ಪ್ರತಿ ಟನ್ ಕಬ್ಬಿಗೆ ಸರ್ಕಾರದಿಂದ 3,300 ರೂ. ದರ ನಿಗದಿ ಹಿನ್ನೆಲೆ ವಿಜಯೋತ್ಸವ ಆಚರಣೆ
ಮಹಾಲಿಂಗಪುರ 07: ಕಬ್ಬು ಬೆಳೆಗಾರರ ಪ್ರತಿಭಟವೆ ತೀವ್ರಗೊಂಡ ಬೆನ್ನಲ್ಲೇ ಪ್ರತಿ ಟನ್ (1 ಸಾವಿರ ಕೆಜಿ) ಕಬ್ಬಿಗೆ 3,300 ರೂ. ನ್ಯಾಯಯುತ ಮತ್ತು ಲಾಭದಾಯಕ ದರವನ್ನು ಸರ್ಕಾರ ನಿಗದಿ ಮಾಡಿದೆ. ವಿಧಾನಸೌಧದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಿಎಂ ಸಿದ್ದರಾಮಯ್ಯಸಭೆ ನಡೆಸಿದ ಬಳಿಕ ಈ ಮಹತ್ವದ ನಿರ್ಧಾರಕ್ಕೆ ಬರಲಾಗಿದೆ. ಸರ್ಕಾರದ ನಿರ್ಧಾರಕ್ಕೆ ಕಬ್ಬು ಬೆಳೆಗಾರರು ಒಪ್ಪಿಗೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ.
ಕೇಂದ್ರ ಸರ್ಕಾರ ಶೇ.10.25 ಇಳುವರಿ ಆಧಾರದ ಮೇಲೆ ಪ್ರತಿ ಟನ್ ಕಬ್ಬಿಗೆ 3,550ರೂ.ಟಿ ಆರ್‌ಪಿ ದರವನ್ನು ನಿಗದಿ ಮಾಡಿತ್ತು.ಆದರೆ ಕರ್ನಾಟಕದಲ್ಲಿ ಸರಾಸರಿ ಇಳುವರಿ ಪ್ರಮಾಣ ಶೇ.9.5 ಮಾತ್ರ ಇದೆ. ಹೀಗಾಗಿ 3,550 ರೂ.ನೀಡಲು ಸಾಧ್ಯವಿಲ್ಲ ಎಂದು ಸಕ್ಕರೆ ಕಾರ್ಖಾನೆ ಮಾಲೀಕರು ಪಟ್ಟು ಹಿಡಿದಿದ್ದರು.ಇನ್ನೊಂದು ಕಡೆ ರೈತರು ಗುಜರಾತ್,ಮಹಾರಾಷ್ಟ್ರದಲ್ಲಿ 3,500 ರೂ. ನೀಡುವಾಗ ನಮಗೆ ಯಾಕೆ ಕಡಿಮೆ ಹಣ ನೀಡಲಾಗುತ್ತಿದೆ ಎಂದು ಪ್ರತಿಭಟನೆಗೆ ಇಳಿದಿದ್ದರು.
ಇದರ ಹಿನ್ನೆಲೆಯಲ್ಲಿ ನಗರದ ಚೆನ್ನಮ್ಮ ವೃತ್ತದಲ್ಲಿ ರೈತರು ಸಿಹಿ ಹಂಚಿ ಪಟಾಕಿ ಸಿಡಿಸಿದ್ದರು. ಇದೇ ಸಂದರ್ಭದಲ್ಲಿ ರೈತ ಮುಖಂಡರಾದ ದೇವರೇಶ ಉಳ್ಳಾಗಡಿ, ಮಹಾಲಿಂಗ ಬಿರಾದಾರ, ಮಲ್ಲಪ್ಪ ಯರಡ್ಡಿ, ಬಂದು ಪಕಾಲಿ, ಮಹೇಶ ಜಾಗನೂರು, ಶೇಖರ ಮಗದುಮ, ಮಹಾಲಿಂಗ ಗೋಕಾಂವಿ, , ಶ್ರೀಶೈಲ ರಂಗಾಪುರ, ಮಲ್ಲಯ್ಯ ಚೆಟ್ಟಿ, ರಾಜು ತಾಳಿಕೋಟಿ, ವೆಂಕನಗೌಡ ಪಾಟೀಲ, ದೇವು ತಾಳಿಕೋಟಿ,ಬಸಣ್ಣ ಬಂಡಿಗಿನಿ , ಶ್ರೀಶೈಲ ಅಂಗಡಿ, ಶಂಕರ ಕುಳಿಗುಡ್ಡ, ಸಿದ್ದು ದಲಾಲ, ಮಹಾಂತೇಶ ಹಟ್ಟಿ, , ಶ್ರೀಶೈಲ ಪಾಟೀಲ, ಮಹಾಲಿಂಗ ಪಾಟೀಲ, ಶ್ರೀನಾಥ ಹಲಗಿಗೌಡರ, ಪ್ರಶಾಂತ ಗುಂಜಗಾಂವಿ, ಸಾಗರ ಹಟ್ಟಿ, ವಿಠ್ಠಲ ಪಾಟೀಲ, ಸಚಿನ ಪಾಟೀಲ, ಶಿವಲಿಂಗ ಟಿರ್ಕಿ, ಬಸವರಾಜ ಮಡಿವಾಳ, ಸಿಂದೂರ ಹಲಸಪ್ಪಗೊಳ, ಸೇರಿದಂತೆ ಅನೇಕ ರೈತ ಮುಖಂಡರು ಭಾಗವಹಿಸಿದ್ದರು.