ಶತಾಯುಷಿ ಗೌರಮ್ಮ ಹಲಗತ್ತಿ ಶತಮಾನೋತ್ಸವ

ಲೋಕದರ್ಶನ ವರದಿ 

ರಾಮದುರ್ಗ: ತಾಲೂಕಿನ ಕಲಹಾಳ ಗ್ರಾಮದ ಶತಾಯುಷಿ ಶ್ರೀಮತಿ ಗೌರಮ್ಮ ಚೆನ್ನಪ್ಪ ಹಲಗತ್ತಿ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಏ.22 ಶನಿವಾರ ಕಲಹಾಳ ಗ್ರಾಮದ ಶ್ರೀಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದರು. 

ಪಟ್ಟಣದ ಪ್ರೆಸ್‌ಕ್ಲಬ್‌ನಲ್ಲಿ ಬಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇವತ್ತಿನ ದಿನಗಳಲ್ಲಿ ವಯಸ್ಸಾದ ತಂದೆ ತಾಯಿಯರನ್ನು ಪ್ರೀತಿಯಿಂದ ನೋಡಿಕೊಳ್ಳದೆ ನಿಷ್ಕಾಳಜಿ ವಹಿಸುತ್ತಿರುವುದನ್ನು ನಾವು ನೋಡುತ್ತೇವೆ. ಪ್ರತಿ ವರ್ಷ ನಮ್ಮ ತಾಯಿಯ ನೆನಪಿಗಾಗಿ ಶ್ರಮಿಕ ಮಹಿಳೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತ ಬಂದಿದ್ದೇವೆ. ಈ ವರ್ಷ ಜನ್ಮಶತಮಾನೋತ್ಸವ ಪೂರೈಸಿದ ಹಿನ್ನಲೆ ಹುಟ್ಟೂರಿನಲ್ಲಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಿ ನಮ್ಮ ಥಾಯಿಗೆ ಇನ್ನಷ್ಟು ಉತ್ತೇಜನ ನೀಡಲು ಬಯಸಿದ್ದೇವೆ ಎಂದು ಹೇಳಿದರು. 

ನೂರಾ ಒಂದು ವಸಂತ ಕಂಡಿರುವ ಕಲಹಾಳ ಗ್ರಾಮದ ಗೌರಮ್ಮ ಚೆನ್ನಪ್ಪ ಹಲಗತ್ತಿ ಅವರ ಜನ್ಮ ಶತಮಾನೋತ್ಸವವನ್ನು ಸಮಾಜಕ್ಕೆ ಮಾದರಿಯ ಆಗುವ ಹಾಗೆ ಗೌರಜ್ಜಿ ಮಕ್ಕಳು ಮತ್ತು ಮೊಮ್ಮಕ್ಕಳು ಸೇರಿಕೊಂಡು ರಕ್ತದಾನ ಶಿಬಿರಿ, ಆರೋಗ್ಯ ಶಿಬಿರ, ಹಿರಿಯ ತಾಯಂದರಿಗೆ ಸನ್ಮಾನ, ಸರಕಾರಿ ಪ್ರೌಢ ಶಾಲೆಯಲ್ಲಿ ದತ್ತಿ, ಸಸಿ ನೆಡುವ ಕಾರ್ಯಕ್ರಮ ಹೀಗೆೆ ವಿದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನ್ಮ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಏ. 22 ರಂದು ಕಲಹಾಳ ಗ್ರಾಮದಲ್ಲಿ ಇಡೀ ದಿನ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. 

ಗದಗದ ಯಡೆಯೂರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಬೀಳಗಿಯ ಗುರುಪಾದ ಶಿವಾಚಾರ್ಯ ಸ್ವಾಮಿಗಳು, ಭೈರನಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. 

ಅತಿಥಿಗಳಾಗಿ ಇಳಕಲ್‌ದ ನಿವೃತ್ತ ಪ್ರಾಚಾರ್ಯ ಜನಪದ ತಜ್ಞ ಡಾ. ಶಂಭು ಬಳಿಗಾರ ಅವರ ವಿಶೇಷ ಉಪನ್ಯಾಸ ಜರುಗಲಿದ್ದು, ಕುಂದಗೋಳ ತಾಲೂಕಿನ ಹರ್ಲಾಪೂರ ಗ್ರಾಮದ ಶಂಭಯ್ಯ ಹಿರೇಮಠ ತಂಡದವರಿಂದ ಗ್ರಾಮೀಣ ಬದುಕಿನಲ್ಲಿ ಹೆಣ್ಣಿನ ಸ್ಥಾನಮಾನದ ಕುರಿತು ಜಾಗೃತಿ ಗೀತೆಗಳು, ಧಾರವಾಡದ ರತಿಕಾ ನೃತ್ಯ ನಿಕೇತನ ತಂಡದಿಂದ ಭರತನಾಟ್ಯ, ಹುಬ್ಬಳ್ಳಿಯ ಜೈ ಸಂತೋಷಿಮಾ ನೃತ್ಯ ತಂಡದಿಂದ ಜನಪದ ನೃತ್ಯಗಳು ಜರುಗಲಿವೆ. 

ಎಂಬತ್ತು 80 ವರ್ಷ ಮೇಲ್ಪಟ್ಟ ಎಲ್ಲ ವರ್ಗದ ಕಲಹಾಳ ಗ್ರಾಮದ ಮತ್ತು ಗೌರಮ್ಮ ಬಂಧುಗಳ 14 ಹೆಣ್ಣು ಮಕ್ಕಳನ್ನು ಸೀರೆ, ಕುಪ್ಪುಸ, ಹಣ್ಣಹಂಪಲ ನೀಡಿ ಸನ್ಮಾನಿ ಅವರ ಸಾರ್ಥಕ ಬದುಕನ್ನು ಗೌರವಿಸುವ ವಿನೂತನ ಕಾರ್ಯಕ್ರಮ. ಮತ್ತು ಗೌರಜ್ಜಿಯ ನೆನಪು ಮರವೊಂದು ಸದಾ ತಂಪು ನೀಡುವಂತೆ ಅವರ ನೆನಪು ಊರಿನ ಜನಕ್ಕೆ ಸ್ಪೂರ್ತಿ ತರುವಂತಾಗಲಿ ಎಂದು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲ ಕಾರ್ಯಕ್ರಮಗಳಿಗೆ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಿ ಯಶಸ್ವಿಗೊಳಿಸುವಂತೆ ಗೌರಜ್ಜಿಯ ಮಕ್ಕಳು ವಿನಂತಿಸಿದ್ದಾರೆ. 



ಬಾಕ್ಸ್‌ ಮಾಡಿ 

ವೈದ್ಯಕೀಯ ತಪಾಸಣೆ ಶಿಬಿರ:  

ಗೌರಜ್ಜಿ ಶತಮಾನೋತ್ಸವ ಪ್ರಯುಕ್ತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದ್ದು, ಸ್ತ್ರೀ ಆರೋಗ್ಯ ತಜ್ಞರು, ಚಿಕ್ಕ ಮಕ್ಕಳ ತಜ್ಞರು, ನೇತ್ರ, ಗಂಟಲು, ಮೂಗು ಆರೋಗ್ಯ ತಜ್ಞರು, ಸಾಮಾನ್ಯ ಕಾಯಲೆಗಳಾದ ಸಂದಿವಾತ, ಮೂಲವ್ಯಾದಿ, ಮಲಬದ್ಧತೆ ಮುಂತಾದ ರೋಗಗಳ ಆರೋಗ್ಯ ತಜ್ಞ ವೈದ್ಯರುಗಳು ಭಾಗವಹಿಸಲಿದ್ದಾರೆ. ಶಿಬರಲ್ಲಿ 10ಕ್ಕೂ ಹೆಚ್ಚು ಅಲೋಪತಿ ಮತ್ತು ಆಯುರ್ವೇದಿಕ ವೈದ್ಯರು ಭಾಗವಹಿಸುವರು. 

ಪತ್ರಿಕಾ ಗೋಷ್ಠಿಯಲ್ಲಿ ಧಾರವಾಡ ಕುಮಾರೇಶ್ವರ ಕಲ್ಚರಲ್ ಟ್ರಸ್ಟ್‌ ಅಧ್ಯಕ್ಷ ಪ್ರಕಾಶ ಬಾಳಿಕಾಯಿ, ರಾಮದುರ್ಗ ಕಲ್ಚರಲ್ ಟ್ರಸ್ಟ್‌ ಅಧ್ಯಕ್ಷ ವಿಶ್ವನಾಥ ಕುಂಬಾರ, ಉಪಾಧ್ಯಕ್ಷ ಈಶ್ವರ ಹಾಲಭಾವಿ, ಶಿವಾನಂದ ಬರದೇಲಿ ಉಪಸ್ಥಿತರಿದ್ದರು.