ಭಗವಾನ್ ಮಹಾವೀರರ ಜಯಂತಿ ಆಚರಣೆ
Celebration of Lord Mahavir Jayanti
ಲಕ್ಷ್ಮೇಶ್ವರ 30: ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಭಗವಾನ್ ಮಹಾವೀರರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಆಚರಿಸಲಾಯಿತು.
ಜಯಂತಿ ಆಚರಿಸಿ ಮಾತನಾಡಿದ ಶಾಲೆಯ ಪ್ರಧಾನ ಗುರುಗಳಾದ ಬಸವರಾಜ ಕುಂಬಾರ ಅವರು ಭಗವಾನ ಮಹಾವೀರರು ಜೈನ ಧರ್ಮದ 24ನೇ ಮತ್ತು ಕೊನೆಯ ತೀರ್ಥಂಕರರಾಗಿದ್ದು, ಅವರ ಸಾರಿಹೋದ ಸಂದೇಶಗಳು ಮಾನವಕುಲಕ್ಕೆ ಶಾಶ್ವತವಾಗಿವೆ ಶಾಂತಿ, ಪ್ರೀತಿ ಮತ್ತು ಆಧ್ಯಾತ್ಮಿಕ ಉನ್ನತಿಯ ಮಾರ್ಗವನ್ನು ತೋರುತ್ತವೆ.ಅಹಿಂಸಾ ಪರಮೋ ಧರ್ಮ ಮಹಾವೀರರ ಅತ್ಯಂತ ಪ್ರಮುಖ ಸಂದೇಶವಿದು. ಕೇವಲ ಮನುಷ್ಯರನ್ನಲ್ಲದೆ, ಪ್ರಾಣಿ-ಪಕ್ಷಿ, ಸೂಕ್ಷ್ಮ ಜೀವಿಗಳಿಗೂ ಹಾನಿ ಮಾಡಬಾರದು ಎಂಬ ಸತ್ಯ ಸಂದೇಶ ಸೇರಿದಂತೆ ಹಲವಾರು ಸಂದೇಶಗಳನ್ನು ಮಾನವ ಕುಲಕ್ಕೆ ಸಾರಿ ಹೋಗಿದ್ದಾರೆ ಅವುಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ ಎಂದರು.
ಈ ಸಮಯದಲ್ಲಿ ಸಿಆರಿ್ಪ ಶ್ರೀನಿವಾಸ್ ಮತ್ತೂರು, ಶಿಕ್ಷಕರಾದ ಆರ್ ಎಂ ಶಿರಹಟ್ಟಿ, ಹೆಚ್ ಡಿ ನಿಂಗರೆಡ್ಡಿ, ಎಂ ಎ ಬಣಕಾರ, ಆರ್ ಕೆ ಉಪನಾಳ, ನೇತ್ರಾವತಿ ಕುಂಬಾರ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಇದ್ದರು
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 