ ಹಾಗೂ ದ್ಯಾಮವ್ವ ಕೊಂ. ಮಡಿವಾಳಪ್ಪ ಮೆಣಸಿನಕಾಯಿ ದತ್ತಿ ಅಂಗವಾಗಿ ಉಪನ್ಯಾಸ, ಪ್ರತಿಭಾ ಪುರಸ್ಕಾರ ಹಾಗೂ ಕವಿ ಡಾ. ವಿ.ಸಿ. ಐರಸಂಗ ವಿರಚಿತ ಕವನ ಗಾಯನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ ಉದ್ಘಾಟಿಸಿದರು. ವಿದ್ಯಾರ್ಥಿಗಳು ದುರ್ವ್ಯಸನಗಳಿಂದ ದೂರವಿದ್ದು, ಜ್ಞಾನ ಸಂಪಾದನೆಗೆ ಹೆಚ್ಚಿನ ಮಹತ್ವ ನೀಡಬೇಕು.
ಅರ್ಥಪೂರ್ಣ ಓದು ಅಗತ್ಯವಾಗಿದ್ದು, ಸತತ ಅಧ್ಯಯನದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಹೇಳಿದರು. ಪರಿಶ್ರಮದಿಂದ ಪ್ರಗತಿ ಸಾಧ್ಯವಾಗಿದ್ದು, ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಸಂದರ್ಭಾನುಸಾರ ಪ್ರದರ್ಶಿಸಬೇಕು ಎಂದು ತಿಳಿಸಿದರು.
ಉಪನ್ಯಾಸಕರಾದ ಉಮಾದೇವಿ ಬಾಗಲಕೋಟ ಅವರು ವ್ಯಕ್ತಿತ್ವ ವಿಕಸನ ಹಾಗೂ ಅಧ್ಯಯನ ಕೌಶಲ ಕುರಿತು ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಗೆ ಸನ್ನದ್ಧರಾಗಿ, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಕೆ.ಜಿ. ದೇವರಮನಿ ಉಪಸ್ಥಿತರಿದ್ದರು. ದತ್ತಿ ದಾನಿಗಳಾದ ಡಾ. ರತ್ನಾ ಐರಸಂಗ, ಎಸ್.ಎಂ. ಮೆಣಸಿನಕಾಯಿ ಹಾಗೂ ಲಕ್ಷ್ಮೀ ಚುನ್ನಮರಿ (ಸಿಂಧಗಿ) ಮಾತನಾಡಿದರು. ಡಾ. ವಿ.ಸಿ. ಐರಸಂಗ ವಿರಚಿತ ಕವನವನ್ನು ಪ್ರಮೀಳಾ ಜಕ್ಕಣ್ಣವರ ಹಾಡಿದರು.
ಶಾಲಾ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ನೆರವೇರಿತು. ಧಾರವಾಡ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹಾಂತೇಶ ನರೇಗಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲರಾದ ಎನ್.ಎನ್. ಸವಣೂರ ಸ್ವಾಗತಿಸಿದರು. ಪದ್ಮಾ ಅಂಗಡಿ ನಿರೂಪಿಸಿದರು. ಶಿವಲೀಲಾ ಹತ್ತರಕಿ ವಂದಿಸಿದರು.
ಕಾರ್ಯಕ್ರಮದಲ್ಲಿ ಎಂ.ಜಿ. ಸುಬೇದಾರ, ಎಂ.ಎ. ಭಾವಿಕಟ್ಟಿ, ರಮೇಶ್ ಮೂಲಿಮನಿ, ಕೆ.ಸಿ. ಪ್ರಕಾಶ್, ಬಿ.ಬಿ. ಕೋಟೂರ, ರೇಷ್ಮಾ ಪಾಟೀಲ, ವೀಣಾ ಪಾಟೀಲ, ಚಿಂತನ್ ಹತ್ತೀಕಾಳ, ಶಂಕರಯ್ಯ ದೇವಗಿಮಠ ಸೇರಿದಂತೆ ಪಾಲಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ ಹತ್ಯೆ; ಕಾಣೆಯಾದ ನಾಟಕ, 6 ತಿಂಗಳ ಬಳಿಕ ಪ್ರಕರಣ ಬಯಲು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ
ಬಡೆಕೊಳ್ಳಮಠದ ಬಳಿ ಅಪಘಾತ ತಡೆಗೆ ತಾತ್ಕಾಲಿಕ ಕ್ರಮ: ಮಳೆಗಾಲ ಬಳಿಕ ಶಾಶ್ವತ ಕಾಮಗಾರಿ 