ಹುಕ್ಕೇರಿ ತಾಲೂಕಿನಲ್ಲಿ ಭಕ್ತಿ ಭಾವದಿಂದ ರಂಜಾನ್ ಆಚರಣೆ

ಹುಕ್ಕೇರಿ 11:  ತಾಲೂಕಿನ ಸಂಕೇಶ್ವರ, ಯಮಕನಮರ್ಡಿ, ಪಾಶ್ಚಾಪೂರ ನಗರಗಳಲ್ಲಿ ಭಕ್ತಿ ಭಾವದಿಂದ ಮುಸಲ್ಮಾನ ಬಾಂಧವರು ಸಾಮೂಹಿಕ ಪ್ರಾರ್ಥನೆ ಮಾಡಿ ರಂಜಾನ್ ಆಚರಿಸಿದರು. 

ರಂಜಾನ್ ತಿಂಗಳಿನ ಮೂವತ್ತು ದಿನದ ಉಪವಾಸವು ಇಂದಿನ ನಮಾಜಿನ ನಂತರ ಪೂರ್ಣಗೊಳ್ಳುತ್ತದೆ, ಸೂರ್ಯೊದಯದಿಂದ ಸೂರ್ಯಾಸ್ತದವರಗೆ ಅನ್ನ ನೀರು ಇಲ್ಲದೆ ತಾಳ್ಮೆ, ಸ್ಮರಣೆ, ಪುನರುಥ್ಥಾನದ ಚಿಂತಣೆ, ಆದ್ಯಾತ್ಮಿಕತೆ, ಸತ್ಯ ನಿಷ್ಟೆ, ಸತ್ಕರ್ಮದಂತಹ ಅನೇಕ ಗುಣಗಳನ್ನು ಬೆಳೆಸುವ ಈ ರಂಜಾನ್ ಹಬ್ಬ ಮುಸಲ್ಮಾನರಿಗೆ ವಿಷೇಶವಾದ ದೋಡ್ಡ ಹಬ್ಬವಾಗಿದೆ. 

ಹುಕ್ಕೇರಿ ನಗರದ ಅರ್ಜುನವಾಡ ರಸ್ತೆಯ ಈದ್ಗಾ ಮೈದಾನದಲ್ಲಿ ಬೆಳಗಿನ ಜಾವ ಹನ್ನೊಂದು ಜಮಾತ ಸದಸ್ಯರು ಶುಭ್ರವಾದ ಬಿಳಿ ಬಣ್ಣದ ವಸ್ತ್ರ ಧರಿಸಿ  ಸಾಮೂಹಿಕ ಪ್ರಾರ್ಥನೆ ಮಾಡಿದರು .ನಂತರ ಒಬ್ಬರಿಗೋಬ್ಬರು  ಹಬ್ಬದ ಶುಭಾಶಯ ಹಂಚಿಕೊಂಡ ಸಂಭ್ರಮಿಸಿದರು.ಮಾದ್ಯಮಗಳೊಂದಿಗೆ ಮಾತನಾಡಿದ ಹನ್ನೊಂದು ಜಮಾತ ಅದ್ಯಕ್ಷ ಸಲಿಮ ನದಾಫ ರಂಜಾನ್ ಹಬ್ಬದ ಕೋನೆಯ ದಿನ ಹುಕ್ಕೇರಿ ನಗರ ಮತ್ತು ಸುತ್ತಮುತ್ತಲಿನ ಗ್ರಾಮದ ಮುಸಲ್ಮಾನ ಬಾಂಧವರು ಸಾಮೂಹಿಕ ಪ್ರಾರ್ಥನೆ ಮಾಡಿ ದೇಶದ ಜನರಿಗೆ ಸುಖ ಶಾಂತಿ ಲಭಿಸಲಿ ಮಳೆ ಬೆಳೆ ಚನ್ನಾಗಿ ಬಂದು ರೈತರ ಸುಫಲವಾಗಲಿ ಎಂದು ಅಲ್ಲಾನಲ್ಲಿ ಬೇಡಿಕೋಳ್ಳಲಾಯಿತು ಎಂದರು. ನಂತರ ಮೌಲಾನಗಳಿಂದ ಪ್ರವಚನ ಜರುಗಿತು.ಜಮಾತ ಮುಖಂಡ ಡಿ ಆರ್ ಖಾಜಿ ಮಾತನಾಡಿ ಒಂದು ತಿಂಗಳ ಪರ್ಯಂತ ಉಪವಾಸ ವೃತ ಮಾಡಿ  ಚಂದ್ರನ ದರ್ಶನದ ನಂತರ ಇಂದು ಸಕಲ ಅಂಜುಮನ ಕಮಿಟಿ ಮತ್ತು ಹನ್ನೊಂದು ಜಮಾತ ಸದಸ್ಯರು, ಈದ್ಗಾ ಮೈದಾನಕ್ಕೆ ತೇರಳಿ ಖುಷಿಯಿಂದ ಪ್ರಾರ್ಥನೆ ಮಾಡಿದ್ದೆವೆ, ದೇಶದ ಜನತೆಗೆ ಹಬ್ಬದ ಶುಭಾಶಯ ಎಂದರು.  

ಈ ಸಂದರ್ಭದಲ್ಲಿ  ಹನ್ನೊಂದು ಜಮಾತ ಸದಸ್ಯರಾದ ಬಾಬಾಜಾನ ಖಾಜಿ, ಸಲಿಂ ನದಾಫ್, ಅಹಮ್ಮದ ಬಾಗವಾನ, ಡಿ ಆರ್ ಖಾಜಿ, ದೇಸಾಯಿ ಮೋಕಾಶಿ, ಮುಲ್ಲಾ ಬಾಗವಾನ, ಇರ್ಷಾದ ಮೋಕಾಶಿ, ಶಬ್ಬೀರ ಸನದಿ, ಆದಮ ಖಾನಜಾದೆ, ಮೀರಾಸಾಬ ನದಾಫ, ನಾಶೀರ ಸುತಾರ, ರಾಜು ಮುಜಾವರ ಗಜಬರವಾಡಿ ಮತ್ತು ಅಂಜುಮನ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.ಅದೆ ರೀತಿ ಸಂಕೇಶ್ವರ ನಗರದ ನಿಪ್ಪಾಣಿ ರಸ್ತೆಯ ಈದ್ಗಾ ಮೈದಾನ ದಲ್ಲಿ ಹಾಗೂ ಯಮಕನಮರ್ಡಿ ,ಪಾಶ್ಚಾಪೂರ ಈದ್ಗಾ ಮೈದಾನಗಳಲ್ಲಿ ಮುಸ್ಲಿಂ ಸಮಾಜದ ವಿವಿಧ ಕಮೀಟಿ ಸದಸ್ಯರು, ಮುಸಲ್ಮಾನರು ಸಾಮೂಹಿಕ ಪ್ರಾರ್ಥನೆ ಮಾಡಿ ಶಾಂತ ರೀತಿಯಿಂದ ಅರ್ಥಪೂರ್ಣವಾಗಿ ರಂಜಾನ್ ಹಬ್ಬ ಆಚರಿಸಿದರು.