ಭದ್ರತಾ ಕಾರಣಗಳಿಗಾಗಿ ಶ್ರೀಲಂಕಾದಲ್ಲಿ 'ಬುರ್ಖಾ ಹಿಜಾಬ್ ನಿಷೇಧ


ಕೊಲಂಬೋ, ಏ 29  ತುರ್ತು  ನಿರ್ಬಂಧಗಳಡಿಯಲ್ಲಿ ಸೋಮವಾರ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ರಾಷ್ಟ್ರೀಯ ಮತ್ತು ಸಾರ್ವಜನಿಕ ಭದ್ರತೆಗೆ ಅಪಾಯವನ್ನುಂಟು ಮಾಡುವಂತಹ ಎಲ್ಲಾ ರೀತಿಯ ಮುಖ ಪರದೆಗಳನ್ನು ಬಳಸುವುದರ ಮೇಲೆ ನಿಷೇಧ ಹೇರಿದ್ದಾರೆ. 

ಜನರ ಗುರುತನ್ನು ಸ್ಪಷ್ಟವಾಗಿ ತಿಳಿಯಲು ಈನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. 

ಈಸ್ಟರ್ ಭಾನುವಾರದ ದಿನ ದೇಶದಲ್ಲಿ ನಡೆದ ಸರಣಿ ಆತ್ಮಹತ್ಯಾ ಬಾಂಬ್ ಸ್ಫೋಟಕ್ಕೆ 250 ನಾಗರಿಕರು ಸಾವನ್ನಪ್ಪಿದ ಬಳಿಕ ಈ ಘೋಷಣೆ ಮಾಡಲಾಗಿದೆ.  

ವ್ಯಕ್ತಿಯ ಗುರುತನ್ನು ಸ್ಪಷ್ಟವಾಗಿ ತಿಳಿಯಲು ಮುಖ ಪ್ರದಶರ್ಿಸುವುದು ಅತ್ಯಗತ್ಯ ಎಂದು ಅವರು ತಿಳಿಸಿರುವುದಾಗಿ ಕೊಲಂಬೋ ಪೇಜ್ ವರದಿ ಮಾಡಿದೆ. 

ಪ್ರಧಾನಿ ರಣಿಲ್ ವಿಕ್ರಮ್ ಸಿಂಘೆ ಅವರ ಸಲಹೆಯ ಮೇರೆಗೆ ಈ ಸಂಬಂಧ ಇಸ್ಲಾಮಿಕ್ ವಿದ್ವಾಂಸರೊಂದಿಗೆ ಮಾತುಕತೆ ನಡೆಯುವವರೆಗೂ ಈ ನಿಧರ್ಾರ ಜಾರಿ ವಿಳಂಬವಾಗಲಿದೆ 

ಯಾವುದೇ ಸಮುದಾಯದ ಜನರಿಗೆ ಅನಾನುಕೂಲವಾಗದಂತೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಖಾತರಿಪಡಿಸುವ ಶಾಂತಿಯುತ ಮತ್ತು ಸಂಘಟಿತ ಸಮಾಜವನ್ನು ಸ್ಥಾಪಿಸಲು ಅಧ್ಯಕ್ಷರು ಈನಿರ್ಧಾರ್  ಕೈಗೊಂಡಿದ್ದಾರೆ. 

ದೇಶಾದ್ಯಂತ ಶ್ರೀಲಂಕಾ ಭದ್ರತಾ ಪಡೆ ಅಳವಡಿಸಿರುವ ತಪಾಸಣಾ ಕೇಂದ್ರಗಳಲ್ಲಿ ಕಳೆದ 24 ಗಂಟೆಗಳಲ್ಲಿ 48 ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. 

ಅಧಿಕಾರಿಗಳು ಇತ್ತೀಚೆಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಮನವಿ ಸಲ್ಲಿಸಿದ ಇಬ್ಬರು ವ್ಯಕ್ತಿಗಳು ಕೂಡ ಇದರಲ್ಲಿ ಸೇರಿದ್ದಾರೆ. 

ದಾಳಿಯ ಬಳಿಕ ದ್ವೀಪ ರಾಷ್ಟ್ರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಮತ್ತಷ್ಟು ದಾಳಿಯ ಸಾಧ್ಯತೆಯ ಆತಂಕ ಜನರಲ್ಲಿ ಮನೆ ಮಾಡಿದೆ. 

ಭಾನುವಾರ ಅಲ್ಲಿನ ಸಕರ್ಾರ ನ್ಯಾಷನಲ್ ತೌಹೀದ್ ಜಮಾಅತ್ (ಎನ್ಜೆಟಿ) ಮತ್ತು ಜಮಾತೆ ಮಿಲ್ಲತ್ ಇಬ್ರಾಹೀಮ್ (ಜೆಎಂಐ) ಉಗ್ರ ಸಂಘಟನೆಗಳನ್ನು ನಿಷೇಧಿಸಿತ್ತು.