ಜಾತಿವಾರು ಜನಗಣತಿ: ಸಾಮಾಜಿಕ ನ್ಯಾಯದ ಶ್ರೇಯೋಭಿವೃದ್ಧಿಗೆ ನಾಂದಿ : ಸಹನಾ ಪಾಲನಕರ

Caste-wise census: A start for the advancement of social justice: Sahana Palanakara

ಗದಗ 10 : ಸ್ವತಂತ್ರ ಬಾರತದ ಮೊಟ್ಟ ಮೊದಲ ಜಾತಿವಾರು ಸಮೀಕ್ಷೆಯಾದ ಜನ ಜಾತಿ ಗಣತಿಯು ಎಂಟು ದಶಕಗಳ ನಂತರದಲ್ಲಿ ಇದೇ ಮೊದಲ ಬಾರಿಗೆ ಕೈಗೊಳ್ಳಲಾಗುತ್ತಿದೆ. ಸನ್ 1931ರ ನಂತರ ಸುಮಾರು ಎಂಬತ್ತು ವರ್ಷಗಳ ಅವಧಿಯಲ್ಲಿ ಬಾರತದಲ್ಲಿ ನಡೆಯುತ್ತಿರುವ ಐತಿಹಾಸಿಕ  ಜನಜಾತಿ ಗಣತಿಯ ಸಮೀಕ್ಷೆಯಾಗಿದೆ. 

ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಜಾತಿವಾರು ಸಮೀಕ್ಷೆ  ಇದು ಕೇವಲ ಹಿಂದುಳಿದ ವರ್ಗಗಳಿಗೆ ಮೀಸಲಾದದ್ದಲ್ಲ. ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರು ಹಾಗೂ ಸ್ಪಶ್ಯ ಜಾತಿಗಳನ್ನು ಒಳಗೊಂಡಂತೆ ಎಲ್ಲಾ ಜಾತಿ ವರ್ಗಗಳ   ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಾಗಿದೆ.ಇಂತಹದೊಂದು ಸಮೀಕ್ಷೆ ನಡೆದರೆ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರ ವಿವರ ಸ್ಪಷ್ಟವಾಗುತ್ತದೆ. ಇಲ್ಲಿ ಹಿಂದುಳಿದ ವರ್ಗ ಎಂದರೆ  ದಲಿತರು, ಶೂದ್ರರು, ಅಲ್ಪಸಂಖ್ಯಾತರು, ಅಲೆಮಾರಿಗಳು, ಆದಿವಾಸಿಗಳು ಎಲ್ಲರೂ ಆಗುತ್ತಾರೆ. 

ಮಂಡಲ್ ಕೇಸ್ ಎಂದು ಕರೆಯಲಾಗುವ ಇಂದ್ರ ಸಹಾನಿ ಗಿ ಗೌರನಮೆಂಟ್ ಆಪ್ ಇಂಡಿಯಾಈಗ ಹಿಂದುಳಿದ ಪಟ್ಟಿಯ ಪ್ರವರ್ಗ-1 ರಲ್ಲಿ 95 ಜಾತಿಗಳಿವೆ, ಪ್ರವರ್ಗ2 (ಚಿ)ನಲ್ಲಿ 102 ಜಾತಿಗಳಿವೆ, ಪ್ರವರ್ಗ 2(ಛ)ನಲ್ಲಿ ಮುಸ್ಲಿಂ ಸಮುದಾಯವಿದ್ದು ಪ್ರವರ್ಗ 3(ಚಿ)ರಲ್ಲಿ ಒಕ್ಕಲಿಗರು ಹಾಗೂ ಇತರೆ ಸಮಾನಾಂತರ ಬೆರಳೆಣೆಯಷ್ಟು ಜಾತಿಗಳಿದ್ದರೆ ಪ್ರವರ್ಗ 3(ಛ)ನಲ್ಲಿ ವೀರಶೈವ/ಲಿಂಗಾಯತ ಸಮುದಾಯವಿದೆ, ಅಂತೆಯೇ ಎಸ್‌.ಸಿ.ಪಟ್ಟಿಯಲ್ಲಿ 101 ಜಾತಿಗಳಿದ್ದಂತೆ ಎಸ್‌.ಟಿ.ಪಟ್ಟಿಯಲ್ಲಿಯೂ ಅನೇಕ ಜಾತಿಗಳಿವೆ. ಈ ಎಲ್ಲಾ ಪಟ್ಟಿಗಳನ್ನು ವಿಂಗಡಿಸಿರುವುದು 1931ರ ಜಾತಿಗಣತಿಯ ಪ್ರೊಜೆಕ್ಟೆಡ್ ಪಾಪುಲೇಷನ್ ಹಾಗೂ ಆಯಾ ಆಯೋಗಗಳ ಹಾಗೂ ಸರ್ಕಾರಗಳ ಆಯಾ ಸಂಧರ್ಭ ಒತ್ತಡಗಳಿಂದ ಮಾಡಲ್ಪಟ್ಟಿದೆ. ಅಂತೆಯೇ ಮಂಡಲ್ ಕೇಸ್ ಎಂದು ಕರೆಯಲಾಗುವ ಇಂದ್ರ ಸಹಾನಿ ಗಿ ಗೌರನಮೆಂಟ್ ಆಪ್ ಇಂಡಿಯಾ ಪ್ರಕರಣದಲ್ಲಿ ಆಯಾ ಹಿಂದುಳಿದ ವರ್ಗಗಳ ಆಯೋಗಗಳಿಂದ ಸಾಮಾಜಿಕ ಶೈಕ್ಷಣಿಕ ಜನಗಣತಿ ನಡೆಸಬೇಕೆಂಬ ನಿರ್ದೇಶನವಿದೆ.            

ಸಂವಿಧಾನ ಶಿಲ್ಪಿ ಮಹಾನಾಯಕ ಡಾ.ಬಿ.ಆರ್‌.ಅಂಬೇಡ್ಕರ್‌ರ ಪರಿಕಲ್ಪನೆಯ ಈಡೇರಿಕೆಗೆ ನಾಂದಿ : ಡಾ.ಬಿ.ಆರ್‌.ಅಂಬೇಡ್ಕರ್‌ರವರು ರಚಿಸಿರುವ ಬಾರತದ ಸಂವಿಧಾನದ 15(4) ಹಾಗೂ 16(4) ಅನುಚ್ಛೇದಗಳಡಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ವಿಶೇಷ ಉಪಬಂಧಗಳನ್ನು ಕಲ್ಪಿಸಲಾಗಿದೆ. ಈ ಉಪಬಂಧಗಳಡಿ ಹಿಂದುಳಿದ ವರ್ಗಗಳಿಗೆ ವೃತ್ತಿಪರ ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಹಿಂದುಳಿದ ವರ್ಗಗಳು ಎಂದು ಕರೆಯಲಾಗುವ ಜಾತಿ ಮತಗಳಲ್ಲಿ ಮುಸಲ್ಮಾನರು, ಕ್ರೈಸ್ತರು, ಜೈನರು, ಬೌದ್ಧರೊಂದಿಗೆ ಎಲ್ಲ ಅಸ್ಪಶ್ಯರನ್ನು ಒಳಗೊಂಡಂತೆ ಗುರುತಿಸುವ ಸಲುವಾಗಿ ಪ್ರತಿ ರಾಜ್ಯದ ಜನಸಂಖ್ಯೆಯ ಜಾತಿವಾರು ವಿವರಗಳನ್ನು ತಿಳಿಯುವುದು ತುಂಬ ಅವಶ್ಯಕವಾಗಿರುತ್ತದೆ.ಇದರಿಂದಾಗಿ ರಾಜ್ಯ ಸರಾಸರಿಯೊಂದಿಗೆ ಅವರ ಶೈಕ್ಷಣಿಕ ಮತ್ತು ಸಾಮಾಜಿಕ ಮಟ್ಟವನ್ನು ತುಲನೆ ಮಾಡಲು ಸಾಧ್ಯವಾಗುತ್ತದೆ. ಜನಗಣತಿಯ ಮೂಲಕ ಕ್ರಮವಾಗಿ ಜನಸಂಖ್ಯೆ , ಅಕ್ಷರಸ್ಥರ , ಪದವೀಧರರ , ವೈದ್ಯರ , ಇಂಜಿನಿಯರ್‌ಗಳು, ವಕೀಲರೇ ಮುಂತಾದವರ  ಹಾಗೂ ವೃತ್ತಿಪರರ  ಮತ್ತು ಸರ್ಕಾರಿ ನೌಕರರ ವಿವರ ಈ ಅಂಕಿಅಂಶಗಳ ಜೊತೆಗೆ ಒಟ್ಟಾರೆ ಜನಸಂಖ್ಯೆಯ ಅಂಕಿಅಂಶಗಳು ಲಭ್ಯವಾದರೆ ಮಾತ್ರ ಸಾಧ್ಯ. 

ವಿಪುಲ ಮುಕ್ತ ಅವಕಾಶ ದೊರಕಲು ಜನಜಾತಿ ಸಮೀಕ್ಷೆ ನೆರವುದಾಯಕ: 1931ರಲ್ಲಿದ್ದ ಕುಶಲಕರ್ಮಿಗಳ ಕುಲ ವೃತ್ತಿಗಳು, ಕೃಷಿಗೆ ಸಂಬಂಸಿದ ವೃತ್ತಿಗಳು ಇಂದು ನಶಿಸಿ ಹೋಗಿವೆ, ಇಂದಿನ ಯಂತ್ರನಾಗರೀಕತೆ ಕೃಷಿಕರನ್ನು, ಕುಶಲಕರ್ಮಿಗಳನ್ನು ಬರಿಗೈ ಮಾಡಿ ನಿರುದ್ಯೋಗಕ್ಕೆ ತಳ್ಳಿವೆ. ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳು ಸಂವಿಧಾನಬದ್ದ ಮೀಸಲಾತಿ ನೀತಿಯಿರುವ ಸರ್ಕಾರದಲ್ಲಿ ಉದ್ಯೋಗ ಸೃಷ್ಠಿಯೇ ಆಗದಂತೆ ನೋಡಿಕೊಂಡಿವೆ ಅಂತೆಯೇ ಖಾಸಗೀ ಕ್ಷೇತ್ರದಲ್ಲಿ ಅಪಾರ ಉದ್ಯೋಗ ಅವಕಾಶವಿದ್ದು ಅಲ್ಲಿ ಸಂವಿಧಾನಬದ್ದ ಮೀಸಲಾತಿಯೇ ಇಲ್ಲದಂತಾಗಿದೆ, ಅದಕ್ಕಾಗಿ ಶೈಕ್ಷಣಿಕ-ಸಾಮಾಜಿಕ ವಿವರಗಳು ಅನಿವಾರ್ಯವಾಗಿವೆ, ಅಂತೆಯೇ ಮೀಸಲಾತಿ ವಿರೋಧಿಗಳು ಅಪಾದಿಸುವಂತೆ ಅನರ್ಹರಿಗೆ ಮೀಸಲಾತಿ ಸಿಗುತ್ತದೆ ಎಂಬ ಆರೋಪಗಳಿಗೆ ಉತ್ತರಗಳನ್ನು ಕಂಡುಕೊಳ್ಳಬೇಕಿದೆ. ಇವೆಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸದರಿ ಸಮೀಕ್ಷೆ ಅನಿವಾರ್ಯ. ಇಲ್ಲಿ ಸತ್ಯ ಹೊರ ಬೀಳುವುದರಿಂದ ನಿಜಕ್ಕೂ ದೊರಕಬೇಕಾದವರಿಗೆ ಸರ್ಕಾರಿ ಸವಲತ್ತು ಹಾಗೂ ಮೀಸಲಾತಿಗಳು ಸಿಗಲು ಅನುಕೂಲವಾಗುತ್ತದೆ.ಪರಿಪೂರ್ಣ ಯಶಸ್ವಿ ಜನಜಾತಿ ಗಣತಿಯ ಸಮೀಕ್ಷೆಗಾಗಿ ಸಿಬ್ಬಂದಿಗಳು  ಪರಿಗಣಿಸಬೇಕಾದ 55 ಸಂಗತಿಗಳ ಅವಲೋಕನ : ದೇಶದ ನಾಗರಿಕರ ಜನಜಾತಿ ಗಣತಿಯಲ್ಲಿ ಸಮೀಕ್ಷಾ ಸಿಬ್ಬಂದಿಗಳು ನಾಗರಿಕರ ಕುಟುಂಬದ ಮನೆ ಮನೆಗೆ ತೆರಳಿದಾಗ ಅವರ ಮತದಾರ ಪಟ್ಟಿಯಲ್ಲಿನ ಕ್ರಮ ಸಂಖ್ಯೆಯಿಂದ ಪ್ರಾರಂಭವಾಗುವ ಜನಜಾತಿ ಗಣತಿಯು ಕುಟುಂಬದ ಮುಖ್ಯಸ್ಥರ ಮತ್ತು ಸದಸ್ಯರ ಹೆಸರು ಕುಟುಂಬದ ಮುಖ್ಯಸ್ಥರೊಂದಿಗಿನ ಇತರೆ ಸದಸ್ಯರ ಕೌಟುಂಬಿಕ ಸಂಬಂಧ, ಲಿಂಗ, ಧರ್ಮ, ಜಾತಿ,ಉಪಜಾತಿ, ಜಾತಿಗೆ ಇರುವ ಇತರೆ ಪರ್ಯಾಯ ಹೆಸರು,ಪೂರ್ಣಗೊಂಡ ವಯಸ್ಸು ವರ್ಷದ ಒಳಗಿನ ಮಗುವಿಗೆ ಶೂನ್ಯ, ಆನಂತರ ವರ್ಷದ ಲೆಕ್ಕದಲ್ಲಿ ವಯಸ್ಸು, ಮಾತೃ ಭಾಷೆ, ಆಧಾರ ಕಾರ್ಡ್‌ ಸಂಖ್ಯೆ, ಚುನಾವಣೆ ಗುರುತಿನ ಚೀಟಿ ಸಂಖ್ಯೆ, ವಿಕಲಚೇತನರ ವಿವರ, ವೈವಾಹಿಕ ಸ್ಥಾನಮಾನ, ವಿವಾಹದ ಸಮಯದಲ್ಲಿನ ವಯಸ್ಸು, ಶಾಲೆಗೆ ಸೇರಿದ ಸಮಯದಲ್ಲಿನ ವಯಸ್ಸು,ಶಾಲೆಯ ವಿಧ ವಿದ್ಯಾಭ್ಯಾಸದ ವಿವರ , ಶಾಲೆ ಬಿಟ್ಟಾಗಿನ ತರಗತಿ ಮತ್ತು ವಯಸ್ಸು, ಶಾಲೆ ಬಿಡಲು ಕಾರಣ, 17 ರಿಂದ 40 ವರ್ಷದವರು ಶಿಕ್ಷಣ ಮುಂದುವರಿಸದಿರಲು ಕಾರಣ,ಅನಕ್ಷರಸ್ತರಾಗಿರಲು ಕಾರಣ, ನಿರ್ವಹಿಸುತ್ತಿರುವ ಕೆಲಸ ಅಥವಾ ವೃತ್ತಿ,  ಸರಕಾರಿ ಅಥವಾ ಖಾಸಗಿ ಕ್ಷೇತ್ರದಲ್ಲಿ ಸೇವೆ ಅಥವಾ ಉದ್ಯೋಗ, ಪಡೆಯುತ್ತಿರುವ ವೇತನ ಅಥವಾ ಪಿಂಚಣಿ,ನಿರ್ವಹಿಸುತ್ತಿರುವ ಉದ್ಯೋಗ ಅಥವಾ ವ್ಯಾಪಾರ, ಸಾಂಪ್ರದಾಯಿಕ ವೃತ್ತಿ ಅಥವಾ ಕುಲ ಕಸಬಗಳ ವಿವರ, ಸದರಿ ಕಸಬು ಮುಂದುವರಿಡಿದೆಯೇ, ಸದರಿ ಕಸಬಿನಿಂದ ಬಂದ ಕಾಯಿಲೆ,ಅಸಂಘಟಿತ ಕ್ಷೇತ್ರದಲ್ಲಿಯ ದಿನಗೂಲಿ ಕೆಲಸಗಾರರು, ವಾರ್ಷಿಕ ಆದಾಯ, ಆದಾಯ ತೆರಿಗೆ ಪಾವತಿದಾರರೇ, ಬ್ಯಾಂಕ್ ಖಾತೆ ಹೊಂದಿದ್ದೀರಾ, ಸೈಕ್ಷಣಿಕ, ಸೌಲಭ್ಯಗಳು ಉದ್ಯೋಗ ಸೌಲಭ್ಯಗಳು, ಜಾತಿ ಪ್ರಮಾಣ ಪತ್ರ ಹೊಂದಿರುವ ಕುರಿತು, ಅಲೆಮಾರಿ, ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ್ದೀರಾ, ಜನಪ್ರತಿನಿದಿಗಲಾಗಿದ್ದಲ್ಲಿ ಮತ್ತು ಪದಾಧಿಕಾರಿಗಲಾಗಿದ್ದಲ್ಲಿ ನಿಗಮ ಮಂಡಳಿ, ಸಹಕಾರಿ ಸಂಘ, ಸರಕಾರೇತರ ಸಂಸ್ಥೆಗಳಲ್ಲಿ ಸದಸ್ಯ, ಪದಾಧಿಕಾರಿಯಾಗಿದ್ದಲ್ಲಿ ಅದರ ವಿವರ, ಕುಟುಂಬದವರು ಹೊಂದಿರುವ ಒಟ್ಟು ಜಮೀನು ಕುಟುಂಬದ ಸಾಲದ ವಿವರ, ಕೃಷಿ ಸಂಭಂಧಿತ ಚಟುವಟಿಕೆಗಳ ವಿವರ, ಕುಟುಂಬ ಹೊಂದಿರುವ ಜಾನುವಾರುಗಳ ಸಂಖ್ಯೆ, ಸ್ತೀರಾಸ್ತಿ, ಚರಾಸ್ಥಿ, ಸರಕಾರದಿಂದ ಪಡೆದುಕೊಂಡ ಸವಲತ್ತು, ಪಡಿತರ ಚೀಟಿ ಸಂಖ್ಯೆ ಹಾಗೂ ವಿವರ, ರಹವಾಸದ ವಿವರ ಮತ್ತು ಸ್ವರೂಪ, ನಿವೇಶನ, ಕುಡಿಯುವ ನೀರಿನ ಮೂಲ, ಸೌಚಾಲಯ ವ್ಯವಸ್ಥೆ, ಅಡುಗೆಗೆ ಬಳಸುವ ಪ್ರಮುಖ ಇಂಧನ, ದೀಪದ ಮೂಲ, ಹೀಗೆ ಒಟ್ಟು 55 ಪ್ರಶ್ನೆಗಳನ್ನು ಒಳಗೊಂಡ ದೇಶದ ನಾಗರಿಕರ ಜನ ಜಾತಿ ಗಣತಿಯ ಪರಿಪೂರ್ಣ ಪ್ರಕ್ರಿಯೆಯಾಗಿರುತ್ತದೆ. 

ದೇಶದ ಸಮರ್ಗ ಜನತೆಯ ಹಿತಕ್ಕಾಗಿ ಮಾಡುತ್ತಿರುವ ಈ ಸಂವಿಧಾನಬದ್ಧ ಜನಜಾತಿ ಗಣತಿಯ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರು ಸಕ್ರಿಯವಾಗಿ ತೊಡಗಿಸಿಕೊಂಡು ಈ ಐತಿಹಾಸಿಕ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಸಮಸ್ತ ನಾಗರಿಕರ ಹಿತದೃಷ್ಟಿಯಿಂದ ಸೌಜನ್ಯತಾ ಸಮಗ್ರ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸಹನಾ ರಾಘವೇಂದ್ರ ಪಾಲನಕರ ಜನಾಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. 

ಪ್ರಸಕ್ತ ಜನಜಾತಿ ಗಣತಿಯ ಪ್ರಕ್ರಿಯೆಯ ಅವೈಜ್ಞಾನಿಕ ಅಪೂರ್ಣ ಸಮೀಕ್ಷಾ ವಿಧಾನ : ಇದೇ ದಿನಾಂಕ 5 ರಿಂದ ಪ್ರಾರಂಭವಾದ ಜನಜಾತಿ ಗಣತಿಯ ಸಮೀಕ್ಷಾ ಸಿಬ್ಬಂದಿಗಳು ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯೊಂದಿಗೆ ನಾಗರಿಕರ ಮನೆ ಮನೆಗೆ ತೆರಳಿ  ನಾಗರಿಕರ ಹೆಸರು ಮತದಾರರ ಪಟ್ಟಿಯಲ್ಲಿ ಇದ್ದಂತೆ ಅನುಕ್ರಮ ಸಂಖ್ಯೆಯನ್ನು ತಮ್ಮ ಮೊಬೈಲ್ ನಲ್ಲಿ ಧಾಖಲಿಸಿಕೊಂಡು ಕುಟುಂಬದ ಮುಖ್ಯಸ್ಥರನ್ನು ಗುರುತಿಸಿ ಅವರ ಅವಲಂಬಿತರು ಅದರಲ್ಲೂ ಮತದಾರರನ್ನು ಮಾತ್ರ ಧಾಖಲಿಸುವ ಮೂಲಕ ಜನಜಾತಿ ಗಣತಿ ಪ್ರಕ್ರಿಯೆ ಪೂರ್ಣಗೊಳಿಸುತ್ತಿರುವರು ನಾಗರಿಕರ ಆ ಒಂದು ಕುಟುಂಬದ ಇನ್ನಿತರೇ ಯಾವುದೇ ಮಾಹಿತಿಯನ್ನು ಪಡೆಯದೇ ಕೇವಲ ನಿಗದಿತ ಮತದಾರರನ್ನು ಧಾಖಲಿಸಿಕೊಂಡು ಹೋಗುತ್ತಿರುವರು. ಇದನ್ನು ಪ್ರಜ್ಞಾವಂತರು ಜನಜಾತಿ ಗಣತಿಯ ಸಿಬ್ಬಂದಿಗಳಿಗೆ ಪ್ರಶ್ನಿಸಲಾಗಿ ನಮಗೆ ಇದಿಷ್ಟೇ ಮಾಹಿತಿಯನ್ನು ಧಾಖಲಿಸಲು ಆದೇಶಿಸಲಾಗಿದೆ. ಇನ್ನಿತರೇ ಮಾಹಿತಿ ನಮಗಿಲ್ಲ ಎಂದು ಹಾರಿಕೆಯ ಉತ್ತರ ನೀಡುವ ಮೂಲಕ ಅಪೂರ್ಣ ಜನಜಾತಿ ಗಣತಿ ಮಾಡುತ್ತಿರುವರು.  ಈ ಒಂದು ಅವೈಜ್ಞಾನಿಕ ಅಸಂಭದ್ದ ಜನಜಾತಿ ಗಣತಿಯಾಗುತ್ತಿರುವುದನ್ನು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ವೈಜ್ಞಾನಿಕ ಜನಜಾತಿ ಗಣತಿ ಸಮೀಕ್ಷೆಗೆ ಶ್ರಮವಹಿಸಬೇಕಾಗಿರುತ್ತದೆ..