ಬ್ಯಾಡಗಿ ಮಾರುಕಟ್ಟೆ: ಲಕ್ಷ ಚೀಲ ದಾಟಿದ ಮೆಣಸಿನಕಾಯಿ ಆವಕ

ಬ್ಯಾಡಗಿ 09:ಸ್ಥಳೀಯ ಕೃಷಿಉತ್ಪನ್ನ ಮಾರುಕಟ್ಟೆಯಲ್ಲಿ ಆವಕಿನಲ್ಲಿ ದಿಢೀರ್ ಹೆಚ್ಚಳವಾಗಿದ್ದು ಸೋಮವಾರ (ಜ.8)ಲಕ್ಷಕ್ಕೂ ಅಧಿಕ ಚೀಲ ಮಾರುಕಟ್ಟೆಗೆ ಅಗಮಿಸಿದ್ದು ಪ್ರಸಕ್ತವರ್ಷದಲ್ಲಿ ಮೊದಲ ಬಾರಿಗೆ ಲಕ್ಷದ ಗಡಿ ದಾಟಿದೆ, ಆದರೆ ದರಗಳಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಕಾಣದೇ ಕಡ್ಡಿ, ಡಬ್ಬಿ ಮತ್ತು ಗುಂಟೂರು ತಳಿ ದರಗಳಲ್ಲಿ ಸ್ಥಿರತೆ ಮುಂದುವರೆದಿದೆ. 

 ಕಳೆದ ಸೋಮವಾರ (ಜ.4) 95 ಸಾವಿರ ಚೀಲಗಳಷ್ಟು ಆವಕವಾಗಿದ್ದು ಲಕ್ಷದ ಅಂಕಿಯನ್ನು ಸಮೀಪಿಸಿತ್ತು, ಆದರೆ 3 ದಿನಗಳಲಿ ದಿಢೀರ್ ಚೇತರಿಕೆ ಕಂಡುಕೊಂಡ ಮಾರುಕಟ್ಟೆಗೆ ಗುರುವಾರ 1.10 ಲಕ್ಷಕ್ಕೂ ಅಧಿಕ ಚೀಲಗಳು ಮಾರಾಟಕ್ಕೆ ಲಭ್ಯ ವಿದ್ದವು. 

ಮಳೆಯ ವಾತಾವರಣ: ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ವ್ಯಾಪಾರಸ್ಥರು ಮಳೆಯಾಗುವ ನೀರಿಕ್ಷೆಯಲ್ಲಿದ್ದರು, ಪ್ರತಿಕೂಲ ಹವಾಮಾನದಿಂದ ರೈತರು ದರಗಳಲ್ಲಿ ಹಿನ್ನೆಡೆಯಾಗುವ ಭಯದಲ್ಲಿದ್ದರು, ಬಳಿಕ ಹವಾ ಮಾ ನದಲ್ಲಿ ಬದಲಾವಣೆಗೊಂಡು ಬೆಳಿಗ್ಗೆ 10 ಗಂಟೆಯ ಬಳಿಕ ಬಿಸಿಲು ಆರಂಭವಾಯಿತು, ವರ್ತಕರು ಎಂದಿನಂತೆ ನಿರ್ಭಯವಾಗಿ ಟೆಂಡರ್ ಹಾಕಲು ಮುಂದಾದರು. 

 ಕಡ್ಡಿತಳಿ ಪ್ರತಿ ಕ್ವಿಂಟಲ್‌ಗೆ ಸರಾಸರಿ ರೂ.39 ಸಾವಿರದವರೆಗೆ ಮಾರಾಟವಾದರೇ, ಡಬ್ಬಿತಳಿ 41 ಸಾವಿರ ಹಾಗೂ ಗುಂಟೂರ ತಳಿ ರೂ.16 ಸಾವಿರ ಸರಾಸರಿ ದರದಲ್ಲಿ ಬಿಕರಿಗೊಂಡವು, ಗುಣಮಟ್ಟದ ಕಡ್ಡಿ ತಳಿ ರೂ.59 ಸಾವಿರ, ಡಬ್ಬಿತಳಿ ರೂ.60 ಸಾವಿರಕ್ಕೆ ಮಾರಾಟವಾಗಿದ್ದು ಇಂದಿನ ವಿಶೇಷವಾಗಿತ್ತು. 

ಆವಕಿನಲ್ಲಿ 15 ಸಾವಿರ ಚೀಲಗಳಷ್ಟು ಏರಿಕೆ: ಕಳೆದ ಗುರುವಾರ (ಜ.4) 95 ಸಾವಿರ ಚೀಲಗಳಿಷ್ಟಿದ್ದ ಆವಕ ಇಂದು ಸೋಮವಾರ (ಜ.8) ಒಟ್ಟು 110818 ಚೀಲ ಮೆಣಸಿನಕಾಯಿ ಆವಕವಾಗಿದೆ, ಒಟ್ಟು 280 ಕಮೀಶನ್ ಎಜೆಂಟ್‌ರ ಅಂಗಡಿ ಗಳಲ್ಲಿ ಮೆಣಸಿನಕಾಯಿ ಮಾರಾಟಕ್ಕೆ ಲಭ್ಯವಿದ್ದು, ಒಟ್ಟು 341 ವರ್ತಕರು ಟೆಂಡರ್‌ನಲ್ಲಿ ಪಾಲ್ಗೊಂಡಿದ್ದಾಗಿ ಮಾರುಕಟ್ಟೆ ಮೂಲಗಳು ದೃಡಪಡಿಸಿವೆ. 

ಗುರುವಾರ ಮಾರುಕಟ್ಟೆ ದರ: ಗುರುವಾರ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ 3129 ಗರಿಷ್ಠ 50091 ಸರಾಸರಿ 38729, ಡಬ್ಬಿತಳಿ ಕನಿಷ್ಠ 3509 ಗರಿಷ್ಠ 60786 ಸರಾಸರಿ 41589, ಗುಂಟೂರು ಕನಿಷ್ಠ 1609 ಗರಿಷ್ಟ 19109 ಸರಾಸರಿ 15799 ರೂ.ಗಳಿಗೆ ಮಾರಾಟವಾಗಿವೆ.