ಸಂಸ್ಕೃತಿ, ಪರಂಪರೆಯ ಗತವೈಭವ ಸೃಷ್ಟಿಸಿದ ಚೈತನ್ಯ ಟೆಕ್ನೋ ಶಾಲಾ ವಾರ್ಷಿಕೋತ್ಸವ

ಹೊಸಪೇಟೆ (ವಿಜಯನಗರ)12: ಚೈತನ್ಯ ಶಾಲೆಯ ಶಾಲಾ ವಾರ್ಷಿಕೋತ್ಸವದಿ. 10ರಂದು ಶಾಲೆಯ ಆವರಣದಲ್ಲಿ ಅದ್ದೂರಿಯಾಗಿ ಜರುಗಿತು. 

ಚೈತನ್ಯ ಟೆಕ್ನೋ ಗತವೈಭವವನ್ನು ಸೃಷ್ಟಿಸಿದ, ಚೈತನ್ಯ ಶಾಲೆಯ ಮಕ್ಕಳು ಕೇವಲ ವಿದ್ಯಾಭ್ಯಾಸದಲ್ಲಿ ಮಾತ್ರವಲ್ಲ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಮೇಲುಗೈ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.  

“ಏಕತಾ” (ಅನೇಕತೆಯಲ್ಲಿ ಏಕತೆ) ವಿಷಯವನ್ನು ಆರಿಸಿಕೊಂಡು ಏರಿ​‍್ಡಸಿದ್ದ ಈ ಅದ್ದೂರಿ ಕಾರ್ಯಕ್ರಮಕ್ಕೆ ಜಿಲ್ಲಾಧಕಾರಿ ದಿವಾಕರ್, ಜಿಲ್ಲಾ ನ್ಯಾಯಾಧೀಶ ಅಬ್ದುಲ್ ರೆಹಮಾನ್, ಪೋಲಿಸ್ ಸೂಪರಿಂಟೆಂಡೆಂಟ್ ಹರಿಬಾಬು, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಚನ್ನಬಸಪ್ಪ, ಸಾಮಾಜಿಕ ಕಾರ್ಯಕರ್ತ ಸಿ.ಎನ್‌.ಗೋವಿಂದಪ್ಪ, ಉಪ ಆಯುಕ್ತರು ವಾಣಿಜ್ಯ ತೆರಿಗೆ ಇಲಾಖೆ ಯಶೋಧ ಹೊಸೂರು, ಹಗರಿಬೊಮ್ಮನಹಳ್ಳಿಯ ನ್ಯಾಯಾಧೀಶ ಅನುಪಮಾ, ದೀಪಾಲಿ ಆಸ್ಪತ್ರೆಯ ವೈದ್ಯ ಶೀರೀಷ್, ಮತ್ತು ಶಾಲೆಯ ಎ.ಜಿ.ಎಂ.ಹರಿಕೃಷ್ಣ, ಬಳ್ಳಾರಿ ಚೈತನ್ಯ ಶಾಲೆಯ ಪ್ರಾಂಶುಪಾಲ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮನಸಾರೆ ಮೆಚ್ಚಿ ಸಂಭ್ರಮಿಸಿದರು.  

ಶಾಲಾ ಮಂಡಳಿಯ, ಪ್ರಾಂಶುಪಾಲರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು. ಮುಂದೆಯೂ ಇಂತಹ ಕಾರ್ಯಕ್ರಗಳನ್ನು ನಿರಂತರವಾಗಿ ಜರುಗಲಿ ಚೈತನ್ಯ ಟೆಕ್ನೋ ಶಾಲೆಯ ಹೆಸರು ಎಲ್ಲೆಲ್ಲಿಯೂ ರಾರಾಜಿಸಲಿ ಎಂದು ಶುಭಕೋರಿದರು.