ಸವದತ್ತಿ ರೇಣುಕಾ ಯಲ್ಲಮ್ಮ ದೇವಿಯ 10ನೇ ವರ್ಷದ ಗಂಗೆಸ್ಥಳ ಮೆರವಣಿಯ ಸಂಭ್ರಮ

ಸವದತ್ತಿ ರೇಣುಕಾ ಯಲ್ಲಮ್ಮ ದೇವಿಯ 10ನೇ ವರ್ಷದ ಗಂಗೆಸ್ಥಳ ಮೆರವಣಿಯ ಸಂಭ್ರಮ Celebrations marking the 10th anniversary of the Savadatti Renuka Yellamma Devi Gangasthala processi

ಲೋಕದರ್ಶನ ವರದಿ 

ಕಂಪ್ಲಿ 05 : ಪಟ್ಟಣದ 9ನೇ ವಾರ್ಡಿನಲ್ಲಿ ಜೆಸ್ಕಾಂ ಬಳಿಯ ಗುಲ್ಬರ್ಗಾ ಕಾಲೋನಿಯಲ್ಲಿ ಮಾಜಿ ಪುರಸಭೆ ಉಪಾಧ್ಯಕ್ಷೆ ಸುಶೀಲಮ್ಮ ಅವರ ಮಗನಾದ ಕೆ.ಸುಧಾಕರ ಅವರ ನೇತೃತ್ವದಲ್ಲಿ ಜನರ ಸಹಕಾರದೊಂದಿಗೆ ಶ್ರಾವಣಮಾಸ ಪ್ರಯುಕ್ತ ಶ್ರೀ ಸವದತ್ತಿ ರೇಣುಕಾ ಯಲ್ಲಮ್ಮ ದೇವಿಯ 10ನೇ ವರ್ಷದ ಗಂಗೆಸ್ಥಳ ಮೆರವಣಿಗೆ ಸಡಗರ ಸಂಭ್ರಮದಿಂದ ಶುಭ ಶುಕ್ರವಾರಂದು ಜರುಗಿತು.   

ಇಲ್ಲಿನ ಕಂಪ್ಲಿ-ಕೋಟೆಯ ತುಂಗಭದ್ರಾ ನದಿಯಲ್ಲಿ ಗಂಗೆಪೂಜೆಯೊಂದಿಗೆ ಅಲ್ಲಿನ ವೆಂಕಟರಮಣ ದೇವಸ್ಥಾನದಿಂದ ಆರಂಭಗೊಂಡು ಭವ್ಯ ಮೆರವಣಿಗೆ ಪಟ್ಟಣದ ಜೋಗಿ ಕಾಲುವೆ, ನಡುವಲ ಮಸೀದಿ,

ಮಾರೆಮ್ಮ ದೇವಸ್ಥಾನ, ಅಂಬೇಡ್ಕರ್ ವೃತ್ತದ ಮೂಲಕ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಸಮಾವೇಶಗೊಂಡಿತು. ಈ ಮೆರವಣಿಗೆಯಲ್ಲಿ ಸುಮಂಗಲಿಯರ ಕುಂಭ, ಕಳಸ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಮೆರವಣಿಗೆಗೆ ರಂಗು ನೀಡಿದವು.  

ರಸ್ತೆಯುದ್ದಕ್ಕೂ ರೇಣುಕಾ ಯಲ್ಲಮ್ಮ ದೇವಿಯ ಉಧೋ ಉಧೋ ಘೋಷಣೆ ಮೊಳಗಿಸುವ ಜೊತೆಗೆ ಕುಂಕುಮ, ಬಂಢಾರ ಎರಚಿಕೊಂಡು, ಶ್ರದ್ದೆಯಿಂದ ದೇವಿ ಗಂಗೆಸ್ಥಳ ಮೆರವಣಿಗೆ ನೆರವೇರಿತು. ದೇವಸ್ಥಾನ ಸೇರಿದಂತೆ ಓಣಿಯಲ್ಲಿ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು.

ಮೆರವಣಿಗೆ ವೇಳೆ ಪಟಾಕಿ ಸದ್ದು ನಕ್ಷತ್ರದಂತೆ ಮೊಳಗಿದವು. ನಂತರ ಯುವ ಮುಖಂಡ ಕೆ.ಸುಧಾಕರ ಮಾತನಾಡಿ, ಇಲ್ಲಿನ 9ನೇ ವಾರ್ಡಿನಲ್ಲಿ 500 ಕುಟುಂಬಗಳೊಂದಿಗೆ ಸುಮಾರು 1600 ಜನ ವಾಸಿಸುತ್ತಿದ್ದಾರೆ.

ಇಲ್ಲಿ ಅತಿ ಹೆಚ್ಚಾಗಿ ಬಡು ಬಡತನದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಇಲ್ಲಿನ ವಾರ್ಡ್‌ ಅನ್ನು ಸ್ಲಂ ವಾರ್ಡ್‌ (ಕೊಳಚೆ ಪ್ರದೇಶ) ಅಭಿವೃದ್ಧಿ ಅಥವಾ ನಿರ್ಮಾಣಕ್ಕಾಗಿ ಈಗಾಗಲೇ ಸ್ಥಳೀಯ ಶಾಸಕ ಜೆ.ಎನ್‌.ಗಣೇಶ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಇದರಿಂದ ಮೂಲಭೂತ ಸೌಲಭ್ಯಗಳೊಂದಿಗೆ ಸ್ಲಂ ವಾರ್ಡ್‌ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದರು. 

ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟಪತಿ, ಚಂದ್ರ​‍್ಪ, ಕಾಸಿ, ಬಸುವ, ರಾಕೇಶ, ಕರಿಯಪ್ಪ, ಪವನ್, ಅನೀಲ್, ಕಿರಣ್, ರಾಜ, ಹುಸೇನಬಾಷಾ, ಚಟ್ನಿ, ರವಿತೇಜಾ, ಚಂದ್ರು, ಯಮನಪ್ಪ, ಸದ್ದಾಮ್, ಮೈನುದ್ಧೀನ್(ರಾಣ) ಸೇರಿದಂತೆ ಸದ್ಭಕ್ತರು ಪಾಲ್ಗೊಂಡಿದ್ದರು.