ಸೂರ್ಯ ನಮಸ್ಕಾರ ಹಾಕುವ ಮೂಲಕ ಡಾ.ಮಹಾದೇವ ದೇವರ ಪೂಜ್ಯರ ಹುಟ್ಟುಹಬ್ಬ ಆಚರಣೆ

ಲೋಕದರ್ಶನ ವರದಿ

ಯಲಬುರ್ಗಾ :.ಮ.ನಿ.ಪ್ರ. ಜಗದ್ಗುರು ಡಾ ಮಹಾದೇವ ದೇವರ 34 ನೇ ವರ್ಷದ ಜನ್ಮ ದಿನೋತ್ಸವದ ಪ್ರಯುಕ್ತವಾಗಿ ಯಲಬುರ್ಗಾ ಶ್ರೀಧರ ಮುರಡಿ ಹಿರೇಮಠದ ಗುರು ಬಸವಲಿಂಗೇಶ್ವರ ಶಿವಾಚಾರ್ಯ ಮಹಾ ಸ್ವಾಮಿಗಳು ಹಾಗೂ  ಬಸವಲಿಂಗೇಶ್ವರ ಯೋಗ ತರಬೇತಿ ಕೇಂದ್ರದ ಶಿಬಿರಾರ್ಥಿಗಳು ಮತ್ತು ಮಠದ ಭಕ್ತಾದಿಗಳು ಸೇರಿ  ಪೂಜ್ಯರ ಹುಟ್ಟುಹಬ್ಬವನ್ನು ವಿಭಜನೆಯಿಂದ ಆಚರಿಸಿದರು. ವಿಶೇಷವಾಗಿ ಯಲಬುರ್ಗಾ  ಬಸವಲಿಂಗೇಶ್ವರ ಯೋಗ ಕೇಂದ್ರದ ಶಿಬಿರಾರ್ಥಿಗಳಿಂದ ಪೂಜ್ಯರಿಗೆ ಸೂರ್ಯ ನಮಸ್ಕಾರ ಹಾಕುವ ಮೂಲಕ ವಿಶೇಷ ರೀತಿಯಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದರು.