ಶಾಂತ ರೀತಿಯಿಂದ ರಂಜಾನ್ ಹಬ್ಬ ಆಚರಿಸಿ: ಸಿಪಿಐ ನಾಗರಾಜ ಮಾಢಳ್ಳಿ

ಶಿರಹಟ್ಟಿ 10:  ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಸಿಪಿಐ ನಾಗರಾಜ ಮಾಢಳ್ಳಿ ಅವರ ಅಧ್ಯಕ್ಷತೆಯಲ್ಲಿ ರಂಜಾನ್ ಹಬ್ಬದ ಶಾಂತಿ ಸಭೆ ನಡೆಯಿತು. 

ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,  ಮುಸ್ಲಿಂ ಸಮುದಾಯದವರ ಮಹತ್ತರವಾದ ಹಬ್ಬ ಎಂದರೆ ಅದು ರಂಜಾನ್ ಹಬ್ಬ, ಈ ಹಬ್ಬದಲ್ಲಿ  30 ದಿನಗಳವರೆಗೆ ಮುಸ್ಲಿಂ ಸಮುದಾಯದ ಜನತೆ ಉಪವಾಸವನ್ನು ಮಾಡಿ ಶ್ರದ್ಧಾ ಭಕ್ತಿಯಿಂದ ಆಚರಿಸುವ  ಹಬ್ಬವಾಗಿದ್ದು,ಎಲ್ಲರೂ ಸೇರಿ ಶಾಂತಿ ರೀತಿಯಿಂದ ಪ್ರಾರ್ಥನಾ ಹಾಗೂ ಹಬ್ಬವನ್ನು ಆಚರಣೆ ಮಾಡಿ ಎಂದರು. 

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಪಿಎಸ್ಐ ಶಿವಾನಂದ ಲಮಾಣಿ ಅವರು ಮಾತನಾಡಿ, 

ಲೋಕಸಭಾ ಚುನಾವಣೆ ಹಿನ್ನೆಲೆ  ನೀತಿ ಸಹಿತ ಇರುವುದರಿಂದ ಎಲ್ಲರೂ ಕಾನೂನು ನಿಯಮಗಳನ್ನು ಪಾಲಿಸಿ ಎಲ್ಲರೂ ಹಬ್ಬವನ್ನು ಶಾಂತಿ ರೀತಿಯಿಂದ ಹಬ್ಬವನ್ನು ಆಚರಿಸಿ ಎಂದು ಸಲಹೆ ನೀಡಿದರು.ಈ ಸಮಯದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬುಡನಶಾ ಮಖಾನದಾರ ಮಾತನಾಡಿ, ಶಿರಹಟ್ಟಿ ಪಟ್ಟಣ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿದ್ದು, ಪಟ್ಟಣದಲ್ಲಿ ನಡೆಯುವ ಯಾವುದೇ ಜಾತಿಗಳ ಕಾರ್ಯಕ್ರಮಗಳಿರಲಿ ಯಾರೂ ಕೂಡ ಮತ್ತೊಬ್ಬರ ಮನಸ್ಸಿಗೆ ನೋವಾಗದಂತೆ ಹಾಗೂ ಇತರ ವಿಚಾರಗಳಿಗೆ ಧಕ್ಕೆ ಆಗದಂತೆ ಆಚರಿಸುವುದು ವಾಡಿಕೆಯಾಗಿದ್ದು, 

ರಂಜಾನ್ ಹಬ್ಬದ ದಿನ ಪಟ್ಟಣದ ಮುಖ್ಯ ರಸ್ತೆಗಳ ಮೂಲಕ ಎಲ್ಲ ಮುಸ್ಲಿಂ ಬಾಂಧವರು ಹರಿಪುರ ಹೊರ ವಲಯದಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ, ಎಲ್ಲರೂ ಶಾಂತರೀತಿಯಿಂದ ಪ್ರಾರ್ಥನೆ ಗೈಯುತ್ತೇವೆ. ಈ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯುವುದಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇವೆ ಎಂದು ಹೇಳಿದರು, ಜೊತೆಗೆ ಈ ಸಂದರ್ಭದಲ್ಲಿ ಹಲವಾರು ಮುಸ್ಲಿಂ ಮುಖಂಡರು ರಂಜಾನ್ ಹಬ್ಬದ ಬಗ್ಗೆ ವಿವರಿಸಿ ಹೇಳಿದರು. 

ಈ ಒಂದು ಶಾಂತಿ ಸಭೆಯಲ್ಲಿ ಮುಖಂಡರಾದ ಆಶ್ರತಲಿ ಡಾಲಾಯತ, ಶೌಕತಲಿ ಡಾಲಾಯತ, ಎಸ್ ಎಸ್ ಸಾಮ್ರಾಟ, ಚಾಂದ್ ಮುಳಗುಂದ, ಶೌಕತಲಿ ಬುವಾಜಿ, ಗೌಸುಸಾಬ ಮುಳಗುಂದ, ಮುಸ್ತಾಕಲಿ ಜೋರಗಸ್ತಿ, ಮಾಬುಸಾಬ ಲಕ್ಷ್ಮೇಶ್ವರ, ರಾಯಸಾಬ ಆದರಳ್ಳಿ, ಇಸಾಕ ಅಹಮದ್ ಆದ್ರಳ್ಳಿ, ರಫೀಕ್ ಆದರಹಳ್ಳಿ, ಮಹಮ್ಮದಗೌಸ ಕುಬಸದ, ಸಲ್ಮಾನ ಕುಂದೂರ, ಸಲೀಂ ಲಕ್ಷ್ಮೇಶ್ವರ, ಜಿಲಾನಿ ಆದರಹಳ್ಳಿ, ಮುನ್ನಾ ಮುಧೋಳ, ನಜೀರ ಮಕಾನದಾರ, ನಜೀರ್ ಕಣವಿ, ರಫೀಕ್ ಮುಳಗುಂದ, ಶಮೀರ್ ಅತ್ತಾರ, ಪೋಲಿಸ್ ಇಲಾಖೆಯ ಸಿಬ್ಬಂದಿಗಳಾದ ಸೋಮಶೇಖರ ರಾಮಗಿರಿ, ಫಕ್ಕಿರೇಶ ಲಮಾಣಿ, ಆರ್ ಎಚ್ ಮುಲ್ಲಾ, ಲಕ್ಷ್ಮಿ ದನವೇ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.