ಕೇಂದ್ರ ಸರ್ಕಾರ ಬಂಡವಾಳಶಾಹಿ ಪರ ಕಾರ್ಮಿಕರ,ಬದುಕು ಕಷ್ಟಕರ : ಡಿ.ಮುನಿಸ್ವಾಮಿ
Central government is pro-capitalist, making life difficult for workers: D. Muniswamy
ಲೋಕದರ್ಶನ ವರದಿ
ಕಂಪ್ಲಿ 02: ಪಟ್ಟಣದ ಸಂತೆ ಮಾರುಕಟ್ಟೆಯ ಒನಕೆ ಓಬವ್ವ ವೃತ್ತದಲ್ಲಿ ಬೌದ್ಧ ಸಮಾಜ, ಕಟ್ಟಡ ಕಾರ್ಮಿಕ ಸಂಘ, ಛಲುವಾದಿ ಮಹಾಸಭಾ, ಸ್ಮಶಾನ ಕಾರ್ಮಿಕ ಸಂಘ ಮತ್ತು ರೈತ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಹಾಗೂ ಭಗವಾನ್ ಗೌತಮ ಬುದ್ಧ ಜಯಂತಿ ಸಂಬ್ರಮದಿಂದ ಅಸಚರಿಸಲಾಯಿತು.ಕಾರ್ಮಿಕ ಸಂಘದ ಹಿರಿಯ ಮುಖಂಡ ಡಿ.ಮುನಿಸ್ವಾಮಿ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿ, ಕಾರ್ಮಿಕರು ನಾನಾ ವಿಧದಲ್ಲಿ ಶ್ರಮಜೀವಿಗಳಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ.
ಆದರೆ, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧ ನಡೆಯಿಂದ ಬಡ ಕಾರ್ಮಿಕರ ಬದುಕು ಸಂಕಷ್ಟದಲ್ಲಿ ಸಾಗುವಂತಾಗುತ್ತಿದೆ. ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಕೈಗೊಂಬೆಯಾಗಿ ಕೆಲಸ ನಿರ್ವಹಿಸುವ ಜೊತೆಗೆ ಅತಿಹೆಚ್ಚಾಗಿ ಪ್ರತಿಯೊಂದು ರಂಗದಲ್ಲಿ ಖಾಸಗೀಕರಣಕ್ಕೆ ಮುಂದಾಗುವ ಮೂಲಕ ಬಡ, ಮಧ್ಯಮ ವರ್ಗದ ಹೊಟ್ಟೆ ಮೇಲೆ ಬರೆ ಎಳೆದಿದೆ. ರೈತರ, ಕಾರ್ಮಿಕರ ವರವಾಗಿದ್ದ 44 ಕಾಯ್ದೆಗಳಲ್ಲಿ 40 ಕಾಯ್ದೆಗಳನ್ನು ತೆಗೆದಿರುವುದು ಭಾರತ ದೇಶದ ಬಡ ಕಾರ್ಮಿಕರ ದುರಂತಕ್ಕೆ ಕಾರಣವಾಗಿದೆ. ಇದರಿಂದ ಮುಂಬರುವ ದಿನದಲ್ಲಿ ಕಾರ್ಮಿಕರ ಬದುಕು ಇನ್ನಷ್ಟು ಕಠಿಣವಾಗಲಿದೆ.
ಆದ್ದರಿಂದ ಕೂಡಲೇ ಬಡ ಕಾರ್ಮಿಕರು ಎಚ್ಚೆತ್ತು, ಒಗ್ಗೂಡಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವ ಮೂಲಕ ತೆಗೆದ 40 ಕಾಯ್ದೆಗಳನ್ನು ಮರುಕಳಿಸಿ ಜಾರಿಗೆ ತರಬೇಕಾಗಿದೆ. ಕಾರ್ಮಿಕರ 12 ತಾಸಿನ ಕೆಲಸ ಅವೈಜ್ಞಾನಿಕವಾಗಿದೆ. ಆದ್ದರಿಂದ 8 ತಾಸು ಕೆಲಸ ಮಾಡುವುದು ವೈಜ್ಞಾನಿಕವಾಗಿದೆ. ಯಾವುದೇ ಸರ್ಕಾರವಿರಲಿ, ದೇಶದ ಪ್ರತಿಯೊಬ್ಬ ಕಾರ್ಮಿಕರ, ರೈತರ ಬದುಕಿಗೆ ಆಸೆಯಾಗುವ ಜೊತೆಗೆ ಅನುಕೂಲವಾಗುವ ಕಾಯ್ದೆ, ಯೋಜನೆಗಳನ್ನು ಜಾರಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಸಿದ್ದಣ್ಣ ಪರಮೇಶ್ವರ, ಬೌದ್ಧ ಸಮಾಜದ ಜಿಲ್ಲಾಧ್ಯಕ್ಷ ಸುಗ್ಗೇನಹಳ್ಳಿ ರಮೇಶ, ಉಪಾಧ್ಯಕ್ಷ ಪುಟಾಣಿ ಅಂಜಿನಪ್ಪ, ಮುಖಂಡರಾದ ಮಾನ್ವಿ ಮಹೇಶ, ಎಂ.ಸಿ.ಮಾಯಪ್ಪ, ಚನ್ನಬಸುವರಾಜ, ವಸಂತರಾಜ್ ಕಹಳೆ, ಬಿ.ನಾಗೇಂದ್ರ, ಬಂಡಿ ಬಸವರಾಜ, ಹೊನ್ನೂರಸಾಬ್, ಎಂ.ಸಿ.ನಿಂಗಪ್ಪ, ಡಿ.ಮುರಾರಿ, ನಾಯಕರ ತಿಮ್ಮಪ್ಪ, ನಾಗರಾಜ, ಕೊಟ್ಟೂರು ರಮೇಶ ಸೇರಿದಂತೆ ಇತರರು ಇದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 