ಚಿಕ್ಕೋಡಿ 07: ತಾಲೂಕಿನ ಸುಕ್ಷೇತ್ರ ತೋರಣಹಳ್ಳಿ ಹನುಮಾನ ದೇವಸ್ಥಾನಕ್ಕೆ ಮಹಾರಾಷ್ಟ್ರದ ವೈದ್ಯಕೀಯ ಸಚಿವ ಹಸನ ಮುಶ್ರೀಪ್ ಭೇಟಿ ನೀಡಿ ಹನುಮಾನ ದೇವರ ದರ್ಶನ ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಭಾಗದ ಜನರ ಜೊತೆ ಮತ್ತು ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಮನೆತನದ ಮೇಲೆ ಒಳ್ಳೆಯ ಸಂಬಂಧ ಇದೆ. ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಬೇಡಿಕೆ ಅನುಸಾರ ಕರ್ನಾಟಕಕ್ಕೆ ಹಂತ ಹಂತವಾಗಿ ಕೃಷ್ಣಾ ನದಿಗೆ ನೀರು ಬಿಡಲಾಗುತ್ತದೆ. ಕಳೆದ ಒಂದು ವಾರದ ಹಿಂದೆ ಹುಕ್ಕೇರಿ ಅವರು ದೂರವಾಣಿ ಕರೆ ಮಾಡಿ ರಾಜಾಪೂರ ಬ್ಯಾರೇಜ್ ಮೂಲಕ ನೀರು ಬಿಡಲು ಮನವಿ ಮಾಡಿದ್ದಾರೆ ಎಂದರು.
ಕೆಲವು ತಿಂಗಳ ಹಿಂದೆ ನನ್ನ ಜೀವನದಲ್ಲಿ ದೊಡ್ಡ ಸಂಕಟ ಬಂದಿತ್ತು, ಒಬ್ಬರು ವ್ಯಕ್ತಿ ಕರ್ನಾಟಕ ಗಡಿ ಭಾಗದ ತೋರಣಹಳ್ಳಿ ದೇವಸ್ಥಾನಕ್ಕೆ ಹೋಗಿ ಅಂತ ಹೇಳಿದರು. ಹಾಗಾಗಿ ನಾನು ಈ ಶ್ರೀ ಹನುಮಾನ ಮಂದಿರಕ್ಕೆ ಆರು ವಾರ ಶನಿವಾರ ಬರುವ ಹರಕೆ ಮಾಡಿದ್ದೇನೆ. ಹಾಗಾಗಿ ನನ್ನ ಮೇಲೆ ಬಂದಿರುವ ಸಂಕಟ ದೂರವಾಗಿದೆ. ಈ ದೇವಸ್ಥಾನದ ಅಭಿವೃದ್ಧಿಗಾಗಿ ಅನುದಾನ ನೀಡಿ ಅಭಿವೃದ್ಧಿಗಾಗಿ ಕೈಜೋಡಿಸುತ್ತಿದ್ದೇನೆ ಎಂದರು.
ಶಾಸಕ ಗಣೇಶ ಹುಕ್ಕೇರಿ ಮಾತನಾಡಿ ಮಹಾ ಸಚಿವರಾದ ಹಸನ್ ಮುಶ್ರೀಪ್ ಅವರು ಹನುಮಾನ ದೇವಸ್ಥಾನಕ್ಕೆ ಬಂದು ದರ್ಶನ ಪಡೆಯುತ್ತಿರುವುದು ಸಂತಸವಾಗುತ್ತದೆ. ಈ ದೇವಸ್ಥಾನದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸುತ್ತೇವೆ. ಈಗಾಗಲೇ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ದೇವಸ್ಥಾನದ ಅಭಿವೃದ್ಧಿಗೆ 40 ಲಕ್ಷ ರೂ. ಅನುದಾನ ಕೊಟ್ಟಿದ್ದಾರೆ. ಅನ್ನಪೂರ್ಣೇಶ್ವರಿ ಫೌಂಡೇಶನ ಮೂಲಕ ಪ್ರತಿ ಶನಿವಾರ ಮತ್ತು ಅಮವಾಸ್ಯೆ ದಿನದಂದು 10 ಸಾವಿರ ಜನರಿಗೆ ಮಹಾಪ್ರಸಾದ ನಡೆಯುತ್ತದೆ ಎಂದರು.
ಚಿಕ್ಕೋಡಿ ಪುರಸಭೆ ಸದಸ್ಯ ಅನಿಲ ಮಾನೆ, ಗುಲಾಬ ಬಾಗವಾನ, ರಾಜು ಸೊಲ್ಲಾಪೂರೆ, ಬಸು ಮಾಳಗೆ, ಕುಮಾರ ಪಾಟೀಲ, ಅನಿಲ ಪಾಟೀಲ ಮುಂತಾದವರು ಇದ್ದರು.
ದೇವಸ್ಥಾನದ ಕಮೀಟಿ ಸದಸ್ಯರು ಮತ್ತು ಶಾಸಕ ಗಣೇಶ ಹುಕ್ಕೇರಿ ಅವರು ಮಹಾರಾಷ್ಟ್ರ ಸಚಿವ ಹಸನ ಮುಶ್ರೀಪ ಅವರನ್ನು ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು.